• About us
  • Contact us
  • Disclaimer
Tuesday, September 1, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

Coastal Times by Coastal Times
July 18, 2026
in ಕ್ರೀಡಾ ಸುದ್ದಿ
ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ
22
VIEWS
WhatsappTelegramShare on FacebookShare on Twitter

ಬ್ರಿಡ್ಜ್‌ಟೌನ್: ವೆಸ್ಟ್ ಇಂಡೀಸ್‌ ತಂಡದ ಮಾಜಿ ನಾಯಕ, ವಿಶ್ವ ಕ್ರಿಕೆಟ್‌ನ ದಿಗ್ಗಜ ಆಲ್‌ರೌಂಡರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಸರ್ ಗಾರ್ಫೀಲ್ಡ್ ಸೋಬರ್ಸ್ (Sir Garfield Sobers) ತಮ್ಮ 89 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಸೋಬರ್ಸ್ ಇಂದು ನಿಧನರಾಗಿದ್ದಾರೆ. ಜುಲೈ 28 ರಂದು 90ನೇ ವರ್ಷಕ್ಕೆ ಕಾಲಿಡಬೇಕಿದ್ದ ಸೋಬರ್ಸ್ ತಮ್ಮ ಹುಟ್ಟುಹಬ್ಬಕ್ಕೆ 11 ದಿನಗಳ ಮೊದಲು ಅಂದರೆ ಜುಲೈ 17 ರಂದು ಕೊನೆಯುಸಿರೆಳಿದಿದ್ದಾರೆ. ಬಾರ್ಬಡೋಸ್‌ನಿಂದ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದ ಗ್ಯಾರಿ ಸೋಬರ್ಸ್ ದೀರ್ಘಕಾಲದವರೆಗೆ ವೆಸ್ಟ್ ಇಂಡೀಸ್‌ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು.

ತಲೆಮಾರುಗಳನ್ನು ಮೀರಿದ ಪರಂಪರೆಯನ್ನು ಬಿಟ್ಟುಹೋದ ವೆಸ್ಟ್ ಇಂಡೀಸ್‌ನ ಮಾಜಿ ನಾಯಕನ ನಿಧನವನ್ನು ಅವರ ಮಗ ಡೇನಿಯಲ್ ದೃಢಪಡಿಸಿದ್ದಾರೆ. 1936ರಲ್ಲಿ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಜನಿಸಿದ ಸೋಬರ್ಸ್ ಇನ್ನು 11 ದಿನಗಳಲ್ಲಿ ತಮ್ಮ 90ನೇ ವರ್ಷಕ್ಕೆ ಕಾಲಿಡಲಿದ್ದರು. ಶ್ರೇಷ್ಠ ಆಲ್‌ರೌಂಡರ್​​​ಗಳಲ್ಲಿ ಒಬ್ಬರಾದ ಸೋಬರ್ಸ್ ಮಾರ್ಚ್ 1954ರಿಂದ ಏಪ್ರಿಲ್ 1974ರ ನಡುವೆ 93 ಟೆಸ್ಟ್‌ಗಳನ್ನು ಆಡಿದ್ದರು. 57.78ರ ಸರಾಸರಿಯಲ್ಲಿ 26 ಶತಕಗಳು ಮತ್ತು 30 ಅರ್ಧಶತಕಗಳ ಸಹಿತ 8,032 ರನ್‌ಗಳನ್ನು ಗಳಿಸಿದ್ದರು.

ಸತತ 6 ಸಿಕ್ಸರ್‌ ಹೊಡೆದ ಮೊದಲ ಬ್ಯಾಟ್ಸ್‌ಮನ್ : ಸರ್ ಸೋಬರ್ಸ್ 1965 ರಿಂದ 1972 ರವರೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕರಾಗಿದ್ದರು, ಈ ಅವಧಿಯಲ್ಲಿ 39 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು. ಇದಲ್ಲದೆ, ಯಾವುದೇ ರೀತಿಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಹೊಡೆದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಅವರ ಹೆಸರಿನಲ್ಲಿದೆ. ಕಾರ್ಡಿಫ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಅವರು ಈ ಐತಿಹಾಸಿಕ ಸಾಧನೆ ಮಾಡಿದ್ದರು.

