ಮಂಗಳೂರು: ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂದೂರ್ ವೆಲ್ ನ ಅಪಾರ್ಟ್ ಮೆಂಟ್ ವೊಂದರ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ದಂಧೆಗೆ ಯುವತಿಯರನ್ನು/ಮಹಿಳೆಯರನ್ನು ಒದಗಿಸುತ್ತಿದ್ದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ಮಾ 1ರ ಮಂಗಳವಾರದಂದು ದಾಳಿ ನಡೆಸಿ ಸುಬ್ರಹ್ಮಣ್ಯದ ಯುವತಿ ಸೇರಿ ಮೂವರು ಪಿಂಪ್ ಗಳನ್ನು ವಶಕ್ಕೆ ಪಡೆದುಕೊಂಡು ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.
ಮಂಗಳೂರು ನಗರದ ಪೂರ್ವ( ಕದ್ರಿ ) ಪೋಲಿಸ್ ಠಾಣಾ ವ್ಯಾಪ್ತಿಯ ಬೆಂದೂರ್ ವೆಲ್ 3 ನೇ ಕ್ರಾಸ್ ರಸ್ತೆಯಲ್ಲಿರುವ ಪೀಬಿ ರೆಸಿಡೆನ್ಸಿ ಎಂಬ ಅಪಾರ್ಟ್ ಮೆಂಟ್ ನ 2 ನೇ ಮಹಡಿಯ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಅವರ ನೇತೃತ್ವದ ತಂಡ ದಾಳಿ ನಡೆಸಿದ್ದರು.
ಈ ವೇಳೆ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಹುಡುಗಿಯರನ್ನು ತರಿಸಿಕೊಂಡು ಅನೈತಿಕ ಚಟುವಟಿಕೆ ದಂಧೆಯನ್ನು ನಡೆಸುತ್ತಿದ್ದ ದಲ್ಲಾಳಿಗಳಾದ ಬಂಟ್ವಾಳ ವಿಟ್ಲಪಡ್ನೂರು ಗ್ರಾಮ ಪರ್ತಿಪಾಡಿಯ ಕೆ.ಪಿ. ಹಮೀದ್ (54), ಆಕಾಶಭವನ ನಂದನಪುರದ ಅನುಪಮಾ ಶೆಟ್ಟಿ(46), ಸುಬ್ರಹ್ಮಣ್ಯ ಕುಲ್ಕುಂದದ ನಿವಾಸಿ ಎಕ್ಕೂರು ವಾಸುಕಿ ನಗರದಲ್ಲಿ ವಾಸವಿರುವ ನಿಶ್ಮಿತಾ (23) ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಂದ 5 ಮೊಬೈಲ್ ಫೋನುಗಳು ಹಾಗೂ 50,000 ರೂ. ನಗದು, ಮಾರುತಿ 800 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿಲಾಗಿದೆ.
Discussion about this post