• About us
  • Contact us
  • Disclaimer
Wednesday, July 29, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ

Coastal Times by Coastal Times
July 29, 2026
in ಕ್ರೈಮ್ ನ್ಯೂಸ್
ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ
17
VIEWS
WhatsappTelegramShare on FacebookShare on Twitter

ಮಂಗಳೂರು: 2021 ಜನವರಿ 25ರಂದು ಬಂಟ್ವಾಳ ತಾಲೂಕಿನಲ್ಲಿ ಚಿನ್ನಾಭರಣ ಕಳ್ಳತನದ ಸಂಚು ಹೂಡಿ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಹತ್ಯೆಗೈದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕರವರು ಈ ಮಾಹಿತಿ ನೀಡಿದ್ದಾರೆ.

ಅಮ್ಟಾಡಿ ಹೀರಾ ನಿವಾಸಿ ವಿಲ್ಮಾ ಪ್ರಸ್ಚಿತಾ ಬಾರೆಟ್ಟೊ (30), ನರಿಕೊಂಬು ಅಂತರಹೌಸ್‌ ನಿವಾಸಿ ಸತೀಶ್‌ (33) ನರಿಕೊಂಬು ಪದಕಟ್ಟೆ ಹೊಯಿಗೆಬೈಲು ನಿವಾಸಿ ಚರಣ್‌ ಕುಮಾರ್‌ (34) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು.

ಪ್ರಕರಣದ ಹಿನ್ನೆಲೆ: ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಪಾಂಡೀಲಿ ಎಂಬಲ್ಲಿ ಬೆನೆಡಿಕ್ಟ್‌ ಕಾರ್ಲೊ (80) ಅವರು ತನ್ನ ಪತಿ ಇನಾಸ್‌ ಕಾರ್ಲೋ ಜತೆ ವಾಸಿಸುತ್ತಿದ್ದರು. ಇನಾರ್ಸ್‌ ಕಾರ್ಲೋ ಅವರು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಈ ದಂಪತಿಯ ಆರೈಕೆಗಾಗಿ ವಿಲ್ಮಾ ಪ್ರಸ್ಚಿತಾ 2 ತಿಂಗಳಿನಿಂದ ಕೆಲಸಕ್ಕೆ ಬರುತ್ತಿದ್ದಳು. ಬೆನೆಡಿಕ್ಟ್‌ ಅವರಲ್ಲಿ ಚಿನ್ನಾಭರಣಗಳಿರುವುದನ್ನು ಗಮನಿಸಿದ ವಿಲ್ಮಾ ಅದನ್ನು ಕಳ್ಳತನ ಮಾಡುವ ಸಂಚು ರೂಪಿಸಿದ್ದಳು. ತನ್ನ ಪರಿಚಯದ ಸತೀಶನಿಗೆ ಈ ಮಾಹಿತಿ ನೀಡಿದಾಗ ಆತ ಬೆನೆಡಿಕ್ಟ್‌ ಕಾರ್ಲೋ ಅವರಿಗೆ ಆಹಾರದ ಜತೆ ವಿಷ ಉಣಿಸುವ ಸಲಹೆ ನೀಡುತ್ತಾನೆ. ಅದರಂತೆ 2021ರ ಜ.25ರಂದು ರಾತ್ರಿ ವಿಲ್ಮಾ ವಿಷವುಣಿಸಿದ್ದಳು. ಇದರಿಂದ ಬೆನೆಡಿಕ್ಟಾ ಅರೆಜೀವ ಸ್ಥಿತಿಯಲ್ಲಿದ್ದರು. ಈ ವೇಳೆ ವಿಲ್ಮಾ ಮತ್ತೆ ಸತೀಶ್‌ಗೆ ಕರೆ ಮಾಡಿದ್ದು, ಬೆನೆಡಿಕ್ಟಾರನ್ನು ಉಸಿರುಗಟ್ಟಿ ಕೊಲ್ಲುವ ಯೋಜನೆ ರೂಪಿಸುತ್ತಾರೆ. ಅದಕ್ಕಾಗಿ ಚರಣ್‌ ಕುಮಾರ್‌ ಎಂಬಾತನನ್ನು ಸತೀಶ್ ಆ ಮನೆಗೆ ಕಳುಹಿಸುತ್ತಾನೆ. ಚರಣ್‌ ಕುಮಾರ್‌ ಆ ಮನೆಗೆ ತೆರಳಿ ವಿಲ್ಮಾ ಜತೆ ಸೇರಿಕೊಂಡು ಬೆನೆಡಿಕ್ಟ್‌ರನ್ನು ತಲೆದಿಂಬು ಹಾಗೂ ಬೈರಾಸ್‌ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡುತ್ತಾರೆ.

