ಮಂಗಳೂರು, ಜು. 5: ಭಾರೀ ಗಾಳಿಯೊಂದಿಗೆ ಸುರಿದ ಮಳೆಯ ಪರಿಣಾಮ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಕಟ್ಟಡದ ಮೇಲಿದ್ದ ಭಾರೀ ಗಾತ್ರದ ಹೋರ್ಡಿಂಗ್ ಬಿದ್ದ ಪರಿಣಾಮ ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಹಲವು ವಾಹನಗಳು ಜಖಂಗೊಂಡಿರುವ ಬಗ್ಗೆ ವರದಿಯಾಗಿದೆ.
ಈ ಪ್ರದೇಶದಲ್ಲಿ ಶಾಲಾ ಮಕ್ಕಳ ವಾಹನಗಳು ಸಂಚರಿಸುತ್ತಿರುತ್ತವೆ. ಶಾಲಾ ಕಾಲೇಜು ರಜೆ ಇದ್ದ ಕಾರಣ ಈ ಘಟನೆ ಸಂಭವಿಸುವ ಸಂದರ್ಭ ಜನರ ಓಡಾಟ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಸುಮಾರು 50 ವರ್ಷಗಳಿಗೂ ಹಿಂದಿನ ಕಟ್ಟಡದಲ್ಲಿ ಎರಡೆರಡು ಟವರ್ಗಳನ್ನು ಕೂಡಾ ಅಳವಡಿಸಲಾಗಿದೆ. ಇದು ಯಾವತ್ತಿಗೂ ಅಪಾಯಕಾರಿಯೇ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ .
‘ಹೋರ್ಡಿಂಗ್ ಬಿದ್ದ ಪರಿಣಾಮ ಪಾರ್ಕ್ ಮಾಡಲಾಗಿದ್ದ 12ಕ್ಕೂ ಅಧಿಕ ವಾಹನಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳೂ ಬಿದ್ದು ಹಾನಿಯಾಗಿವೆ. ನಿತ್ಯ ಜನಸಂಚಾರವಿರುವ, ಈ ಜಾಗದಲ್ಲಿ ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ನಡೆದಿಲ್ಲ’ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post