ಉಪ್ಪಿನಂಗಡಿ, ಸೆ 2 : ಕೆಮ್ಮಾರ ಹೊಳೆಯಲ್ಲಿ ಯುವಕನೊಬ್ಬ ನೀರು ಪಾಲಾಗಿ ಕಣ್ಮರೆಯಾಗಿರುವ ಘಟನೆ ಸೆ.1 ರ ಬುಧವಾರ ನಡೆದಿದೆ. ಸ್ಥಳೀಯ ನಿವಾಸಿ ಇಸ್ಮಾಯಿಲ್ ಎಂಬವರ ಮಗ ನಿವಾಸಿ ಶಫೀಕ್(19)ನೀರುಪಾಲಾದ ಯುವಕ.
ಶಫೀಕ್ ಅವರ ಮನೆ ಬಳಿಯೆ ಹೊಳೆ ಇದ್ದು ಸಾಮಾನ್ಯವಾಗಿ ಅದರತ್ತ ಹೋಗುತ್ತಿದ್ದರು ಎನ್ನಲಾಗಿದೆ. ಇದೇ ರೀತಿ ಬುಧವಾರ ಸಂಜೆಯೂ ಹೊಳೆ ಕಡೆಗೆ ಹೋಗಿದ್ದರು. ಪಶ್ಚಿಮ ಘಟ್ಟದಲ್ಲಿ ಮಳೆ ಸುರಿಯುತ್ತಿದ್ದು, ನದಿಯಲ್ಲಿ ಹೊಳೆ ನೀರಿನಲ್ಲಿ ಏಕಾಏಕಿ ಹರಿವು ಹೆಚ್ಚಳವಾಗಿ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸ್ಥಳೀಯ ಈಜುಗಾರರರಿಂದ, ಶಫೀಕ್ ಗಾಗಿ ಹುಡುಕಾಟ ಮುಂದುವರಿದೆ. ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.