• About us
  • Contact us
  • Disclaimer
Wednesday, August 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ದುರ್ಮರಣ

Coastal Times by Coastal Times
December 2, 2024
in ರಾಜ್ಯ
ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ದುರ್ಮರಣ
86
VIEWS
WhatsappTelegramShare on FacebookShare on Twitter

ಹಾಸನ, ಡಿ.1: ಪೊಲೀಸ್ ಜೀಪು ಭೀಕರ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಿಹಾರ ಮೂಲದ ಹರ್ಷಬರ್ಧನ್(26) ದುರಂತ ಸಾವಿಗೀಡಾಗಿದ್ದಾರೆ. ಚಿಕಿತ್ಸೆ ಫಲಿಸದೆ ಹಾಸನ ಖಾಸಗಿ ಆಸ್ಪತ್ರೆಯಲ್ಲಿ ದುರ್ಮರಣಕ್ಕೆ ಒಳಗಾಗಿದ್ದಾರೆ.

ಹಾಸನ ವಿಭಾಗಕ್ಕೆ ಪ್ರೊಬೇಶನರಿ ಡಿವೈಎಸ್ಪಿ ಆಗಿ ನಿಯೋಜನೆಗೊಂಡಿದ್ದ ಹರ್ಷಬರ್ಧನ್ ಅವರು ಮೈಸೂರಿನ ಐಜಿಪಿ ಕಚೇರಿಯಲ್ಲಿ ರಿಪೋರ್ಟ್ ಮಾಡಿ ಎಸ್ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರಕ್ಕೆ ಆಗಮಿಸುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ.‌ ಹಾಸನ ತಾಲೂಕಿನ ಕಿತ್ತಾನೆ ಗ್ರಾಮದಲ್ಲಿ ಜೀಪಿನ ಟೈರ್ ಸಿಡಿದು ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದೆ. ಸಂಜೆ ವೇಳೆಗೆ ಘಟನೆ ನಡೆದಿದ್ದು ಇಬ್ಬರಿಗೂ ತೀವ್ರ ಗಾಯವಾಗಿತ್ತು. ಹರ್ಷಬರ್ಧನ್ ಅವರು ತರಬೇತಿ ಮುಗಿಸಿ ಇಲಾಖಾ‌ ತರಬೇತಿಗೆ ವರದಿ ಮಾಡಿಕೊಳ್ಳಲೆಂದು ಹಾಸನಕ್ಕೆ ಬರ್ತಿದ್ದರು. ಐಪಿಎಸ್ ವೃತ್ತಿ ಪ್ರಾರಂಭದ ದಿನವೇ ಸಾವನ್ನಪ್ಪಿದ್ದು ವಿಪರ್ಯಾಸ.

ಯಾರು ಈ ಐಪಿಎಸ್ ಅಧಿಕಾರಿ ಹರ್ಷಬರ್ಧನ್?: ಮಹಾರಾಷ್ಟ್ರ ಮೂಲದ ಹರ್ಷಬರ್ಧನ್​ ಕರ್ನಾಟಕ ಕೇಡರ್​ಗೆ ಆಯ್ಕೆಯಾಗಿರುವ ಪ್ರೊಬೇಷನರಿ ಐಪಿಎಸ್ ಅಧಿಕಾರಿ. 2023ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದ ಇವರು ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದರು. ಬಿಇ ಸಿವಿಲ್‌ ಇಂಜಿನಿಯರಿಂಗ್‌ ಪದವೀಧರರಾಗಿದ್ದು, ಐಪಿಎಸ್ ಅಧಿಕಾರಿಯಾಗಿ ಮೈಸೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ 4 ವಾರಗಳ ಕಾಲ ತರಬೇತಿ ಪೂರ್ಣಗೊಳಿಸಿದ್ದರು. 6 ತಿಂಗಳು ಹಾಸನದಲ್ಲಿ ಡಿಸ್ಟ್ರಿಕ್ಟ್ ಪ್ರಾಕ್ಟಿಕಲ್ ಟ್ರೈನಿಂಗ್ ಪಡೆಯಬೇಕಿತ್ತು.

ನಿನ್ನೆ ಮೈಸೂರಿನ ಪೊಲೀಸ್ ಅಕಾಡೆಮಿಯಿಂದ ನಿರ್ಗಮಿಸಿ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಹಾಸನಕ್ಕೆ ಆಗಮಿಸಬೇಕಿತ್ತು. ಹೀಗಾಗಿ ಇವರನ್ನು ಕರೆತರಲು ಹಾಸನದ ಡಿಎಆರ್​ ಪೊಲೀಸ್ ಪೇದೆ ಮಂಜೆಗೌಡ, ಹಾಸನ ಗ್ರಾಮಾಂತರ ಠಾಣೆಯ ಇನ್ಸ್​​ಪೆಕ್ಟರ್ ಬೋಲೇರೋ ಜೀಪಲ್ಲಿ ಮೈಸೂರಿಗೆ ಹೋಗಿ ಹರ್ಷಬರ್ಧನ್​ ಅವರನ್ನು ಕರೆತರುತ್ತಿದ್ದರು. ಅವರು ಹೊಳೆನರಸೀಪುರ ಮಾರ್ಗವಾಗಿ ಹಾಸನಕ್ಕೆ ತಲುಪಬೇಕಿತ್ತು.

