ಮಂಗಳೂರು: ನಗರದ ಬೋಂದೆಲ್ನ ಕೆಎಚ್ಬಿ ಕಾಲೊನಿಯಲ್ಲಿ ಬ್ಯಾಟರಿ ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಸ್ಕೂಟರ್ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯಿಂದ ಕೊಮಾಕಿ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಕರಕಲಾಗಿದೆ. ಕೆಎಚ್ಬಿ ಕಾಲೊನಿಯ ಜಯರಾಮ್ ಎಂಬುವರು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬ್ಯಾಟರಿ ಚಾರ್ಜ್ ಮಾಡಲು ಇಟ್ಟು ಹೋಗಿದ್ದರು. ಸ್ವಲ್ಪ ಹೊತ್ತಿನಲ್ಲೇ ನೆರೆಮನೆಯವರಿಗೆ ಭಾರಿ ಸದ್ದು ಕೇಳಿಬಂದಿತ್ತು. ಅವರು ಸ್ಥಳಕ್ಕೆ ಧಾವಿಸಿದಾಗ ಬೆಂಕಿ ಹೊತ್ತಿ ಸ್ಕೂಟರ್ ಉರಿಯುತ್ತಿತ್ತು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಸ್ಥಳೀಯರೇ ಬೆಂಕಿಯನ್ನು ನಂದಿಸಿದ್ದರು.
ಸ್ಕೂಟರ್ನ ಸಮೀಪವೇ ಕಾರೊಂದನ್ನು ನಿಲ್ಲಿಸಲಾಗಿತ್ತು. ಆದರೆ, ಬೆಂಕಿಯಿಂದ ಕಾರಿಗೆ ಯಾವುದೇ ಅಪಾಯ ಆಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ‘ಮೂರು ತಿಂಗಳ ಹಿಂದಷ್ಟೇ ಕೊಮಾಕಿ ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರನ್ನು ಖರೀದಿಸಿದ್ದೆ. ಬೆಂಕಿ ಹೊತ್ತಿಕೊಳ್ಳಲು ಖಚಿತ ಕಾರಣ ಏನೆಂದು ತಿಳಿದಿಲ್ಲ. ಕಂಪನಿಯ ಪ್ರತಿನಿಧಿಗಳು ಬಂದು ಪರಿಶೀಲನೆ ನಡೆಸುತ್ತಿದ್ದಾರೆ.