ನವದೆಹಲಿ, ಜ 05 : ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಆಪ್‌ಗೆ ಅಪ್ಲೋಡ್ ಮಾಡಿ, ಹರಾಜಿಗಿಟ್ಟು, ಕಿರುಕುಳ ಮತ್ತು ಅವಮಾನ ಮಾಡುತ್ತಿದ್ದ ಪ್ರಕರಣ ಬಯಲಿಗಿದ ಬಳಿಕ ಇದೀಗ ಫೇಸ್‌ಬುಕ್, ಮತ್ತು ಟೆಲಿಗ್ರಾಮ್‌ನಲ್ಲಿ ಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಟೆಲಿಗ್ರಾಂ, ಫೇಸ್‌ಬುಕ್‌ನಲ್ಲಿರುವ ಗ್ರೂಪ್‌ಗಳು ಮತ್ತು ಪೇಜ್‌ಗಳು ಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಫೋಟೋಗಳನ್ನು ಹಂಚಿಕೊಂಡು ನಿಂದನೆ ಮಾಡುತ್ತಿವೆ ಎಂದು ಅನ್ಶುಲ್ ಸಕ್ಸೇನಾ ಎಂಬ ಯೂಟ್ಯೂಬರ್ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಈ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಚಾನಲ್ ಅನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.
ಟೆಲಿಗ್ರಾಂ ಚಾನೆಲ್ ಕುರಿತು ಟ್ವಿಟ್ಟರ್‌ನಲ್ಲಿ ನೀಡಿದ ದೂರಿಗೆ ಪ್ರತಿಕ್ರಿಯಿಸಿದ ಅವರು, “ಚಾನೆಲ್ ಅನ್ನು ನಿರ್ಬಂಧಿಸಲಾಗಿದ್ದು, ಕೇಂದ್ರ ಸರ್ಕಾರವು ಈ ವಿರುದ್ಧದ ಕ್ರಮಕ್ಕಾಗಿ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದಿದ್ದಾರೆ.
ಇನ್ನು ಫೇಸ್‌ಬುಕ್‌ನಲ್ಲಿ ಮಹಿಳೆಯರನ್ನು ನಿಂದಿಸುವ ಹಲವಾರು ಪೇಜ್‌ಗಳು ಮತ್ತು ಗ್ರೂಪ್ ಗಳು ಕೂಡ ಕಾಣಿಸಿಕೊಂಡಿದ್ದು, ಯಾರ ವಿರುದ್ಧ ಟ್ವಿಟರ್ ಬಳಕೆದಾರರಿಂದ ಟ್ವೀಟ್ ಮಾಡಲಾಗಿದೆ ಎಂಬ ದೂರುಗಳು ಬಂದಿದ್ದು, ಇದಕ್ಕೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮೆಟಾಗೆ ತಿಳಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರೆ ಎಂದು ಹೇಳಿದರು.
ಈ ಹಿಂದೆ ಜುಲೈ 2021 ರಲ್ಲಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಆಪ್‌ಗೆ ಅಪ್ಲೋಡ್ ಮಾಡಿ, ಹರಾಜಿಗಿಟ್ಟು, ಕಿರುಕುಳ ಮತ್ತು ಅವಮಾನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post