ಆದರೆ, ಹಾಸನ ಗಡಿ 3 ಕಿಲೋ ಮೀಟರ್ ಇರುವಾಗಲೇ ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್​ ಜೀಪ್ 3-4 ಪಲ್ಟಿಯಾಗಿ ರಸ್ತೆ ಪಕ್ಕದ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮತ್ತು ಐಪಿಎಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದರು. ಚಾಲಕ ಮಂಜೇಗೌಡ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಜೀವನದಲ್ಲಿ ಐಪಿಎಸ್ ಅಧಿಕಾರಿಯಾಗಿ ಗೆಲ್ಲಬೇಕಿದ್ದ ಹರ್ಷಬರ್ಧನ್​ ಮಾತ್ರ ಸಾವನ್ನು ಗೆಲ್ಲದೇ, ಕೊನೆಯುಸಿರೆಳೆದಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

‘ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟ’ದ ಎರಡನೇ ಬ್ಯಾರಿ ಬರಹಗಾರ್ತಿಯ ಬಳಗದ ಸಮ್ಮಿಲನ

Next Post

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಮೀಪ ಕಾಣಿಸಿಕೊಂಡ ಕಾಡಾನೆ, ಭಕ್ತರಿಗೆ ಎಚ್ಚರಿಕೆ

Related Posts

ಎಸ್ಐಆರ್ ಪಟ್ಟಿಯಿಂದ 1.11 ಕೋಟಿಗೂ ಅಧಿಕ ಮತದಾರರ ಹೆಸರು ಡಿಲೀಟ್ ಸಾಧ್ಯತೆ: ಗಣತಿ ನಮೂನೆ ಸಲ್ಲಿಕೆಗೆ ಆಗಸ್ಟ್​ 8 ಕೊನೆಯ ದಿನ
ರಾಜ್ಯ

ಎಸ್ಐಆರ್ ಪಟ್ಟಿಯಿಂದ 1.11 ಕೋಟಿಗೂ ಅಧಿಕ ಮತದಾರರ ಹೆಸರು ಡಿಲೀಟ್ ಸಾಧ್ಯತೆ: ಗಣತಿ ನಮೂನೆ ಸಲ್ಲಿಕೆಗೆ ಆಗಸ್ಟ್​ 8 ಕೊನೆಯ ದಿನ

August 6, 2026
13
ಕರ್ನಾಟಕದ ಪರಿಸರ ಪ್ರಾಧಿಕಾರಗಳ SEIAA–SEAC ನೇಮಕಾತಿಗಳ ಅರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಎಂಟು ವಾರಗಳಲ್ಲಿ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ
ರಾಜ್ಯ

ಕರ್ನಾಟಕದ ಪರಿಸರ ಪ್ರಾಧಿಕಾರಗಳ SEIAA–SEAC ನೇಮಕಾತಿಗಳ ಅರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಎಂಟು ವಾರಗಳಲ್ಲಿ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ

July 25, 2026
10
Next Post
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಮೀಪ ಕಾಣಿಸಿಕೊಂಡ ಕಾಡಾನೆ, ಭಕ್ತರಿಗೆ ಎಚ್ಚರಿಕೆ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಮೀಪ ಕಾಣಿಸಿಕೊಂಡ ಕಾಡಾನೆ, ಭಕ್ತರಿಗೆ ಎಚ್ಚರಿಕೆ

Discussion about this post

Recent News

ಸಾಮಾಜಿಕ ಭದ್ರತಾ ಪಿಂಚಣಿಗೆ ರೂ.32,000 ಆದಾಯ ಮಿತಿ : ಬಡವರ ಮೇಲೆ ಅನ್ಯಾಯ ದಾಖಲೆಗಳ ಹೆಸರಿನಲ್ಲಿ ಫಲಾನುಭವಿಗಳಿಗೆ ಕಿರುಕುಳ ನಿಲ್ಲಿಸಬೇಕು -ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ಸಾಮಾಜಿಕ ಭದ್ರತಾ ಪಿಂಚಣಿಗೆ ರೂ.32,000 ಆದಾಯ ಮಿತಿ : ಬಡವರ ಮೇಲೆ ಅನ್ಯಾಯ ದಾಖಲೆಗಳ ಹೆಸರಿನಲ್ಲಿ ಫಲಾನುಭವಿಗಳಿಗೆ ಕಿರುಕುಳ ನಿಲ್ಲಿಸಬೇಕು -ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

August 11, 2026
17
ಮಂಗಳೂರಿನಲ್ಲಿ ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತರಿಗೆ ಸನ್ಮಾನ

ಮಂಗಳೂರಿನಲ್ಲಿ ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತರಿಗೆ ಸನ್ಮಾನ

August 11, 2026
29
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸಾಮಾಜಿಕ ಭದ್ರತಾ ಪಿಂಚಣಿಗೆ ರೂ.32,000 ಆದಾಯ ಮಿತಿ : ಬಡವರ ಮೇಲೆ ಅನ್ಯಾಯ ದಾಖಲೆಗಳ ಹೆಸರಿನಲ್ಲಿ ಫಲಾನುಭವಿಗಳಿಗೆ ಕಿರುಕುಳ ನಿಲ್ಲಿಸಬೇಕು -ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ಸಾಮಾಜಿಕ ಭದ್ರತಾ ಪಿಂಚಣಿಗೆ ರೂ.32,000 ಆದಾಯ ಮಿತಿ : ಬಡವರ ಮೇಲೆ ಅನ್ಯಾಯ ದಾಖಲೆಗಳ ಹೆಸರಿನಲ್ಲಿ ಫಲಾನುಭವಿಗಳಿಗೆ ಕಿರುಕುಳ ನಿಲ್ಲಿಸಬೇಕು -ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

August 11, 2026
ಮಂಗಳೂರಿನಲ್ಲಿ ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತರಿಗೆ ಸನ್ಮಾನ

ಮಂಗಳೂರಿನಲ್ಲಿ ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತರಿಗೆ ಸನ್ಮಾನ

August 11, 2026
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು !

ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು !

August 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d