• About us
  • Contact us
  • Disclaimer
Monday, September 21, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ – ರೋಹನ್ ಕಾರ್ಪೊರೇಷನ್‌ನಿಂದ ಮಕ್ಕಳಿಗಾಗಿ ‘ಫ್ರೀಡಮ್ ಪ್ಯಾಲೆಟ್ 2026’ ಚಿತ್ರಕಲಾ ಸ್ಪರ್ಧೆ

Coastal Times by Coastal Times
August 6, 2026
in ಕರಾವಳಿ
ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ – ರೋಹನ್ ಕಾರ್ಪೊರೇಷನ್‌ನಿಂದ ಮಕ್ಕಳಿಗಾಗಿ ‘ಫ್ರೀಡಮ್ ಪ್ಯಾಲೆಟ್ 2026’ ಚಿತ್ರಕಲಾ ಸ್ಪರ್ಧೆ
37
VIEWS
WhatsappTelegramShare on FacebookShare on Twitter

ಮಂಗಳೂರು, ಆ. 05 : ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಕ್ಕಳಲ್ಲಿ ದೇಶಪ್ರೇಮ, ಸೃಜನಶೀಲತೆ ಮತ್ತು ಕಲಾತ್ಮಕ ಅಭಿವ್ಯಕ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ ‘ಫ್ರೀಡಮ್ ಪ್ಯಾಲೆಟ್ 2026’ ಹೆಸರಿನ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಸ್ವಾತಂತ್ರ್ಯೋತ್ಸವದ ವಿಷಯಾಧಾರಿತ ಚಿತ್ರಗಳ ಮೂಲಕ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದು ಇದರ ಉದ್ದೇಶವಾಗಿದೆ

ಎರಡು ಹಂತಗಳಲ್ಲಿ ಸ್ಪರ್ಧೆ : ಸ್ಪರ್ಧೆಯ ಮೊದಲ ಹಂತದಲ್ಲಿ ಭಾಗವಹಿಸುವವರು ಸ್ವಾತಂತ್ರ್ಯೋತ್ಸವದ ವಿಷಯದ ಮೇಲೆ ಚಿತ್ರ ರಚಿಸಿ, ಆಗಸ್ಟ್ 10ರೊಳಗೆ ರೋಹನ್ ಕಾರ್ಪೊರೇಷನ್‌ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಲಿಂಕ್ ಅಥವಾ ಕ್ಯೂಆರ್ ಕೋಡ್ ಮೂಲಕ ಅಪ್‌ಲೋಡ್ ಮಾಡಬೇಕು. ಮಕ್ಕಳು ತಮ್ಮ ಮನೆ ಅಥವಾ ಶಾಲೆಯಲ್ಲೇ ಚಿತ್ರ ರಚಿಸಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಲ್ಲಿಕೆಯಾಗುವ ಚಿತ್ರಗಳ ಪೈಕಿ ಅತ್ಯುತ್ತಮ 60 ಚಿತ್ರಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ಸ್ಪರ್ಧೆಯ ಅಧಿಕೃತ ತೀರ್ಪುಗಾರರ ಸಹಭಾಗಿಯಾಗಿ Pixncil ಸಂಸ್ಥೆ ಕೈಜೋಡಿಸಿದೆ.

ಆಗಸ್ಟ್ 13ರಂದು ಅಂತಿಮ ಸುತ್ತು : ಅಂತಿಮ ಸುತ್ತು ಆಗಸ್ಟ್ 13, 2026ರಂದು ಮಂಗಳೂರಿನ ಬಿಜೈನಲ್ಲಿರುವ ರೋಹನ್ ಸಿಟಿಯಲ್ಲಿ ನಡೆಯಲಿದೆ. ಆಯ್ಕೆಯಾದ ಸ್ಪರ್ಧಿಗಳು ಸ್ಥಳದಲ್ಲೇ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅಂತಿಮ ಸುತ್ತಿನ ವಿಷಯವನ್ನು ಸ್ಪರ್ಧೆಗೆ ಒಂದು ದಿನ ಮೊದಲು ಪ್ರಕಟಿಸಲಾಗುತ್ತದೆ. ಸ್ಪರ್ಧೆಗೆ ಅಗತ್ಯವಿರುವ ಎಲ್ಲಾ ಚಿತ್ರಕಲಾ ಸಾಮಗ್ರಿಗಳನ್ನು ಆಯೋಜಕರೇ ಒದಗಿಸಲಿದ್ದಾರೆ. ಸ್ಪರ್ಧೆಯ ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ.

ಪ್ರಥಮ ಬಹುಮಾನ:  ರೂ. 25,000
ದ್ವಿತೀಯ ಬಹುಮಾನ: ರೂ.15,000
ತೃತೀಯ ಬಹುಮಾನ: ರೂ.10,000

ಇದಲ್ಲದೆ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ ಎಲ್ಲಾ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ.