ಬಳಿಕ ಬೆನೆಟಿಕ್ಟಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಮನೆಯಲ್ಲಿದ್ದ ಚಿನ್ನದ ಕಿವಿಯೊಲೆ, ಕೈ ಬಳೆ, ಉಂಗುರಗಳು, ಚೈನ್‌ ಸೇರಿದಂತೆ ಸುಮಾರು 2,75,000 ರೂ. ಮೌಲ್ಯದ ಒಟ್ಟು 61.070 ಗ್ರಾ ತೂಕದ ಚಿನ್ನಾಭರಣವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣ ಜ.26ರಂದು ಬೆಳಕಿಗೆ ಬಂದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗುತ್ತದೆ. ತನಿಖೆ ನಡೆಸಿದ ಪೊಲೀಸರಿಗೆ ಇದೊಂದು ವ್ಯವಸ್ಥಿತ ಕೊಲೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಒಟ್ಟು 44 ಸಾಕ್ಷಿದಾರರ ಪೈಕಿ 32 ಸಾಕ್ಷಿದಾರ ವಿಚಾರಣೆ ನಡೆಸಿ ಮೂವರೂ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿಗಳು ಪಾವತಿಸಿದ ಒಟ್ಟು 33 ಸಾವಿರ ರೂ. ದಂಡದಲ್ಲಿ 8 ಸಾವಿರ ರೂ ಗಳನ್ನು ಸರ್ಕಾರಕ್ಕೆ ಪಾವತಿಸಬೇಕು ಹಾಗೂ 25 ಸಾವಿರ ರೂ.ನ್ನು ಮೃತರ ಮಗ ರೊನಾಲ್ಡ್‌ ಕಾರ್ಲೋ ಅವರಿಗೆ ನೀಡಲು ಆದೇಶಿಸಲಾಗಿದೆ. ಅಂದಿನ ಪೊಲೀಸ್‌ ನಿರೀಕ್ಷಕ ಟಿ.ಡಿ. ನಾಗರಾಜ್‌ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕರವರು ವಾದ ಮಂಡನೆ ಮಾಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಉಳ್ಳಾಲದಲ್ಲಿ ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್‌ ತಪಾಸಣೆ: 159 ಮಂದಿಯಲ್ಲಿ ಒಬ್ಬನಿಗೆ ‘ಪಾಸಿಟಿವ್’

Related Posts

ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!
ಕ್ರೈಮ್ ನ್ಯೂಸ್

ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಚೇತನ್ 11 ದಿನಗಳ ಚಿಕಿತ್ಸೆಯ ಬಳಿಕ ಪೊಲೀಸ್ ವಶಕ್ಕೆ

July 28, 2026
28
ಕಾಪು: ಟೈಮಿಂಗ್‌ ವಿಚಾರಕ್ಕೆ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ, ಬಸ್‌ಗಳ ನಡುವೆ ಡಿಕ್ಕಿ, ಗುದ್ದಾಟ, ನಾಲ್ವರ ಬಂಧನ
ಕ್ರೈಮ್ ನ್ಯೂಸ್

ಕಾಪು: ಟೈಮಿಂಗ್‌ ವಿಚಾರಕ್ಕೆ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ, ಬಸ್‌ಗಳ ನಡುವೆ ಡಿಕ್ಕಿ, ಗುದ್ದಾಟ, ನಾಲ್ವರ ಬಂಧನ

July 28, 2026
57

Discussion about this post

Recent News

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ

July 29, 2026
17
ಉಳ್ಳಾಲದಲ್ಲಿ ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್‌ ತಪಾಸಣೆ: 159 ಮಂದಿಯಲ್ಲಿ ಒಬ್ಬನಿಗೆ ‘ಪಾಸಿಟಿವ್’

ಉಳ್ಳಾಲದಲ್ಲಿ ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್‌ ತಪಾಸಣೆ: 159 ಮಂದಿಯಲ್ಲಿ ಒಬ್ಬನಿಗೆ ‘ಪಾಸಿಟಿವ್’

July 29, 2026
22
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ

July 29, 2026
ಉಳ್ಳಾಲದಲ್ಲಿ ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್‌ ತಪಾಸಣೆ: 159 ಮಂದಿಯಲ್ಲಿ ಒಬ್ಬನಿಗೆ ‘ಪಾಸಿಟಿವ್’

ಉಳ್ಳಾಲದಲ್ಲಿ ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್‌ ತಪಾಸಣೆ: 159 ಮಂದಿಯಲ್ಲಿ ಒಬ್ಬನಿಗೆ ‘ಪಾಸಿಟಿವ್’

July 29, 2026
ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

July 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d