• About us
  • Contact us
  • Disclaimer
Sunday, June 7, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಟೋಕಿಯೋ ಒಲಂಪಿಕ್ಸ್ – ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಕೊಟ್ಟ ಪಿವಿ ಸಿಂಧೂ

Coastal Times by Coastal Times
August 2, 2021
in ಕ್ರೀಡಾ ಸುದ್ದಿ
ಟೋಕಿಯೋ ಒಲಂಪಿಕ್ಸ್ – ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಕೊಟ್ಟ ಪಿವಿ ಸಿಂಧೂ
0
VIEWS
WhatsappTelegramShare on FacebookShare on Twitter

ಟೋಕಿಯೊ: ವಿಶ್ವ ಚಾಂಪಿಯನ್ ಪಿವಿ ಸಿಂಧು ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಜಯಿಸಿದರು. ಇದರಿಂದ ಮುತ್ತಿನನಗರಿಯ ಹುಡುಗಿ ಒಲಿಂಪಿಕ್ಸ್‌ನಲ್ಲಿ ಸತತ 2ನೇ ಬಾರಿಗೆ ಪದಕಕ್ಕೆ ಮುತ್ತಿಕ್ಕಿದರು. ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸದ ಸಿಂಧು ನಿರೀಕ್ಷೆಯಂತೆಯೇ ಭಾರತಕ್ಕೆ ಪದಕ ತಂದುಕೊಡುವಲ್ಲಿ ಯಶಸ್ವಿಯಾದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಹೈದರಾಬಾದ್‌ನ ಸಿಂಧು, ಇದೀಗ ಕಂಚಿನ ಪದಕದೊಂದಿಗೆ ತವರಿಗೆ ವಾಪಸಾಗಲಿದ್ದಾರೆ. ಪ್ರತಿಷ್ಠಿತ ಕೂಟದಲ್ಲಿ ಸತತ ಎರಡು ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಹಾಗೂ 2ನೇ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಇದರಿಂದ ಕೂಟದಲ್ಲಿ ಭಾರತ ಜಯಿಸಿದ ಪದಕಗಳ ಸಂಖ್ಯೆ 2ಕ್ಕೇರಿದೆ. ಇದಕ್ಕೂ ಮೊದಲು ಮೀರಾಬಾಯಿ ಚಾನು, ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಜಯಿಸಿದ್ದರು.

ಮೊದಲ ಗೇಮ್‌ನಲ್ಲಿ ಆರಂಭದಲ್ಲೇ 4-0 ಯಿಂದ ಮುನ್ನಡೆ ಸಾಧಿಸಿದ 26 ವರ್ಷದ ಸಿಂಧುಗೆ ಚೀನಾ ಆಟಗಾರ್ತಿ ತಿರುಗೇಟು ನೀಡಲು ಯತ್ನಿಸಿದರು. ಇದರಿಂದ 6-6 ರಿಂದ ಸಮಬಲ ಕಂಡಿತು. ಹಿ ಬಿಂಗ್ ಜಿಯಾವೊ ತಿರುಗೇಟು ನೀಡಲು ಯತ್ನಿಸಿದರೂ ಮೊದಲ ಗೇಮ್‌ನ ವಿಶ್ರಾಂತಿ ವೇಳೆಗೆ 11-8 ರಿಂದ ಮುನ್ನಡೆ ಸಾಧಿಸಿದರು. ಬಳಿಕ ಸತತ 4 ಅಂಕ ಕಲೆಹಾಕಿದ ಸಿಂಧು, 15-9 ರಿಂದ ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದರು. ಆಕರ್ಷಕ ಸ್ಮ್ಯಾಷ್‌ಗಳೊಂದಿಗೆ ಮೊದಲ ಗೇಮ್‌ನ್ನು 21-13 ರಿಂದ ವಶಪಡಿಸಿಕೊಂಡರು. ಎರಡನೇ ಗೇಮ್‌ನಲ್ಲೂ ಅದೇ ಲಯ ಮುಂದುವರಿಸಿದ ಸಿಂಧು, ಆರಂಭಿಕ ಹಂತದಲ್ಲಿ 8-7 ರಿಂದ ಅಲ್ಪಮುನ್ನಡೆ ಕಂಡರೂ ಪಂದ್ಯ ಸಾಗುತ್ತಿದ್ದಂತೆ ಸತತವಾಗಿ ಅಂಕಗಳನ್ನು ಕಲೆಹಾಕಿದರು. ಸಿಂಧು ಆಕ್ರಮಣಕಾರಿ ನಿರ್ವಹಣೆಗೆ ಚೀನಾ ಆಟಗಾರ್ತಿ ತಲೆಬಾಗಿದರು. ಎರಡನೇ ಗೇಮ್‌ನ್ನು 21-15 ರಿಂದ ಸುಲಭವಾಗಿ ಒಲಿಸಿಕೊಂಡರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಚೀನಾದ 18 ರಾಜ್ಯಗಳಲ್ಲಿ ಡೆಲ್ಟಾ ರೂಪಾಂತರ ಪತ್ತೆ, ಹೆಚ್ಚಿದ ಆತಂಕ

