• About us
  • Contact us
  • Disclaimer
Wednesday, April 29, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ

Coastal Times by Coastal Times
January 4, 2025
in ಕ್ರೈಮ್ ನ್ಯೂಸ್
ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
56
VIEWS
WhatsappTelegramShare on FacebookShare on Twitter

ಕಾಸರಗೋಡು: ಪೆರಿಯ ಕಲ್ಯೋಟ್‌ನಲ್ಲಿ ನಡೆದಿದ್ದ ಅವಳಿ ಕೊಲೆ ಪ್ರಕರಣದಲ್ಲಿ 10 ಮಂದಿಗೆ ಅವಳಿ ಜೀವಾವಧಿ ಸಜೆ ಹಾಗೂ ತಲಾ 2 ಲಕ್ಷ ರೂ. ದಂಡ ವಿಧಿಸಿ ಕೊಚ್ಚಿಯ ಪ್ರತ್ಯೇಕ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಇತರ ನಾಲ್ವರಿಗೆ ಐದು ವರ್ಷ ಸಜೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿದೆ.

ಸಿ.ಪಿ.ಎಂ. ಕಾರ್ಯಕರ್ತರಾದ ಎ. ಪೀತಾಂಬರನ್‌, ಸಜಿ ಯಾನೆ ಸಜಿ ಸಿ. ಜಾರ್ಜ್‌, ಕೆ.ಎಂ. ಸುರೇಶ, ಅಬು ಯಾನೆ ಕೆ. ಅನಿಲ್‌ ಕುಮಾರ್‌, ಜಿಜಿನ್‌, ಕುಟ್ಟು ಯಾನೆ ಆರ್‌ ಶ್ರೀರಾಗ್‌, ಅಪ್ಪು ಯಾನೆ ಎ. ಅಶ್ವಿ‌ನ್‌, ಮಣಿ ಯಾನೆ ಸುಭಾಷ್‌, ಅಪ್ಪು ಯಾನೆ ಟಿ. ರಂಜಿತ್‌, ವಿಷ್ಣು ಸುರ ಯಾನೆ ಸುರೇಂದ್ರನ್‌ಗೆ ಅವಳಿ ಜೀವಾವಧಿ ಸಜೆ ಹಾಗೂ ತಲಾ 2 ಲಕ್ಷ ರೂ. ದಂಡ ವಿಧಿಸಲಾಗಿದೆ.

14ನೇ ಆರೋಪಿ ಕಾಂಞಂಗಾಡ್‌ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಕೆ. ಮಣಿಕಂಠನ್‌, 20ನೇ ಆರೋಪಿ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್‌, 21ನೇ ಆರೋಪಿ ರಾಘವನ್‌ ನಾಯರ್‌ ವೆಳುತ್ತೋಳಿ, 22ನೇ ಆರೋಪಿ ಕೆ.ವಿ. ಭಾಸ್ಕರನ್‌ಗೆ 5 ವರ್ಷಗಳ ಸಜೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿದೆ.

ವಿಶೇಷ ನ್ಯಾಯಾಧೀಶ ಜ| ಶೇಷಾದ್ರಿ ನಾಥನ್‌ ಅವರು ಶುಕ್ರವಾರ ಮಧ್ಯಾಹ್ನ ಶಿಕ್ಷೆ ಘೋಷಿಸಿದರು. ದಂಡದ ಮೊತ್ತವನ್ನು ಮೃತ ಶರತ್‌ಲಾಲ್‌ ಹಾಗೂ ಕೃಪೇಶ್‌ ಅವರ ಮನೆಯವರಿಗೆ ನೀಡುವಂತೆ ನ್ಯಾಯಾಲಯ ತಿಳಿಸಿದೆ. ಪ್ರಕರಣದಲ್ಲಿ ಒಟ್ಟು 24 ಮಂದಿ ಆರೋಪಿಗಳಿದ್ದು, 10 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.

