ಬೆಂಗಳೂರು: ಈ ವರ್ಷದ ಆರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರ ತೆರೆಗೆ ಕಂಡು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತ್ತು. ಹಿಂದಿ ಭಾಷೆಗೆ ಡಬ್ಬಿಂಗ್ ಆದ ಚಿತ್ರ ಸಹ ವೀಕ್ಷಣೆಯಲ್ಲಿ ಇದೀಗ ಮೈಲಿಗಲ್ಲು ಸ್ಥಾಪಿಸಿದೆ. ಚಿತ್ರದ ಹಿಂದಿ ಅವತರಣಿಕೆಯನ್ನು ಇದುವರೆಗೆ 20 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ಉಮಾಪತಿ ನಿರ್ಮಾಣದ ಚಿತ್ರ ರಾಬರ್ಟ್ ದರ್ಶನ್ ಅವರ ಈ ವರ್ಷದ ಹಿಟ್ ಚಿತ್ರ. ಇದರಲ್ಲಿ ಆಶಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದರೆ ಜಗ್ಗು ಬಾಯ್, ರವಿಶಂಕರ್, ವಿನೋದ್ ಪ್ರಭಾಕರ್ ಮೊದಲಾದವರು ಕಾಣಿಸಿಕೊಂಡಿದ್ದರು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿದ್ದರು.
.@dasadarshan * #Roberrt #Hindi dubbed movie crosses #20million views. A blockbuster entertainer of 2021 directed by @TharunSudhir produced by @UmapathyFilms @StarAshaBhat @IamJagguBhai @ravishankar #VinodPrabhakar #SonalMonteiro @ArjunJanyaMusic 👇https://t.co/7pnj8ZKFG4 pic.twitter.com/2jWfEufmFC
— A Sharadhaa (@sharadasrinidhi) September 4, 2021
Discover more from Coastal Times Kannada
Subscribe to get the latest posts sent to your email.
Discussion about this post