Next Post

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯದರ್ಶಿಯಾಗಿ ವಿ.ಪೊನ್ನುರಾಜ್

Related Posts

2026ರ ಫಿಫಾ ವಿಶ್ವಕಪ್​ಗೆ 26 ಸದಸ್ಯರ ಅರ್ಜೆಂಟೀನಾ ತಂಡ ಪ್ರಕಟ ಲಿಯೋನೆಲ್​ ಮೆಸ್ಸಿಗೆ ನಾಯಕ ಪಟ್ಟ
ಕ್ರೀಡಾ ಸುದ್ದಿ

2026ರ ಫಿಫಾ ವಿಶ್ವಕಪ್​ಗೆ 26 ಸದಸ್ಯರ ಅರ್ಜೆಂಟೀನಾ ತಂಡ ಪ್ರಕಟ ಲಿಯೋನೆಲ್​ ಮೆಸ್ಸಿಗೆ ನಾಯಕ ಪಟ್ಟ

May 29, 2026
32
ರಾಜ್ಯ ಮಟ್ಟದಲ್ಲಿ ಮಿಂಚಿದ ಚಿಂತನ್ ಎಸ್ ಶೆಟ್ಟಿ; ರಾಷ್ಟ್ರೀಯ ಜಲಕ್ರೀಡಾಕೂಟಕ್ಕೆ ಕರ್ನಾಟಕ ತಂಡಕ್ಕೆ ಆಯ್ಕೆ
ಕರಾವಳಿ

ರಾಜ್ಯ ಮಟ್ಟದಲ್ಲಿ ಮಿಂಚಿದ ಚಿಂತನ್ ಎಸ್ ಶೆಟ್ಟಿ; ರಾಷ್ಟ್ರೀಯ ಜಲಕ್ರೀಡಾಕೂಟಕ್ಕೆ ಕರ್ನಾಟಕ ತಂಡಕ್ಕೆ ಆಯ್ಕೆ

May 16, 2026
16
Next Post
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯದರ್ಶಿಯಾಗಿ ವಿ.ಪೊನ್ನುರಾಜ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯದರ್ಶಿಯಾಗಿ ವಿ.ಪೊನ್ನುರಾಜ್

Discussion about this post

Recent News

ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿ, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿ, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

June 7, 2026
0
ಬಂಟ್ವಾಳ: ಕಾರಿನಲ್ಲಿ 7.64 ಲಕ್ಷ ಮೌಲ್ಯದ ಎಂಡಿಎಂಎ ಸಾಗಾಟ ಮೂವರು ಅರೆಸ್ಟ್

ಬಂಟ್ವಾಳ: ಕಾರಿನಲ್ಲಿ 7.64 ಲಕ್ಷ ಮೌಲ್ಯದ ಎಂಡಿಎಂಎ ಸಾಗಾಟ ಮೂವರು ಅರೆಸ್ಟ್

June 6, 2026
50
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿ, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿ, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

June 7, 2026
ಬಂಟ್ವಾಳ: ಕಾರಿನಲ್ಲಿ 7.64 ಲಕ್ಷ ಮೌಲ್ಯದ ಎಂಡಿಎಂಎ ಸಾಗಾಟ ಮೂವರು ಅರೆಸ್ಟ್

ಬಂಟ್ವಾಳ: ಕಾರಿನಲ್ಲಿ 7.64 ಲಕ್ಷ ಮೌಲ್ಯದ ಎಂಡಿಎಂಎ ಸಾಗಾಟ ಮೂವರು ಅರೆಸ್ಟ್

June 6, 2026
15 ತಿಂಗಳಿಗೆ ಹಣ ಡಬಲ್‌! ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹ, ಆದಿತ್ಯರಾಜ ಕ್ಯಾಪಿಟಲ್‌ ಮೇಲೆ ಪೊಲೀಸರ ದಾಳಿ

15 ತಿಂಗಳಿಗೆ ಹಣ ಡಬಲ್‌! ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹ, ಆದಿತ್ಯರಾಜ ಕ್ಯಾಪಿಟಲ್‌ ಮೇಲೆ ಪೊಲೀಸರ ದಾಳಿ

June 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d