ಉಕ್ರೇನ್: ರಷ್ಯಾದ ಸೇನಾ ಪಡೆಗಳು ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದು, ಬಾಂಬ್ಗಳಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿರುವ ಕೇಂದ್ರದಲ್ಲೇ ಜೋಡಿಯೊಂದರ ಮದುವೆ ಏರ್ಪಟ್ಟಿದೆ.
ಸಂಭ್ರಮದ ಸದ್ದು–ಗದ್ದಲ, ಸಂಗೀತ ಆಲಾಪಗಳ ಬದಲು ಆಗಸದಲ್ಲಿ ಮೊಳಗುತ್ತಿರುವ ಸೈರನ್ ಸದ್ದಿನ ನಡುವೆ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಸಿದ್ದಾರೆ. ಉಕ್ರೇನ್ನ ಒದೆಸಾ ನಗರದಲ್ಲಿ ನಿರ್ಮಿಸಲಾಗಿರುವ ಸ್ಫೋಟಕಗಳಿಂದ ರಕ್ಷಣೆ ಪಡೆಯುವ ಕೇಂದ್ರದಲ್ಲಿ ವಿವಾಹ ನಡೆದಿರುವುದಾಗಿ ನೆಕ್ಸ್ಟಾ ಸುದ್ದಿ ಮಾಧ್ಯಮ ಟ್ವೀಟಿಸಿದೆ.
Meanwhile, a marriage registration took place in a bomb shelter in #Odesa. pic.twitter.com/xAi8ktCxfE
— NEXTA (@nexta_tv) March 3, 2022