ಹೈದರಾಬಾದ್ ಜುಲೈ 6 : ಬೆಳಗ್ಗೆ 5.12ಕ್ಕೆ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್ನಲ್ಲಿ ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸೂರ್ಯ ಹುಟ್ಟುವುದಕ್ಕೂ ಮುನ್ನವೇ ಬಿಡುಗಡೆಗೊಂಡ ಈ ಟೀಸರ್ ವೀಕ್ಷಿಸಲು ಪ್ರಭಾಸ್ ಅಭಿಮಾನಿಗಳು ರಾತ್ರಿಯಿಡೀ ನಿದ್ರೆ ಬಿಟ್ಟು ಕಾಯುತ್ತಾ ಕುಳಿತಿದ್ದರು. ‘ಸಲಾರ್’ ಸಿನೆಮಾದ ಟೀಸರ್ ಬಿಡುಗಡೆಯಾಗಿದ್ದು, ಕೇವಲ 12 ಗಂಟೆಗಳಲ್ಲಿ 45 ಮಿಲಿಯನ್ಗಿಂತಲೂ ಅಧಿಕ ವೀಕ್ಷಣೆಯಾಗಿದೆ.
ಸಲಾರ್ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಮಲಯಾಳಂ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಟಿನು ಆನಂದ್, ಈಶ್ವರಿ ರಾವ್, ಜಗಪತಿ ಬಾಬು, ಶ್ರೀಯಾ ರೆಡ್ಡಿ, ಗರುಡ ರಾಮ್ ಸೇರಿದಂತೆ ಬಹು ತಾರಾಗಣ ಇದೆ.
ಈ ಟೀಸರ್ನಲ್ಲಿ ಶುರುವಿನಿಂದ ಕೊನೆಯವರೆಗೂ ಮಾಸ್ ಎಲಿಮೆಂಟ್ಗಳ ಸರಮಾಲೆಯೇ ಇದೆ. ವಿದೇಶಿ ವಿಲನ್ಗಳ ಗುಂಪು ಓರ್ವನನ್ನು ಗುಂಡಿಕ್ಕಿ ಕೊಲ್ಲಲು ಗುಂಪುಗಟ್ಟಿ ನಿಂತಿರುವಾಗ ಆ ವಿಲನ್ಗಳ ಜತೆ ಆತ ( ಟಿನ್ನು ಆನಂದ್ ) ಮಾತನಾಡಲು ಆರಂಭಿಸುತ್ತಾನೆ. ‘ಸಿಂಪಲ್ ಇಂಗ್ಲಿಷ್.. ನೋ ಕನ್ಫ್ಯೂಷನ್..” ಎಂದು ಡೈಲಾಗ್ ಆರಂಭಿಸುವ ಆತ “ಲಯನ್, ಚೀತಾ, ಟೈಗರ್, ಎಲಿಫೆಂಟ್ ವೆರಿ ಡೇಂಜರಸ್.. ಬಟ್.. ನಾಟ್ ಇನ್ ಜುರಾಸಿಕ್ ಪಾರ್ಕ್.. ಬಿಕಾಸ್ ಇನ್ ದಟ್ ಪಾರ್ಕ್, ದೇರ್ ಈಸ್ ಎ..” ಎಂದು ನಾಯಕ ನಟ ಪ್ರಭಾಸ್ಗೆ ಬಿಲ್ಡಪ್ ಕೊಡ್ತಾನೆ.
ಸಲಾರ್ ಟೀಸರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ವ್ಯೂಸ್ ಹಾಗೂ ಲೈಕ್ಸ್ ಪಡೆದುಕೊಳ್ಳಲು ಆರಂಭಿಸಿದ್ದು, ದಾಖಲೆಗಳ ಎಣಿಕೆ ಮಾಡುವಲ್ಲಿ ಅಭಿಮಾನಿಗಳು ಹಾಗೂ ಪ್ರಭಾಸ್ ಫ್ಯಾನ್ಸ್ ನಿರತರಾಗಿದ್ದಾರೆ. ಇನ್ನು ದೊಡ್ಡ ಹೈಪ್ನೊಂದಿಗೆ ಬಿಡುಗಡೆಯಾದ ಸಲಾರ್ ಚಿತ್ರದ ಟೀಸರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಲಕ್ಷ ಲೈಕ್ಗಳನ್ನು ಪಡೆದುಕೊಂಡಿದೆ.
Discussion about this post