• About us
  • Contact us
  • Disclaimer
Tuesday, September 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮೂಡಬಿದ್ರೆ ಬಸ್ ನಿಲ್ದಾಣದಲ್ಲಿ ತಲ್ವಾರ್ ಹಿಡಿದು ಯುವಕನ ರಂಪಾಟ: ಮೊಬೈಲ್ ಶಾಪ್‌ಗೆ ನುಗ್ಗಿ ಬೆದರಿಕೆ, ಯುವಕನ ಬಂಧನ

Coastal Times by Coastal Times
July 19, 2026
in ಕ್ರೈಮ್ ನ್ಯೂಸ್
ಮೂಡಬಿದ್ರೆ ಬಸ್ ನಿಲ್ದಾಣದಲ್ಲಿ ತಲ್ವಾರ್ ಹಿಡಿದು ಯುವಕನ ರಂಪಾಟ: ಮೊಬೈಲ್ ಶಾಪ್‌ಗೆ ನುಗ್ಗಿ ಬೆದರಿಕೆ, ಯುವಕನ ಬಂಧನ
95
VIEWS
WhatsappTelegramShare on FacebookShare on Twitter

ಮಂಗಳೂರು, ‌ಜುಲೈ 18: ಕುಡಿದ ಮತ್ತಿನಲ್ಲಿ ಯುವಕನೊಬ್ಬ ಕೈಯಲ್ಲಿ ಮಚ್ಚು ಹಿಡಿದುಕೊಂಡು ಮೂಡುಬಿದ್ರೆ ಬಸ್ ನಿಲ್ದಾಣದಲ್ಲಿ ಅಡ್ಡಾಡುತ್ತಾ ಜನರಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದ್ದು ಬಳಿಕ ಸ್ಥಳೀಯರೇ ಸೇರಿ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಬಂಟ್ವಾಳ ತಾಲೂಕಿನ ವಾಮನಪದವು ಬಳಿಯ ಅಜ್ಜಿಬೆಟ್ಟು ನಿವಾಸಿ ರಾಜೇಶ್ (22) ಎಂದು ಯುವಕನನ್ನು ಗುರುತಿಸಲಾಗಿದ್ದು ಮೂಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಪರೀತ ಕುಡಿತದ ಚಟ ಹೊಂದಿದ್ದು ಕಂಠಪೂರ್ತಿ ಕುಡಿದು ಈ ಕೃತ್ಯ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಯುವಕ ಕೈಯಲ್ಲಿ ಮಚ್ಚು ಹಿಡಿದು ಅತ್ತಿತ್ತ ಹೋಗಿದ್ದು ಬಳಿಕ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಶಾಪ್ ಗೆ ಬಂದು ಅಲ್ಲಿದ್ದವರಿಗೆ ಬೆದರಿಕೆ ಹಾಕಿದ್ದಾನೆ. ಯುವಕನ ಓಡಾಟದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್​​​ನಲ್ಲಿ ಸೆರೆಹಿಡಿದಿದ್ದಾರೆ.

ಬಸ್ ನಿಲ್ದಾಣದ ಆವರಣದಲ್ಲೇ ಇದ್ದ ಮೊಬೈಲ್ ಅಂಗಡಿಯಲ್ಲಿ ಗ್ರಾಹಕರು ವ್ಯಾಪಾರ ನಿರತರಾಗಿದ್ದ ಸಂದರ್ಭದಲ್ಲೇ ಆರೋಪಿ ಒಳಗೆ ನುಗ್ಗಿದ್ದಾನೆ. ಅಂಗಡಿಯ ಕೌಂಟರ್ ಬಳಿ ನುಗ್ಗಿ, ತನ್ನ ಜೀನ್ಸ್ ಪ್ಯಾಂಟ್‌ನ ಒಳಗಡೆಯಿಂದ ತಲ್ವಾರ್ ಅನ್ನು ಹೊರಗೆ ಎಳೆದಿದ್ದಾನೆ. ಅಲ್ಲದೇ ಕೌಂಟರ್‌ನಲ್ಲಿದ್ದ ಸಿಬ್ಬಂದಿಗೆ ತಲ್ವಾರ್ ತೋರಿಸಿ ಹೆದರಿಸುತ್ತಾ, ತಕ್ಷಣವೇ ತನಗೆ ಮೊಬೈಲ್ ಕೊಡುವಂತೆ ಅಬ್ಬರಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, ಕೌಂಟರ್ ಒಳಗಿದ್ದ ಮಳಿಗೆಯ ಸಿಬ್ಬಂದಿಯತ್ತ ತಲ್ವಾರ್ ತೋರಿಸಿ ಬೆದರಿಸಿದ್ದಾನೆ. ಈ ವೇಳೆ ಅಂಗಡಿಯಲ್ಲಿದ್ದ ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿ ದೂರ ಸರಿದಿದ್ದಾರೆ. ಆದರೆ ಅಂಗಡಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ಯುವಕನನ್ನು ಎದುರಿಸಿ, ಆತನ ಕೈಯಲ್ಲಿದ್ದ ತಲ್ವಾರ್ ಅನ್ನು ಬಲವಂತವಾಗಿ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯು ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ, ತಲ್ವಾರ್ ಬೀಸಿ ಸಾರ್ವಜನಿಕ ಶಾಂತಿ ಕದಡಿದ್ದ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಆರೋಪಿಯನ್ನು ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಆತ ಈ ಕೃತ್ಯವನ್ನು ಯಾವ ಉದ್ದೇಶಕ್ಕಾಗಿ ಎಸಗಿದ್ದಾನೆ ಹಾಗೂ ಆತನ ಹಿನ್ನೆಲೆ ಏನು ಎಂಬ ಕುರಿತು ತನಿಖೆ ಮುಂದುವರೆದಿದೆ. ತಲ್ವಾರ್ ಬೀಸಿ ದಾಂಧಲೆಗೆ ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

Next Post

FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

Related Posts

ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ
ಕ್ರೈಮ್ ನ್ಯೂಸ್

ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ

September 5, 2026
28
ಮಂಗಳೂರು: ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಖಾಸಗಿ ಬಸ್ ಪಲ್ಟಿ ; ಅಪಾಯದಿಂದ ಪಾರಾದ ಪ್ರಯಾಣಿಕರು
ಕ್ರೈಮ್ ನ್ಯೂಸ್

ಮಂಗಳೂರು: ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಖಾಸಗಿ ಬಸ್ ಪಲ್ಟಿ ; ಅಪಾಯದಿಂದ ಪಾರಾದ ಪ್ರಯಾಣಿಕರು

September 4, 2026
73
Next Post
FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

Discussion about this post

Recent News

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

September 7, 2026
35
ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

September 7, 2026
20
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

September 7, 2026
ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

September 7, 2026
ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

September 7, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d