ಬಂಟ್ವಾಳ , ಸೆ 06 : ಉಸಿರಾಟ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯೊಬ್ಬರನ್ನು ಯಾವುದೇ ಝೀರೋ ಟ್ರಾಫಿಕ್ ಇಲ್ಲದೆ ಕೇವಲ ಇಂಡಿಕೇಟರ್ ಹಾಕುವ ಮೂಲಕ ಮಾಣಿ ಬುಡೋಳಿಯಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕಾರಿನಲ್ಲಿ ಅತಿ ವೇಗವಾಗಿ ತಲುಪಿಸಿ ವಿಕೇಶ್ ಶೆಟ್ಟಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಾಣಿಯ ಯುವಕ ಮಂಡಲ ಸದಸ್ಯರೂ ಆಗಿರುವ ವಿಕೇಶ್ ಶೆಟ್ಟಿ ಸುಮಾರು 19 ಕಿ.ಮೀ. ದೂರವನ್ನು ಕೇವಲ 8.5 ನಿಮಿಷದಲ್ಲಿ ತಲುಪಿಸಿದ್ದಾರೆ.
ಶುಕ್ರವಾರ ರಾತ್ರಿ ಮಾಣಿ ಸಮೀಪ ಬುಡೋಳಿಯ ಯುವತಿಯೊಬ್ಬರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದು, ಆ್ಯಂಬುಲೆನ್ಸ್‌ಗಾಗಿ ಸಂಬಂಧಪಟ್ಟವರು ಕರೆ ಮಾಡುತ್ತಿದ್ದಾಗ, ವಿಕೇಶ್ ಶೆಟ್ಟಿ ಅವರ ಗಮನಕ್ಕೆ ವಿಷಯ ಬಂದಿತು. ಈ ಸಂದರ್ಭ ತನ್ನ ಸ್ವಿಫ್ಟ್ ಕಾರನ್ನು ತೆಗೆದುಕೊಂಡು ಯುವತಿ ಹಾಗೂ ಅವರ ಸಂಬಂಧಿ ಕರನ್ನು ಕರೆದುಕೊಂಡು ರಾತ್ರಿ ಸುಮಾರು 8.30ರ ವೇಳೆಗೆ ಬುಡೋಳಿಯಿಂದ ಮಾಣಿಗೆ ಬಂದು ಅಲ್ಲಿಂದ ಪುತ್ತೂರು ಆಸ್ಪತ್ರೆಗೆ ತಲುಪಿಸಿದ್ದಾಗಿ ವಿಕೇಶ್ ಶೆಟ್ಟಿ ತಿಳಿಸಿದ್ದಾರೆ.