ಮೈಸೂರು: ಆಟವಾಡುತ್ತಿದ್ದ ಮಗುವೊಂದು ನಾಣ್ಯ ನುಂಗಿ ಮೃತಪಟ್ಟ ಧಾರುಣ ಘಟನೆ ಮ್ಯೆಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಸೆ.5 ರಂದು ನಡೆದಿದೆ. ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿ ಗ್ರಾಮದ ನಾಲ್ಕು ವರ್ಷದ ಖುಷಿ ಮೃತ ದುರ್ದೈವಿ.
ಮಗು ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿತ್ತು. ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ಮಗು ನುಂಗಿದೆ. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ವೇಳೆಯೇ ಮಗು ಮೃತಪಟ್ಟಿದೆ.
ಮಗುವಿನ ಸಾವಿನ ಸುದ್ದಿಯೂ ಪಾಲಕರಿಗೆ ಅಘಾತ ಉಂಟು ಮಾಡಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ದೀಪವಾಗವಾಗಿದ್ದ ಮಗಳ ಬಾರದ ಲೋಕಕ್ಕೆ ತೆರಳಿದ್ದು, ಮನೆಯಲ್ಲಿ ದುಃಖದ ಕಾರ್ಮೋಡ ಕವಿದಿದೆ. ಮಕ್ಕಳು ಮನೆಯಲ್ಲಿರಲಿ ಅಥವಾ ಹೊರಗಡೆ ಆಟವಾಡುತ್ತಿರಲಿ ಪಾಲಕರು ಕೇರ್ ತೆಗೆದುಕೊಳ್ಳಬೇಕಾದದ್ದು ಅತ್ಯವಶ್ಯ. ಇಲ್ಲವಾದಲ್ಲಿ ಈ ರೀತಿಯ ಅನಾಹುತಗಳಿಗೆ ಎಡೆಮಾಡಿಕೊಡಬೇಕಾಗುತ್ತದೆ.