ಎಡಗೈ ಬ್ಯಾಟರ್​ ಆಗಿದ್ದ ಸೋಬರ್ಸ್ ಅವರು, ಎಡಗೈ ವೇಗ, ರಿಸ್ಟ್​​ ಸ್ಪಿನ್ ಮತ್ತು ಸಾಂಪ್ರದಾಯಿಕ ಸ್ಪಿನ್ ಅನ್ನು ಸಹ ಬೌಲಿಂಗ್ ಮಾಡಬಲ್ಲರಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 235 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರು ಏಕೈಕ ಏಕದಿನ ಪಂದ್ಯವನ್ನು ಆಡಿದ್ದು, ಒಂದು ವಿಕೆಟ್ ಪಡೆದಿದ್ದರು. ಜೊತೆಗೆ, ಸೋಬರ್ಸ್​​ ಅದ್ಭುತ ಫೀಲ್ಡರ್ ಕೂಡ ಆಗಿದ್ದರು.

1968ರಲ್ಲಿ ಗ್ಲಾಮೋರ್ಗನ್ ವಿರುದ್ಧ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡುವಾಗ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟರ್​ ಆಗಿ ಹೊರಹೊಮ್ಮಿದ್ದರು. ಸೋಬರ್ಸ್ 1965 ಮತ್ತು 1972ರ ನಡುವೆ 39 ಟೆಸ್ಟ್‌ಗಳಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕತ್ವ ವಹಿಸಿದ್ದರು. ಒಂಬತ್ತು ಗೆಲುವುಗಳು, 20 ಡ್ರಾಗಳು ಮತ್ತು 10ರಲ್ಲಿ ಸೋಲು ಕಂಡರು.

16ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, ಒಂದು ವರ್ಷದ ಬಳಿಕ ಇಂಗ್ಲೆಂಡ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು. 1958ರ ಫೆಬ್ರವರಿಯಲ್ಲಿ ಕಿಂಗ್‌ಸ್ಟನ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋಬರ್ಸ್ ತಮ್ಮ 23 ನೇ ವಯಸ್ಸಿನಲ್ಲಿ ಚೊಚ್ಚಲ ಶತಕ (365 ರನ್​​, 38 ಬೌಂಡರಿಗಳು) ಗಳಿಸಿದ್ದರು. ಆ ಸಮಯದಲ್ಲಿ ಯಾವುದೇ ಬ್ಯಾಟರ್​​ ಗಳಿಸಿದ ಅತ್ಯಧಿಕ ಟೆಸ್ಟ್ ಸ್ಕೋರ್ ಇದಾಗಿತ್ತು. ಇದು 36 ವರ್ಷಗಳ ಕಾಲ ಅತ್ಯಧಿಕ ವೈಯಕ್ತಿಕ ಟೆಸ್ಟ್ ಸ್ಕೋರ್ ಆಗಿತ್ತು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

Next Post

ಮೂಡಬಿದ್ರೆ ಬಸ್ ನಿಲ್ದಾಣದಲ್ಲಿ ತಲ್ವಾರ್ ಹಿಡಿದು ಯುವಕನ ರಂಪಾಟ: ಮೊಬೈಲ್ ಶಾಪ್‌ಗೆ ನುಗ್ಗಿ ಬೆದರಿಕೆ, ಯುವಕನ ಬಂಧನ

Related Posts

ಕ್ರಿಕೆಟ್ ಆಸ್ಟ್ರೇಲಿಯಾ ಅನಯಾ ಬಂಗಾರ್​ಗೆ ಆಡುವ ಅವಕಾಶ; ಮಹಿಳಾ ಆಟಗಾರ್ತಿಯರ ವಿರೋಧ
ಕ್ರೀಡಾ ಸುದ್ದಿ

ಕ್ರಿಕೆಟ್ ಆಸ್ಟ್ರೇಲಿಯಾ ಅನಯಾ ಬಂಗಾರ್​ಗೆ ಆಡುವ ಅವಕಾಶ; ಮಹಿಳಾ ಆಟಗಾರ್ತಿಯರ ವಿರೋಧ

August 29, 2026
43
ಕಾಮನ್‌ವೆಲ್ತ್ ಕ್ರೀಡಾಕೂಟ: 57 ಕೆಜಿ ಹಾಗೂ 54 ಕೆಜಿ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಗೆದ್ದ ಪ್ರೀತಿ, ಜೈಸ್ಮಿನ್​!
ಕ್ರೀಡಾ ಸುದ್ದಿ

