ಅಕ್ಟೋಬರ್ 4 ರಂದು ಭಾರತ ಸೇರಿದಂತೆ ವಿಶ್ವಾದ್ಯಂತ ಗೂಗಲ್ ಪಿಕ್ಸೆಲ್ 8 ಹಾಗೂ ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. ನಾಳೆ ಸಂಜೆ 7.30ಕ್ಕೆ ಲೈವ್ ಕಾರ್ಯಕ್ರಮ ಆರಂಭಗೊಳ್ಳುತ್ತಿದೆ. ಗೂಗಲ್ ಪೆಕ್ಸೆಲ್ ಐಫೋನ್‌ಗೆ ಸೆಡ್ಡು ಹೊಡೆಯುತ್ತಾ? ಇದರ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಹೌದು, ಟೆಕ್ ದೈತ್ಯ ಗೂಗಲ್‌ನಿಂದ ಬಹಳ ದಿನಗಳಿಂದ ಕಾಯುತ್ತಿರುವ ಗೂಗಲ್ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ (Google Pixel 8 and Pixel 8 Pro) ಸ್ಮಾರ್ಟ್‌ಫೋನ್‌ಗಳ ಕುರಿತು ಕುತೂಹಲಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಎರಡೂ ಫೋನ್‌ಗಳನ್ನು ಅಕ್ಟೋಬರ್ 4 ರಂದು ಮೇಡ್ ಬೈ ಗೂಗಲ್ ಈವೆಂಟ್‌ನಲ್ಲಿ ಲಾಂಚ್ ಮಾಡಲಾಗುತ್ತದೆ. ಈ ನಡುವೆ ಈ ಫೋನ್‌ಗಳ ಬಣ್ಣಗಳ ಬಗ್ಗೆ ಮಾಹಿತಿ ತಿಳಿದುಬಂದಿದೆ. ಹಾಗಿದ್ರೆ, ಲೀಕ್ ಮಾಹಿತಿ ಈ ಫೋನ್‌ಗಳ ಬಗ್ಗೆ ಏನು ಹೇಳುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.
ಗೂಗಲ್ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ: ಈ ಎರಡೂ ಫೋನ್‌ಗಳು ಮೂರು ಬಣ್ಣ ಆಯ್ಕೆಗಳಲ್ಲಿ ಕಾಣಿಸಿಕೊಳ್ಳಲಿವೆ ಎಂದು ತಿಳಿದುಬಂದಿದೆ. ಅಂದರೆ ಪಿಕ್ಸೆಲ್ 8 ಬ್ಲ್ಯಾಕ್ ಅಬ್ಸಿಡಿಯನ್, ಗ್ರೇ ಮತ್ತು ಪಿಯೋನಿ ರೋಸ್ ಬಣ್ಣಗಳಲ್ಲಿ ಕಾಣಿಸಿಕೊಂಡರೆ, ಪಿಕ್ಸೆಲ್ 8 ಪ್ರೊ ಬ್ಲ್ಯಾಕ್ ಅಬ್ಸಿಡಿಯನ್, ಪಿಂಗಾಣಿ ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಆದರೆ ಗೂಗಲ್ ಮಾತ್ರ ಇದನ್ನು ದೃಢಪಡಿಸಿಲ್ಲ. ಇನ್ನು ಪಿಕ್ಸೆಲ್ 8 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು. ಇದು ವಿಶೇಷ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ, ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್ ಸಹ ವಿಭಿನ್ನ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಪಡೆಯಲಿದ್ದು, ಮತ್ತು ಹಿಂಭಾಗದಲ್ಲಿ ಎಲ್ಇಡಿ ಫ್ಲ್ಯಾಶ್‌ಲೈಟ್ ಆಯ್ಕೆಯೊಂದಿಗೆ ಟ್ರಿಪಲ್ ಕ್ಯಾಮೆರಾ ಸೆನ್ಸರ್ ಹೊಂದಿರಲಿದೆಯಂತೆ.
