• About us
  • Contact us
  • Disclaimer
Sunday, September 6, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪೂಜೆ ನೆಪದಲ್ಲಿ ಜ್ಯೋತಿಷಿಯೊಬ್ಬ ಬ್ಯೂಟಿಷಿಯನ್ ಮೇಲೆ ನಿರಂತರ ಅತ್ಯಾಚಾರ

Coastal Times by Coastal Times
May 3, 2026
in ಕ್ರೈಮ್ ನ್ಯೂಸ್
ಪೂಜೆ ನೆಪದಲ್ಲಿ ಜ್ಯೋತಿಷಿಯೊಬ್ಬ ಬ್ಯೂಟಿಷಿಯನ್ ಮೇಲೆ ನಿರಂತರ ಅತ್ಯಾಚಾರ
93
VIEWS
WhatsappTelegramShare on FacebookShare on Twitter

ಬೆಂಗಳೂರು, ಮೇ.3: ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬ್ಯೂಟಿಷಿಯನ್ ಒಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘನಘೋರ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡ ಮತ್ತು ಮಗನ ಮೇಲೆ ವಾಮಾಚಾರ ಮಾಡಿಸಿ ಅವರು ರಕ್ತ ಕಾರಿ ಸಾಯುವಂತೆ ಮಾಡುವುದಾಗಿ ಬೆದರಿಸಿ ಆರೋಪಿ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಹಿಳೆ ದೂರು ಕೂಡ ನೀಡಿದ್ದಾರೆ. ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದ ಮಹಿಳೆಗೆ, ತನ್ನ ಸಹೋದರಿಯ ಅಡ್ಮಿಷನ್ ನೆಪದಲ್ಲಿ ಆರೋಪಿ ಮೋಹನ್ ಕುಮಾರ್ ಎಂಬಾತ ಪರಿಚಯವಾಗಿದ್ದ.

ಮಹಿಳೆ ನಡೆಸುತ್ತಿದ್ದ ಟ್ರೈನಿಂಗ್ ಸೆಂಟರ್‌ನಲ್ಲಿ ಮೊದಲಿಗೆ ತನ್ನ ಸಹೋದರಿಗೆ ಅಡ್ಮಿಷನ್ ಬೇಕು ಎಂದು ಹೇಳಿ ಮೋಹನ್ ಕುಮಾರ್ ಮೊದಲ ಬಾರಿ ಸಂಪರ್ಕಿಸಿದ್ದಾನೆ. ನಂತರ 2025 ಜನವರಿ 1 ರಂದು ಮಹಿಳೆಯ ಕಚೇರಿಗೆ ಬಂದು, ‘ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲು ವಿಶೇಷ ಪೂಜೆ ಮಾಡಿಸಬೇಕು, ನಾನು ಸಹಾಯ ಮಾಡುತ್ತೇನೆ’ ಎಂದು ವಿಶ್ವಾಸ ಮೂಡಿಸಿದ್ದಾನೆ. ಇದನ್ನು ನಂಬಿದ್ದ ಮಹಿಳೆ ಆತ ಹೇಳಿದ್ದನ್ನೆಲ್ಲಾ ಕೇಳಿದ್ದಾಳೆ.

ಮಹಿಳೆ ಮೇಲೆ ನಿರಂತರ ಅತ್ಯಾಚಾರಕ್ಕೆ ಯತ್ನ: ಮೊದಲಿಗೆ ಜನವರಿ 30ರಂದು ರಾಮನಗರದ ಪಿರಮಿಡ್ ವ್ಯಾಲಿಗೆ ಪೂಜೆ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪೂಜೆಯ ಬಗ್ಗೆ ಮಾತಾಡಿ, ವಾಪಸ್ಸು ಬರುತ್ತಿರುವಾಗ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ಮಾಡಿದನೆಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆ ವಿರೋಧ ಮಾಡಿದ್ದರಿಂದ ಅವನ ಯತ್ನ ವಿಫಲವಾಗಿ, ಆಕೆನ್ನು ವಾಪಸ್ಸು ಬಿಟ್ಟು ಹೋಗಿದ್ದಾನೆ.

ಇದರ ಕೆಲವೇ ದಿನಗಳ ಬಳಿಕ ಚಾಮುಂಡಿ ಬೆಟ್ಟಕ್ಕೆ ಪುನಃ ಪೂಜೆ ನೆಪದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ಬಾರಿ ವಾಪಸ್ಸು ಬರುತ್ತಿರುವಾಗ ಕಾರಿನಲ್ಲೇ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂಬ ಆರೋಪ ಇದೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಗಂಡ ಮತ್ತು ಮಗನ ಮೇಲೆ ವಾಮಾಚಾರ, ಬ್ಲಾಕ್ ಮ್ಯಾಜಿಕ್ ಮಾಡಿ, ರಕ್ತ ಕಾರಿ ಸಾಯುವಂತೆ ಮಾಡಿಸ್ತೀನಿ ಎಂದು ಭಯ ಹುಟ್ಟಿಸಿದ್ದಾನೆ. ಗಂಡ, ಮಗನ ಪ್ರಾಣದ ಭಯದಿಂದ ಮಹಿಳೆ ಯಾರಿಗೂ ವಿಷಯ ತಿಳಿಸದೆ ಮೌನವಾಗಿದ್ದಾಳೆ.

