ಕೋಲ್ಕತ್ತಾ: ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ನಿನ್ನೆ ತನಗಿಂತ 28 ವರ್ಷ ಚಿಕ್ಕವಳಾಗಿರುವ ಶಿಕ್ಷಕಿ ಬುಲ್ ಬುಲ್ ಸಹಾಳನ್ನು ವರಿಸಿದ್ದಾರೆ. ದಂಪತಿಗಳು ಕೆಲವು ಸಮಯದಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದರು ಮತ್ತು ಕಳೆದ ತಿಂಗಳು ಅವರು ನಿಶ್ಚಿತಾರ್ಥ ಮಾಡಿಕೊಂಡರು. ಕೋಲ್ಕತ್ತಾದಲ್ಲಿ ಬುಲ್ ಬುಲ್ ಶಾ ಅವರನ್ನು ಅರುಣ್ ಲಾಲ್ ಕೈಹಿಡಿದಿದ್ದಾರೆ. ಬಳಿಕ ನವದಂಪತಿ ಕೇಕ್ ಕಟ್ ಮಾಡಿದ್ದಾರೆ. ಇತ್ತ ಬುಲ್ ಬುಲ್ ಅವರು ಕೈಗೆ ಮೆಹಂದಿ ಹಾಕಿ ಫೋಟೋ ತೆಗೆಸಿಕೊಂಡಿದ್ದಾರೆ. ಇದೀಗ ಈ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಅಲ್ಲದೆ ಕುಟುಂಬದವರಿಗೆ ಹಾಗೂ ಗೆಳೆಯರಿಗೆ ನವದಂಪತಿ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಶ್ರೀ ಲಾಲ್‌ಗಿಂತ 28 ವರ್ಷ ಕಿರಿಯ ಮತ್ತು ಕೋಲ್ಕತ್ತಾದ ಶಾಲೆಯೊಂದರಲ್ಲಿ ಕಲಿಸುತ್ತಿರುವ ಶ್ರೀಮತಿ ಸಹಾ, ಮೇ 2 ರಂದು ನಡೆದ ಅವರ ಮದುವೆಯ ಕೆಲವು ಚಿತ್ರಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳು ವೈರಲ್ ಆಗಿವೆ.
66 ವರ್ಷದ ಅರುಣ್ ಲಾಲ್ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯ ಕೋಚ್ ಆಗಿದ್ದಾರೆ. ವರದಿಗಳ ಪ್ರಕಾರ, ಲಾಲ್ ಮತ್ತು ಸಹಾ ಬಹುಕಾಲದಿಂದ ಸಂಬಂಧ ಹೊಂದಿದ್ದರು. ಲಾಲ್ ಅವರ ಮೊದಲ ಪತ್ನಿ ರೀನಾ ಅವರಿಂದ ಒಪ್ಪಿಗೆ ಪಡೆದ ನಂತರವೇ ಅವರು ಈ 2ನೇ ಮದುವೆ ಪ್ಲ್ಯಾನ್ ಮಾಡಿದ್ದಾರೆ.
ಈಗಾಗಲೇ ಅವರು ತಮ್ಮ ಮೊದಲ ಪತ್ನಿಯೊಂದಿಗೆ ವಿಚ್ಛೇದನ ಪಡೆದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮೊದಲ ಪತ್ನಿಯೊಂದಿಗೆ ಸದ್ಯಕ್ಕೆ ಲಾಲ್ ವಾಸಿಸುತ್ತಿದ್ದಾರೆ. ಅರುಣ್ ಲಾಲ್ ಅವರು ಭಾರತಕ್ಕಾಗಿ ಒಟ್ಟು 29 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 850 ರನ್‍ಗಳನ್ನು ಗಳಿಸಿದ್ದಾರೆ ಮತ್ತು 7 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ನಂತರ ಅವರು 2016ರಲ್ಲಿ ದವಡೆಯ ಕ್ಯಾನ್ಸರ್ ಗೆ ಒಳಗಾಗಿದ್ದರು. ಮೊದಲು ಬಹುಪಾಲು ದೇಶೀಯ ಮತ್ತು ಅಂತರಾಷ್ಟ್ರೀಯ ಪಂದ್ಯಗಳಿಗೆ ಕಾಮೆಂಟರಿ ಬಾಕ್ಸ್ ನಲ್ಲಿ ಪ್ರಮುಖ ಮುಖವಾಗಿದ್ದವರು.
Discover more from Coastal Times Kannada
Subscribe to get the latest posts sent to your email.
Discussion about this post