ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋರಿಕ್ಷಾ ಪ್ರಯಾಣ ದರವನ್ನು ಮರು ಪರಿಷ್ಕರಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTA) ಹೊಸ ಆದೇಶ ಹೊರಡಿಸಿದ್ದು, ನಂತರದ ಪ್ರತಿ ಕಿಲೋಮೀಟರ್ ದರವನ್ನು ರೂ 23ಕ್ಕೆ ನಿಗದಿಪಡಿಸಲಾಗಿದೆ.
2026ರ ಆಗಸ್ಟ್ 28ರಂದು ಹೊರಡಿಸಲಾಗಿದ್ದ ಹಿಂದಿನ ಆದೇಶವನ್ನು ಹಿಂಪಡೆದು ಈ ಪರಿಷ್ಕೃತ ಆದೇಶವನ್ನು ಹೊರಡಿಸಲಾಗಿದ್ದು, 2026ರ ನವೆಂಬರ್ 1ರಿಂದ ಜಿಲ್ಲೆಯಾದ್ಯಂತ ನೂತನ ದರಗಳು ಜಾರಿಗೆ ಬರಲಿವೆ.
ಪರಿಷ್ಕೃತ ಪ್ರಯಾಣ ದರ:
ಕನಿಷ್ಠ ದರ ಮೊದಲ 1.5 ಕಿ. ಮೀ.: ರೂ. 40 (ಗರಿಷ್ಠ 3 ಪ್ರಯಾಣಿಕರು)
ಅನಂತರದ ಪ್ರತಿ ಕಿ.ಮೀ. ದರ: ರೂ. 23 (ಗರಿಷ್ಠ 3 ಪ್ರಯಾಣಿಕರು),
ಕಾಯುವ ದರ: ಮೊದಲ 10 ನಿಮಿಷ ಉಚಿತ, ಬಳಿಕದ 15 ನಿಮಿಷದವರೆಗೆ ಅಥವಾ ಅದರ ಭಾಗಕ್ಕೆ ರೂ. 5. ಪ್ರಯಾಣಿಕರ ಸರಕಿಗೆ (ಲಗೇಜ್): ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜತೆ ಇರಬೇಕು, ಮೊದಲ 20 ಕಿ. ಗ್ರಾಂ.ಗಳಿಗೆ ಉಚಿತ, ಬಳಿಕದ 20 ಕೆ.ಜಿ.ಗಳಿಗೆ ಅಥವಾ ಅದರ ಭಾಗಕ್ಕೆ ರೂ. 5.
ರಾತ್ರಿ ವೇಳೆ ಪ್ರಯಾಣ: ರಾತ್ರಿ 10:00 ಗಂಟೆಯಿಂದ ಬೆಳಗಿನ ಜಾವ 05:00 ಗಂಟೆಯವರೆಗೆ ಮಾತ್ರ ಮೇಲ್ಕಂಡ ದರಗಳ ಒಂದೂವರೆ ಪಟ್ಟು (1.5 times) ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮೀಟರ್ ರಿಕ್ಯಾಲಿಬ್ರೇಶನ್ ಕಡ್ಡಾಯ: ನಿಯಮ ಮೀರಿದರೆ ಕ್ರಮ: ಪ್ರತಿಯೊಬ್ಬ ಆಟೋರಿಕ್ಷಾ ಚಾಲಕ/ಮಾಲಕರು ತಮ್ಮ ವಾಹನದ ಫ್ಲಾಗ್ ಮೀಟರ್‌ಗಳನ್ನು ನೂತನ ಪರಿಷ್ಕೃತ ದರಕ್ಕೆ ಅನುಗುಣವಾಗಿ ರಿಕ್ಯಾಲಿಬ್ರೇಶನ್ (Recalibration) ಹಾಗೂ ಸೀಲ್ (Seal) ಮಾಡಿಸಿಕೊಳ್ಳಬೇಕು. ಪರಿಷ್ಕೃತ ದರದ ಅಧಿಕೃತ ಪಟ್ಟಿಯನ್ನು ಆಟೋರಿಕ್ಷಾಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಸ್ಪಷ್ಟವಾಗಿ ಪ್ರದರ್ಶಿಸಬೇಕು.
ನಿಗದಿತ ದರಕ್ಕಿಂತ ಹೆಚ್ಚುವರಿ ವಸೂಲಿ ಮಾಡುವುದು ಅಥವಾ ಮೀಟರ್ ಅಳವಡಿಸದೆ ಸಾರ್ವಜನಿಕರಿಂದ ಸುಲಿಗೆ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ದಂಡ ವಿಧಿಸುವುದು, ಪರ್ಮಿಟ್ ಅಮಾನತು ಅಥವಾ ರದ್ದುಪಡಿಸುವಂತಹ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಮತ್ತು ಆರ್‌ಟಿಒ ಅಧಿಕಾರಿಗಳಿಗೆ ಪ್ರಾಧಿಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
Discover more from Coastal Times Kannada
Subscribe to get the latest posts sent to your email.







Discussion about this post