ಮಂಗಳೂರು, ಜೂ 06 : ಕುತ್ತಾರು ಬಳಿಯ ಭಂಡಾರ ಬೈಲು ಎಂಬಲ್ಲಿ ಟಾಟಾ ಏಸ್ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ನಾಲ್ವರನ್ನು ಸೋಮವಾರ ತಡ ರಾತ್ರಿ ಕಾಲಾಪು ಬಳಿ ಬಂಧಿಸಲಾಗಿದೆ, ಉಳ್ಳಾಲದ ಆಝಾದ್ ನಗರ ನಿವಾಸಿ ಅಹಮ್ಮದ್ ಇರ್ಷಾದ್, ಅಳೇಕಳ ನಿವಾಸಿ ಜಾಫರ್ ಸಾಧಿಕ್, ಬಸ್ತಿಪಡ್ಪು ನಿವಾಸಿ ಫಾಯಝ್, ಮಂಜೇಶ್ವರ ಬಂಗ್ರ ನಿವಾಸಿ ಖಾಲಿದ್ ಬಿ.ಎಮ್ ಬಂಧಿತ ಆರೋಪಿಗಳು.
ಆರೋಪಿಗಳು ಅಮಲಮೊಗರು ಎಂಬಲ್ಲಿ ವೃದ್ಧೆಯೊಬ್ಬರಿಂದ ನಾಲ್ಕು ಹಸುಗಳನ್ನು ಖರೀದಿಸಿ ಕೇರಳ ನೋಂದಾಯಿತ ಸಂಖ್ಯೆಯ ಮಿನಿ ಗೂಡ್ಸ್ ವಾಹನದಲ್ಲಿ ಉಳ್ಳಾಲದ ಅಲೇಕಲಕ್ಕೆ ವಧೆ ಮಾಡಲು ಸಾಗಿಸುತ್ತಿದ್ದರು. ದ್ವಿಚಕ್ರ ವಾಹನವೊಂದು ವಾಹನವನ್ನು ಹಿಂಬಾಲಿಸುತ್ತಿತ್ತು. ಈ ವೇಳೆ ವಾಹನ ಕೆಟ್ಟು ರಸ್ತೆಯ ಮೇಲೆ ಏರಲು ಸಾಧ್ಯವಾಗದಿದ್ದಾಗ, ಈ ಮೂವರು ವಾಹನ ತಳ್ಳಲು ಪ್ರಾರಂಭಿಸಿದರು. ಸ್ಥಳೀಯ ನಿವಾಸಿಗಳು ವಾಹನವನ್ನು ತಳ್ಳಿ ಸಹಾಯ ಮಾಡಲು ಹೋದಾಗ ನಾಲ್ಕು ಹಸುಗಳನ್ನು ಕಟ್ಟಿ ಹಾಕಿ ಟಾರ್ಪಲ್ ಹಾಕಿರುವುದು ಗಮನಕ್ಕೆ ಬಂದಿತ್ತು.
ಚಾಲಕನಲ್ಲಿ ವಿಚಾರಿಸಿದಾಗ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದರು. ಎಸ್ಕಾರ್ಟ್ ನೀಡುತ್ತಿದ್ದ ಇಬ್ಬರು ಆರೋಪಿಗಳು ಬೈಕನ್ನ ಬಿಟ್ಟು ಓಡಿ ಹೋಗಿದ್ದರು. ಈ ವೇಳೆ, ವಾಹನದಲ್ಲಿದ್ದ ಒಂದು ಹಸು ಹೊರಗೆ ಓಡಿ ತಪ್ಪಿಸಿತ್ತು. ಬಾಕಿ ಉಳಿದಿದ್ದ ಒಂದು ಹಸು, ಎರಡು ಹೋರಿ, ಮತ್ತೊಂದು ಕರುವನ್ನ ರಕ್ಷಿಸಿದ ಬಜರಂಗದಳದ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣೆಗೆ ಒಪ್ಪಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಹಿಂಸೆ ಕಾಯ್ದೆ, ಐಪಿಸಿ 379 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post