ಉಳಿದಂತೆ ಗೂಗಲ್ ಪಿಕ್ಸೆಲ್ 8 ಸರಣಿಯ ಫೋನ್ ಇನ್-ಹೌಸ್ ಟೆನ್ಸರ್ G3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಇದು 9 ಕೋರ್ CPU ಬಲ ಹೊಂದಿದೆ ಎಂದು ತೋರುತ್ತದೆ. ಜೊತೆಗೆ ಆಂಡ್ರಾಯ್ಡ್ 14 ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ವರದಿಯಾಗಿದ್ದು, ಈ ಎರಡೂ ಸ್ಮಾರ್ಟ್‌ಫೋನ್‌ಗಳು 120Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇಷ್ಟೇ ಅಲ್ಲದೆ ಪಿಕ್ಸೆಲ್ 8 ಪ್ರೊ ಫೋನ್ 27W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,950mAh ಬ್ಯಾಟರಿಯನ್ನು ಹೊಂದಿದ್ದರೆ, ಇದೇ ಪಿಕ್ಸೆಲ್ 8 ಫೋನ್ 24W ವೈರ್ಡ್ ಚಾರ್ಜಿಂಗ್ ಮತ್ತು 12W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,485mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಬಳಕೆದಾರರಿಗೆ ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಸಿಗಲಿದೆ ಎಂದು ನಿರೀಕ್ಷೆ ಮಾಡಬಹುದಾಗಿದೆ. ಇನ್ನು ಈ ಫೋನ್‌ಗಳ ಬೆಲೆ ಬಗ್ಗೆ ಊಹಿಸುವುದಾದರೆ ಪಿಕ್ಸೆಲ್ 8 ಫೋನ್‌ನ 128GB ವೇರಿಯಂಟ್ 78,000 ರೂ. ಹೊಂದಿರಲಿದೆ ಎನ್ನಲಾಗಿದ್ದು, 256GB ವೇರಿಯಂಟ್ ಸುಮಾರು 85,200ರೂ.ಗಳ ಬೆಲೆ ಹೊಂದಿರಬಹುದು ಎಂದು ತಿಳಿದುಬಂದಿದೆ. ಜೊತೆಗೆ ಗೂಗಲ್ ಪಿಕ್ಸೆಲ್ 8 ಪ್ರೊ ಫೋನ್‌ನ 128GB ಸ್ಟೋರೇಜ್ ವೇರಿಯಂಟ್‌ಗೆ 1,10,900 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು. 256GB ವೇರಿಯಂಟ್ 1,17,500 ರೂ.ಗಳು ಹಾಗೂ 512GB ಸ್ಟೋರೇಜ್ ವೇರಿಯಂಟ್ 1,31,100 ರೂ.ಗಳ ಬೆಲೆ ಹೊಂದಿರಬಹುದು ಎಂದು ತಿಳಿದುಬಂದಿದೆ.
ಇನ್ನು 8 ಪ್ರೋ ಸ್ಮಾರ್ಟ್ ಫೋನ್ 5050mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. 6.7 ಇಂಚಿನ QHD+ OLED ಡಿಸ್‌ಪ್ಲೆ ಸೇರಿದಂತೆ ಕೆಲ ಹೆಚ್ಚುವರಿ ಫೀಚರ್ಸ್ ಈ ಫೋನ್‌ನಲ್ಲಿದೆ.
ಈ ಫೋನ್ ಅನ್ನು ನ್ಯೂಯಾರ್ಕ್‌ನಲ್ಲಿ ಜರುಗುವ ಗೂಗಲ್ ಮೇಡ್ ಬೈ ಈವೆಂಟ್ ನಲ್ಲಿ ಲಾಂಚ್ ಮಾಡುತ್ತಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳ ಪ್ರಿ-ಬುಕಿಂಗ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ ಎಂದು ಗೂಗಲ್ ಈಗಾಗಲೇ ಬಹಿರಂಗಪಡಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post