ಈ ಕುರಿತು ಮಾತನಾಡಿದ ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೇರೋ, “ಪ್ರತಿಯೊಂದು ಮಗುವಿನಲ್ಲೂ ಸಮಾಜಕ್ಕೆ ಸ್ಫೂರ್ತಿಯಾಗುವ ಸೃಜನಶೀಲತೆ ಅಡಗಿದೆ. ಭಾರತದ 80ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ‘ಫ್ರೀಡಮ್ ಪ್ಯಾಲೆಟ್’ ಮೂಲಕ ಮಕ್ಕಳಲ್ಲಿ ದೇಶಪ್ರೇಮ, ಕಲಾತ್ಮಕ ಅಭಿವ್ಯಕ್ತಿ ಹಾಗೂ ಆತ್ಮವಿಶ್ವಾಸ ಬೆಳೆಸುವ ವೇದಿಕೆಯನ್ನು ನಿರ್ಮಿಸುವುದು ನಮ್ಮ ಉದ್ದೇಶ. ಈ ಸ್ಪರ್ಧೆ ಮಕ್ಕಳ ಪ್ರತಿಭೆಗೆ ಹೊಸ ಆಯಾಮ ನೀಡಲಿದೆ ಎಂಬ ವಿಶ್ವಾಸವಿದೆ,” ಎಂದು ಹೇಳಿದರು.

ರೋಹನ್ ಕಾರ್ಪೊರೇಷನ್‌ನ ನಿರ್ದೇಶಕ ಡಿಯೋನ್ ಮೊಂತೇರೋ ಮಾತನಾಡಿ, “‘ಫ್ರೀಡಮ್ ಪ್ಯಾಲೆಟ್’ ಕೇವಲ ಚಿತ್ರಕಲಾ ಸ್ಪರ್ಧೆಯಲ್ಲ. ಇದು ಮಕ್ಕಳ ಚಿಂತನೆ, ಕಲ್ಪನೆ ಹಾಗೂ ದೇಶದ ಬಗ್ಗೆ ಅವರ ದೃಷ್ಟಿಕೋನವನ್ನು ಕಲೆಯ ಮೂಲಕ ಅಭಿವ್ಯಕ್ತಿಸುವ ಅರ್ಥಪೂರ್ಣ ವೇದಿಕೆಯಾಗಿದೆ. ಇಂತಹ ಉದ್ದೇಶಪೂರ್ಣ ಕಾರ್ಯಕ್ರಮದ ಭಾಗವಾಗಿರುವುದು ನಮಗೆ ಹೆಮ್ಮೆಯ ವಿಷಯ,” ಎಂದರು.

ನೋಂದಣಿಗೆ ಆಹ್ವಾನ : ಪೋಷಕರು ತಮ್ಮ ಮಕ್ಕಳ ಚಿತ್ರಗಳನ್ನು ಆಗಸ್ಟ್ 10ರೊಳಗೆ ಸಲ್ಲಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಅಂತಿಮ ಸುತ್ತಿಗೆ ಆಯ್ಕೆಯಾದ ಸ್ಪರ್ಧಿಗಳಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಾಗುವುದು. ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ +91 90355 11821 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ರೋಹನ್ ಕಾರ್ಪೊರೇಷನ್‌ನ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಬಹುದು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಎಸ್ಐಆರ್ ಪಟ್ಟಿಯಿಂದ 1.11 ಕೋಟಿಗೂ ಅಧಿಕ ಮತದಾರರ ಹೆಸರು ಡಿಲೀಟ್ ಸಾಧ್ಯತೆ: ಗಣತಿ ನಮೂನೆ ಸಲ್ಲಿಕೆಗೆ ಆಗಸ್ಟ್​ 8 ಕೊನೆಯ ದಿನ

Next Post

ರಾ.ಹೆ. 66ರ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಹೆದ್ದಾರಿ ಪ್ರಾಧಿಕಾರ ಕಾರ್ಯಾಚರಣೆ; ಕಲ್ಲಾಪಿನಲ್ಲಿ ಅನಧಿಕೃತ ಮೀನು ಮಾರುಕಟ್ಟೆ ತೆರವು

Related Posts

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ
ಕರಾವಳಿ

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

September 19, 2026
64
ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ
ಕರಾವಳಿ

ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

September 19, 2026
56
Next Post
ರಾ.ಹೆ. 66ರ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಹೆದ್ದಾರಿ ಪ್ರಾಧಿಕಾರ ಕಾರ್ಯಾಚರಣೆ; ಕಲ್ಲಾಪಿನಲ್ಲಿ ಅನಧಿಕೃತ ಮೀನು ಮಾರುಕಟ್ಟೆ ತೆರವು

ರಾ.ಹೆ. 66ರ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಹೆದ್ದಾರಿ ಪ್ರಾಧಿಕಾರ ಕಾರ್ಯಾಚರಣೆ; ಕಲ್ಲಾಪಿನಲ್ಲಿ ಅನಧಿಕೃತ ಮೀನು ಮಾರುಕಟ್ಟೆ ತೆರವು

Discussion about this post

Recent News

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

September 19, 2026
64
ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

September 19, 2026
56
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

September 19, 2026
ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

September 19, 2026
ಮಂಗಳೂರು: ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ – ಸಿಎಂ ಘೋಷಣೆ, ಮಂಗಳೂರಿನಲ್ಲಿ ಸಂಭ್ರಮಾಚರಣೆ

ಮಂಗಳೂರು: ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ – ಸಿಎಂ ಘೋಷಣೆ, ಮಂಗಳೂರಿನಲ್ಲಿ ಸಂಭ್ರಮಾಚರಣೆ

September 18, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d