ಮಂಗಳೂರು, ಅ.3: ವಿ – ಕೇರ್ ಆನ್ ಲೈನ್ ಲರ್ನಿಂಗ್ ಆ್ಯಫ್ ಮೂಲಕ ರಾಜ್ಯದ ಸರಕಾರಿ ಶಾಲೆಯ 1 ರಿಂದ 10 ತರಗತಿಯ ಮಕ್ಕಳಿಗೆ ಒಂದು ವರ್ಷ ಸಂಪೂರ್ಣ ಉಚಿತ ತರಗತಿಗ ಳನ್ನು ನಡೆಸಲಾಗುವುದು ಈ ಬಗ್ಗೆ ಸರಕಾರದ ಜೊತೆ ಮಾತುಕತೆ ನಡೆದಿದೆ ಎಂದು ವಿ ಕೇರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಕರ್ನಾಟಕ ರಕ್ಷಣಾ ಪಡೆಯ ಅಧ್ಯಕ್ಷ ಎನ್. ವೀ ರೇಂದ್ರ ಬಾಬು ನಗರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ವಿ ಕೇರ್ ಲರ್ನಿಂಗ್ ಆ್ಯಪ್ ಸುಮಾರು 70 ಸಾವಿರಕ್ಕೂ ಅಧಿಕ ಚಂದಾದಾರರನ್ನು ಹೊಂದಿದೆ.ವಿ ಕೇರ್ ಅ್ಯಫ್ ಕಂಠಪಾಠದ ಶಿಕ್ಷಣ ಕಲಿಕೆಗಿಂತ ಹೆಚ್ಚಾಗಿ ದೃಶ್ಯ ಮಾಧ್ಯಮದ ಮೂಲಕ ವಿದ್ಯಾರ್ಥಿ ಗಳಿಗೆ ವಿಷಯವನ್ನು ಪರಿಣಾಮಕಾರಿಯಾಗಿ ಮನದಟ್ಟು ಮಾಡುವ ಬೋಧನೆಯ ವಿಧಾನಗಳನ್ನು ಒಳಗೊಂಡಿದೆ.ಅಲ್ಲದೆ ಮೊಬೈಲ್ ಪೋನ್ ಗಳು ಅಲ್ಲದೆ.ವಿ ಕೇರ್ ಪಾಠಗಳನ್ನು ಟ.ವಿ ಗೆ ಡೌನ್ ಲೋಡ್ ಮಾಡಿ ವಿದ್ಯಾರ್ಥಿ ಗಳು ಟಿ.ವಿ ಯಲ್ಲಿ ಪಾಠ ಗಳನ್ನು ಆಲಿಸಬಹುದು ಮತ್ತು ದೃಶ್ಯ ಗಳನ್ನು ನೋಡಿ ಕಲಿಯಬಹುದು.ಎಲ್ ಕೆಜಿ ಯಿಂದ ಆರಂಭ ಗೊಂಡ ಸ್ನಾತಕೋತ್ತರ ಪದವಿ , ಸ್ಪರ್ಧಾತ್ಮಕ ಪರೀಕ್ಷೆ ಗಳಿಗೂ ವಿ ಕೇರ್ ಆ್ಯಫ್ ಮೂಲಕ ತರಗತಿ ನಡೆಸಲಾಗುತ್ತಿದೆ.
ಇದಲ್ಲದೆ ವಿ ಕೇರ್ ಯೋಗ, ಸರಕಾರ ಕಾರ್ಯಕ್ರಮ ಗಳು, ಕೃಷಿ ಯ ಬಗ್ಗೆ ವೈಜ್ಞಾನಿಕ ವಾಗಿ ತರಬೇತಿ,ಮಾಹಿತಿಯನ್ನು ನೀಡಲಾಗು ವುದು .ಉದಾಹರಣೆಗೆ ರೈತರಿಗೆ ತಾವು ಬೆಳೆದ ಬೆಳೆಗೆ ಸೂಕ್ತ ದರ ಪಡೆಯಲು ಅನುಕೂಲವಾದ ಮಾಹಿತಿ, ವಿವಿಧ ಬೆಳೆಗಳ ಮಾಹಿತಿಯನ್ನು ಅನೌಪಚಾರಿಕವಾಗಿ ನೀಡಲಾಗುವುದು ಎಂದು ವೀರೇಂದ್ರ ಬಾಬು ತಿಳಿಸಿದ್ದಾರೆ.
ವಿ ಕೇರ್ ಆ್ಯಫ್ ನ್ನು ದೇಶದ ಇಪ್ಪತ್ತು ಭಾಷೆಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ.ತುಳು ಭಾಷೆ ಸೇರಿದಂತೆ ಇನ್ನಿತರ ಭಾಷೆಗಳಲ್ಲೂ ಅಭಿವೃದ್ಧಿ ಪಡಿಸುವ ಗುರಿ ಇದೆ. ರಾಜ್ಯದ ಶೈಕ್ಷಣಿಕ ಪಠ್ಯಕ್ರಮವಲ್ಲದೆ ಸಿಬಿಎಸ್ ಸಿ,ಐಸಿಎಸ್ ಸಿ ಪಠ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಶಿಕ್ಷಣ ನೀಡಲಾಗುವುದು. ಕರ್ನಾಟಕ ರಕ್ಷಣಾ ಪಡೆ ಶಿಕ್ಷಣ, ಸಂಘನೆ, ಹೋರಾಟ ಧ್ಯೇಯ ದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.ಶಿಕ್ಷಣದ ಅವಕಾಶ ಎಲ್ಲರಿಗೂ ಲಭಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ವೀರೇಂದ್ರ ಬಾಬು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿ ಕೇರ್ ಸಂಸ್ಥೆಯ ಉಪಾಧ್ಯಕ್ಷ ನಿರಂಜನ ,ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಹಾಗೂ ಕರ್ನಾಟಕ ರಕ್ಷಣಾ ಪಡೆಯ ಕಾರ್ಯಾಧ್ಯಕ್ಷ ಬಸವರಾ ಜು,ವಿ ನ್ಯೂ ಸ್ 24 ಚಾನಲ್ ನ ಸಿಇಒ ವೆಂಕಟೇಶ್ ರಾಜಾನುಕುಂಟೆ ಮೊದಲಾದ ವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post