ವಿಟ್ಲ: ಕೇಪು ಗ್ರಾಮದ ಅಡ್ಯನಡ್ಕದ ಯುವಕನೊಬ್ಬನ ಮನೆಯ ಮುಂದೆ ಉತ್ತರ ಭಾರತ ಮೂಲದ ಯುವತಿಯೊಬ್ಬಳು ಬಂದು ಯುವಕನನ್ನು ತನಗೆ ಒಪ್ಪಿಸುವಂತೆ ಧರಣಿ ಕುಳಿತ ಘಟನೆ ಮಂಗಳವಾರ ನಡೆದಿದೆ. ಯುವತಿಯ ಮನವೂಲಿಸಲು ವಿಫಲರಾದ ವಿಟ್ಲ ಪೊಲೀಸರು ರಾತ್ರಿ ಆಕೆಯನ್ನು ಠಾಣೆಗೆ ಕರೆದೊಯಿದ್ದಾರೆ.
ಉತ್ತರ ಭಾರತ ಮೂಲದ ಯುವತಿ ಬೆಂಗಳೂರಿನಲ್ಲಿ ಸಂಸ್ಥೆಯೂಂದನ್ನು ನಡೆಸುತ್ತಿದ್ದು , ಅಲ್ಲಿ ಆಕೆಗೆ ಅಡ್ಯನಡ್ಕದ ಯುವಕನೂಬ್ಬನ ಪರಿಚಯವಾಗಿದೆ. ಯುವಕ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ ಎನ್ನಲಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಮುಂದಿನ ದಿನಗಳಲ್ಲಿ ಅವರಿಬ್ಬರ ಮಧ್ಯೆ ಹಣಕಾಸಿನ ವಹಿವಾಟು ನಡೆದಿದೆ ಎಂದು ಹೇಳಲಾಗುತ್ತಿದೆ. ಇಂದು ಸಂಜೆ ಅಡ್ಯನಡ್ಕದ ಯುವಕನ ಮನೆ ಬಳಿ ಬಂದ ಸಂತ್ರಸ್ತ ಯುವತಿ ಪ್ರೀತಿಯ ನಾಟಕವಾಡಿ ಯುವಕ ಹಣ ಪಡೆದಿದ್ದಾನೆ. ಈಗ ಹಣವು ವಾಪಸ್ಸು ನೀಡದೆ, ವಿವಾಹವು ಆಗದೇ ಯುವಕ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ಮನೆ ಎದುರು ಕೂತು ಪ್ರತಿಭಟನೆ ನಡೆಸಿದ್ದಾಳೆ.
ಸ್ಥಳೀಯರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ ವಿಟ್ಲ ಠಾಣೆಯಿಂದ ಆಗಮಿಸಿದ ಪೊಲೀಸರು ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ಎರಡು ಸಮುದಾಯದ ಜನರು ಸೇರಿದ ಹಿನ್ನಲೆಯಲ್ಲಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.
ಐದು ಬಾರಿ ಬಂದಿದ್ದಳೇ? : ಕಳೆದೂಂದು ತಿಂಗಳ ಅವಧಿಯಲ್ಲಿ ಸಂತ್ರಸ್ತ ಯುವತಿ ಈ ಯುವಕನ ಮನೆ ಮುಂದೆ ಸುಮಾರು ಐದು ಬಾರಿ ಬಂದಿರುವುದಾಗಿ ಹೇಳಲಾಗಿದೆ. ಒಂದು ಬಾರಿ ಯುವತಿ ಮನಗೆ ಬಂದ ವೇಳೆ ಯುವಕ ಮನೆಯಲ್ಲಿದ್ದು ಆಕೆಯನ್ನು ನೋಡುತ್ತಲೇ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಎರಡು ಬಾರಿ ಪೊಲೀಸರು ಬೆಂಗಳೂರಿನಲ್ಲಿ ದೂರು ನೀಡಿ ಅಲ್ಲಿಂದ ಪೊಲೀಸರನ್ನು ಕರೆದುಕೂಂಡು ಬರುವಂತೆ ತಿಳಿಸಿ ಸಾಗ ಹಾಕಿರುವುದಾಗಿಯೂ ಸ್ಥಳೀಯರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post