ಹಾಸನ, ಡಿ.1: ಪೊಲೀಸ್ ಜೀಪು ಭೀಕರ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಿಹಾರ ಮೂಲದ ಹರ್ಷಬರ್ಧನ್(26) ದುರಂತ ಸಾವಿಗೀಡಾಗಿದ್ದಾರೆ. ಚಿಕಿತ್ಸೆ ಫಲಿಸದೆ ಹಾಸನ ಖಾಸಗಿ ಆಸ್ಪತ್ರೆಯಲ್ಲಿ ದುರ್ಮರಣಕ್ಕೆ ಒಳಗಾಗಿದ್ದಾರೆ.
ಹಾಸನ ವಿಭಾಗಕ್ಕೆ ಪ್ರೊಬೇಶನರಿ ಡಿವೈಎಸ್ಪಿ ಆಗಿ ನಿಯೋಜನೆಗೊಂಡಿದ್ದ ಹರ್ಷಬರ್ಧನ್ ಅವರು ಮೈಸೂರಿನ ಐಜಿಪಿ ಕಚೇರಿಯಲ್ಲಿ ರಿಪೋರ್ಟ್ ಮಾಡಿ ಎಸ್ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರಕ್ಕೆ ಆಗಮಿಸುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ. ಹಾಸನ ತಾಲೂಕಿನ ಕಿತ್ತಾನೆ ಗ್ರಾಮದಲ್ಲಿ ಜೀಪಿನ ಟೈರ್ ಸಿಡಿದು ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದೆ. ಸಂಜೆ ವೇಳೆಗೆ ಘಟನೆ ನಡೆದಿದ್ದು ಇಬ್ಬರಿಗೂ ತೀವ್ರ ಗಾಯವಾಗಿತ್ತು. ಹರ್ಷಬರ್ಧನ್ ಅವರು ತರಬೇತಿ ಮುಗಿಸಿ ಇಲಾಖಾ ತರಬೇತಿಗೆ ವರದಿ ಮಾಡಿಕೊಳ್ಳಲೆಂದು ಹಾಸನಕ್ಕೆ ಬರ್ತಿದ್ದರು. ಐಪಿಎಸ್ ವೃತ್ತಿ ಪ್ರಾರಂಭದ ದಿನವೇ ಸಾವನ್ನಪ್ಪಿದ್ದು ವಿಪರ್ಯಾಸ.
ಯಾರು ಈ ಐಪಿಎಸ್ ಅಧಿಕಾರಿ ಹರ್ಷಬರ್ಧನ್?: ಮಹಾರಾಷ್ಟ್ರ ಮೂಲದ ಹರ್ಷಬರ್ಧನ್ ಕರ್ನಾಟಕ ಕೇಡರ್ಗೆ ಆಯ್ಕೆಯಾಗಿರುವ ಪ್ರೊಬೇಷನರಿ ಐಪಿಎಸ್ ಅಧಿಕಾರಿ. 2023ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದ ಇವರು ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದರು. ಬಿಇ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಐಪಿಎಸ್ ಅಧಿಕಾರಿಯಾಗಿ ಮೈಸೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ 4 ವಾರಗಳ ಕಾಲ ತರಬೇತಿ ಪೂರ್ಣಗೊಳಿಸಿದ್ದರು. 6 ತಿಂಗಳು ಹಾಸನದಲ್ಲಿ ಡಿಸ್ಟ್ರಿಕ್ಟ್ ಪ್ರಾಕ್ಟಿಕಲ್ ಟ್ರೈನಿಂಗ್ ಪಡೆಯಬೇಕಿತ್ತು.
ನಿನ್ನೆ ಮೈಸೂರಿನ ಪೊಲೀಸ್ ಅಕಾಡೆಮಿಯಿಂದ ನಿರ್ಗಮಿಸಿ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಹಾಸನಕ್ಕೆ ಆಗಮಿಸಬೇಕಿತ್ತು. ಹೀಗಾಗಿ ಇವರನ್ನು ಕರೆತರಲು ಹಾಸನದ ಡಿಎಆರ್ ಪೊಲೀಸ್ ಪೇದೆ ಮಂಜೆಗೌಡ, ಹಾಸನ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಬೋಲೇರೋ ಜೀಪಲ್ಲಿ ಮೈಸೂರಿಗೆ ಹೋಗಿ ಹರ್ಷಬರ್ಧನ್ ಅವರನ್ನು ಕರೆತರುತ್ತಿದ್ದರು. ಅವರು ಹೊಳೆನರಸೀಪುರ ಮಾರ್ಗವಾಗಿ ಹಾಸನಕ್ಕೆ ತಲುಪಬೇಕಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post