2019 ಫೆಬ್ರವರಿ 17ರಂದು ರಾತ್ರಿ 7.30ಕ್ಕೆ ಪೆರಿಯ ಬಳಿಯ ಕಲ್ಯೋಟ್‌ ಕುರಂಗರ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಾದ ಶರತ್‌ಲಾಲ್‌ ಮತ್ತು ಕೃಪೇಶ್‌ ಅವರನ್ನು ತಡೆದು ನಿಲ್ಲಿಸಿ ಕಡಿದು ಕೊಲೆಗೈಯಲಾಗಿತ್ತು. ಆರಂಭದಲ್ಲಿ ಬೇಕಲ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಕ್ರೈಂಬ್ರಾಂಚ್‌ಗೆ ವಹಿಸಲಾಗಿದ್ದರೂ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಕೊಲೆಯಾದವರ ಕುಟುಂಬ ಸದಸ್ಯರು ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಅದರಂತೆ ಸಿಬಿಐ ಡಿವೈಎಸ್‌ಪಿ ಟಿ.ಪಿ. ಅನಂತಕೃಷ್ಣನ್‌ ನೇತೃತ್ವದ ತಂಡ ತನಿಖೆ ನಡೆಸಿ 2021 ಡಿ. 3ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. 2023ರ ಫೆ. 2ರಿಂದ ಕೊಚ್ಚಿ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿತ್ತು. 292 ಮಂದಿ ಸಾಕ್ಷಿಗಳ ಪೈಕಿ 154 ಮಂದಿಯ ವಿಚಾರಣೆ ನಡೆದು 20 ತಿಂಗಳ ಬಳಿಕ ತೀರ್ಪು ನೀಡಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಪಿಲಿಕುಳದ ಬಳಿ ಗಾಂಜಾ ಮಾರಾಟ; ಇಬ್ಬರು ಆರೋಪಿಗಳ ಬಂಧನ

Next Post

ಬಂಟ್ವಾಳ: ಸಿಂಗಾರಿ ಬೀಡಿ, ಸಿಂಗಾರಿ ಕಾಂಪ್ಲೆಕ್ಸ್, ಸಿಂಗಾರಿ ಟೆಕ್ಸ್ ಟೈಲ್ಸ್ ಉದ್ಯಮಿ ಮನೆಗೆ ನಕಲಿ ಇಡಿ ರೇಡ್: ದೋಚಿದ್ದು ಸುಮಾರು 30 ಲಕ್ಷ

Related Posts

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್
ಕ್ರೈಮ್ ನ್ಯೂಸ್

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

April 29, 2026
193
ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!
ಕ್ರೈಮ್ ನ್ಯೂಸ್

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

April 27, 2026
168
Next Post
ಬಂಟ್ವಾಳ: ಸಿಂಗಾರಿ ಬೀಡಿ, ಸಿಂಗಾರಿ ಕಾಂಪ್ಲೆಕ್ಸ್, ಸಿಂಗಾರಿ ಟೆಕ್ಸ್ ಟೈಲ್ಸ್ ಉದ್ಯಮಿ ಮನೆಗೆ ನಕಲಿ ಇಡಿ ರೇಡ್: ದೋಚಿದ್ದು ಸುಮಾರು 30 ಲಕ್ಷ

ಬಂಟ್ವಾಳ: ಸಿಂಗಾರಿ ಬೀಡಿ, ಸಿಂಗಾರಿ ಕಾಂಪ್ಲೆಕ್ಸ್, ಸಿಂಗಾರಿ ಟೆಕ್ಸ್ ಟೈಲ್ಸ್ ಉದ್ಯಮಿ ಮನೆಗೆ ನಕಲಿ ಇಡಿ ರೇಡ್: ದೋಚಿದ್ದು ಸುಮಾರು 30 ಲಕ್ಷ

Discussion about this post

Recent News

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

April 29, 2026
193
ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
2
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

April 29, 2026
ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

April 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d