ಬ್ಯಾಂಕಾಕ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಬೌಲರ್, ವಿಶ್ವವಿಖ್ಯಾತ ಸ್ಮಿನ್ ಮಾಂತ್ರಿಕ ಶೇನ್ ವಾರ್ನ್ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.
ಮನೆಯಿಂದ ಹೊರಬಾರದ ಕಾರಣ ಅನುಮಾನಗೊಂಡು ತಪಾಸಣೆ ನಡೆಸಿದಾಗ ಒಳಗೆ ಶೇನ್ ವಾರ್ನ್ ನಿಶ್ಚಲ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ವೇಳೆಗಾಗಲೇ ಅವರು ಸತ್ತು ಹೋಗಿದ್ದರು ಎಂದು ಆತನ ಮನೆಯವರು ತಿಳಿಸಿದ್ದಾರೆ.
ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮನೆಯವರು ಖಾಸಗಿತನ ಕಾಪಾಡುವಂತೆ ಮಾಧ್ಯಮದವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಲೆಗ್ ಸ್ಪಿನ್ ಬೌಲಿಂಗ್ ಕಲೆಗೆ ಹೊಸ ಭಾಷ್ಯ ಬರೆದ ವಾರ್ನ್ 15 ವರ್ಷಗಳ ಕ್ರಿಕೆಟ್ ಜೀವನದಲ್ಲಿ 708 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಶ್ರೀಲಂಕಾದ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (800 ವಿಕೆಟ್) ಮಾತ್ರ ವಾರ್ನ್ ಅವರನ್ನು ಮೀರಿಸಿದ್ದಾರೆ.
‘ಆಟದಲ್ಲಿ ದಂತಕತೆಯಾದ ಇಬ್ಬರು ಆಟಗಾರರು ಅತ್ಯಲ್ಪ ಅವಧಿಯಲ್ಲಿ ನಮ್ಮನ್ನು ಅಗಲಿದ್ದಾರೆ. ಪದಗಳೇ ಹೊರಡುತ್ತಿಲ್ಲ. ದುಃಖಿತನಾಗಿದ್ದೇನೆ. ಮಾರ್ಷ್ ಮತ್ತು ವಾರ್ನ್ ಕುಟುಂಬಕ್ಕೆ ನನ್ನ ಸಂತಾಪಗಳು. ನಂಬಲಾಗುತ್ತಿಲ್ಲ’ ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.