ಫೆಬ್ರವರಿ 10, 2025 ರಂದು ಮತ್ತೆ ‘ನಿಮಗೆ ದೀಕ್ಷೆ ಕೊಡಬೇಕು, ಮನೆಯಲ್ಲೇ ವಿಶೇಷ ವಿಧಿ ಮಾಡಬೇಕು’ ಎಂದು ಹೇಳಿ ಮಹಿಳೆಯ ಮನೆಗೆ ಬಂದಿದ್ದಾನೆ. ಆ ವೇಳೆ ಗಂಡ ಮತ್ತು ಮಗನನ್ನು ಹೊರಗೆ ಕಳಿಸಲು ಜ್ಯೋತಿಷಿ ಒತ್ತಾಯಿಸಿದ್ದಾನೆ. ಒಂದೂವರೆ ಗಂಟೆ ಮನೆ ಒಳಗೆ ಬರಬಾರದು ಎಂದು ಹೇಳಿ ಕಳುಹಿಸಿದ್ದಾನೆಂಬುದು ದೂರು. ಮನೆಯಲ್ಲಿ ಒಬ್ಬಳೇ ಇದ್ದ ಮಹಿಳೆಯ ಕೈ, ಕಾಲು ಮುಟ್ಟುತ್ತಾ, ಸಹಕರಿಸದಿದ್ದರೆ ಗಂಡ, ಮಕ್ಕಳನ್ನು ಕೊಲೆ ಮಾಡುವಂತೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಇದಲ್ಲದೆ, ಇದೇ ರೀತಿಯಲ್ಲಿ ಹಲವು ಬಾರಿ ಮನೆಗೆ ಬಂದು, ಪೂಜೆ, ದೀಕ್ಷೆ, ಮಾಟಮಂತ್ರ ನೆಪದಲ್ಲಿ ಮಹಿಳೆಯ ಮೇಲೆ ಅವನಿಂದ ನಿರಂತರ ಅತ್ಯಾಚಾರ ಮತ್ತು ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದೆ. ಪದೇ ಪದೇ ದೌರ್ಜನ್ಯ ಹೆಚ್ಚಿದ ಕಾರಣ ಕೊನೆಗೂ ಧೈರ್ಯ ಮಾಡಿದ ಮಹಿಳೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಗೆ ಹೋಗಿ ಅಧಿಕೃತವಾಗಿ ದೂರು ದಾಖಲಿಸಿದ್ದಾಳೆ.

ಆರೋಪಿ ಪರಾರಿ : ಮಹಿಳೆಯ ದೂರು ಆಧಾರದ ಮೇಲೆ ಜ್ಯೋತಿಷಿ ಮೋಹನ್ ಕುಮಾರ್ ವಿರುದ್ಧ ಅತ್ಯಾಚಾರ, ಬೆದರಿಕೆ ಮತ್ತು ವಾಮಾಚಾರ ಹೆಸರಿನಲ್ಲಿ ಮಾನಸಿಕ ಹಿಂಸೆ ನೀಡಿದ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಅವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಸಾವಿನ ರಹಸ್ಯ

Next Post

ಬಂಟ್ವಾಳ : ಮಾದಕ ವಸ್ತು MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 46 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ

Related Posts

ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ
ಕ್ರೈಮ್ ನ್ಯೂಸ್

ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ

September 5, 2026
27
ಮಂಗಳೂರು: ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಖಾಸಗಿ ಬಸ್ ಪಲ್ಟಿ ; ಅಪಾಯದಿಂದ ಪಾರಾದ ಪ್ರಯಾಣಿಕರು
ಕ್ರೈಮ್ ನ್ಯೂಸ್

ಮಂಗಳೂರು: ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಖಾಸಗಿ ಬಸ್ ಪಲ್ಟಿ ; ಅಪಾಯದಿಂದ ಪಾರಾದ ಪ್ರಯಾಣಿಕರು

September 4, 2026
72
Next Post
ಬಂಟ್ವಾಳ : ಮಾದಕ ವಸ್ತು MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 46 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ

ಬಂಟ್ವಾಳ : ಮಾದಕ ವಸ್ತು MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 46 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ

Discussion about this post

Recent News

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

September 6, 2026
34
ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

September 6, 2026
12
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಪುಚ್ಚಾಡಿ ,ಸೂರಿಂಜೆ ಇದರ 2026 -2028 ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧಾಕರ್ ಬಂಗೇರ, ಪುಚ್ಚಾಡಿ ಇವರು ಆಯ್ಕೆ

September 6, 2026
ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

ಬಂಟ್ಸ್ ಹಾಸ್ಟೆಲ್‌: ಬಂಟ ಕ್ರೀಡೋತ್ಸವ-2026 ಉದ್ಘಾಟನೆ

September 6, 2026
ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ

ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ

September 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d