ಕಾಮನ್‌ವೆಲ್ತ್ ಕ್ರೀಡಾಕೂಟ: 57 ಕೆಜಿ ಹಾಗೂ 54 ಕೆಜಿ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಗೆದ್ದ ಪ್ರೀತಿ, ಜೈಸ್ಮಿನ್​!

August 1, 2026
21
Next Post
ಮೂಡಬಿದ್ರೆ ಬಸ್ ನಿಲ್ದಾಣದಲ್ಲಿ ತಲ್ವಾರ್ ಹಿಡಿದು ಯುವಕನ ರಂಪಾಟ: ಮೊಬೈಲ್ ಶಾಪ್‌ಗೆ ನುಗ್ಗಿ ಬೆದರಿಕೆ, ಯುವಕನ ಬಂಧನ

ಮೂಡಬಿದ್ರೆ ಬಸ್ ನಿಲ್ದಾಣದಲ್ಲಿ ತಲ್ವಾರ್ ಹಿಡಿದು ಯುವಕನ ರಂಪಾಟ: ಮೊಬೈಲ್ ಶಾಪ್‌ಗೆ ನುಗ್ಗಿ ಬೆದರಿಕೆ, ಯುವಕನ ಬಂಧನ

Discussion about this post

Recent News

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್​ 1 ರಿಂದ ಕನಿಷ್ಠ ದರ 40 ರೂ.ಗೆ ಏರಿಕೆ, ಜಿಲ್ಲಾಧಿಕಾರಿ ಆದೇಶ

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್​ 1 ರಿಂದ ಕನಿಷ್ಠ ದರ 40 ರೂ.ಗೆ ಏರಿಕೆ, ಜಿಲ್ಲಾಧಿಕಾರಿ ಆದೇಶ

August 31, 2026
42
ಮಂಗಳೂರು: ಮೊಬೈಲ್ ವಿಚಾರಕ್ಕೆ ಹತ್ಯೆ ; ಚಾಕುವಿನಿಂದ ಇರಿದು ಅಣ್ಣನ ಹತ್ಯೆಗೈದ ತಮ್ಮನ ಬಂಧನ

ಮಂಗಳೂರು: ಮೊಬೈಲ್ ವಿಚಾರಕ್ಕೆ ಹತ್ಯೆ ; ಚಾಕುವಿನಿಂದ ಇರಿದು ಅಣ್ಣನ ಹತ್ಯೆಗೈದ ತಮ್ಮನ ಬಂಧನ

August 31, 2026
23
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್​ 1 ರಿಂದ ಕನಿಷ್ಠ ದರ 40 ರೂ.ಗೆ ಏರಿಕೆ, ಜಿಲ್ಲಾಧಿಕಾರಿ ಆದೇಶ

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್​ 1 ರಿಂದ ಕನಿಷ್ಠ ದರ 40 ರೂ.ಗೆ ಏರಿಕೆ, ಜಿಲ್ಲಾಧಿಕಾರಿ ಆದೇಶ

August 31, 2026
ಮಂಗಳೂರು: ಮೊಬೈಲ್ ವಿಚಾರಕ್ಕೆ ಹತ್ಯೆ ; ಚಾಕುವಿನಿಂದ ಇರಿದು ಅಣ್ಣನ ಹತ್ಯೆಗೈದ ತಮ್ಮನ ಬಂಧನ

ಮಂಗಳೂರು: ಮೊಬೈಲ್ ವಿಚಾರಕ್ಕೆ ಹತ್ಯೆ ; ಚಾಕುವಿನಿಂದ ಇರಿದು ಅಣ್ಣನ ಹತ್ಯೆಗೈದ ತಮ್ಮನ ಬಂಧನ

August 31, 2026
ಮಧ್ಯರಾತ್ರಿ ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ

ಮಧ್ಯರಾತ್ರಿ ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ

August 31, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d