ಮಂಗಳೂರು : ಯುವ ನಿರ್ದೇಶಕ ಅಭಿಷೇಕ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷಿತ ತುಳು ದಿಲ್ ರಂಗ್ 2 ಮ್ಯೂಸಿಕಲ್ ಸಿನಿಮಾ ಶನಿವಾರ ಸಂಜೆ ನಗರದ ಪುರಭವನದಲ್ಲಿ ಬಿಡುಗಡೆ ಮಾಡಲಾಯಿತು.
ಚಲನಚಿತ್ರ ನಟ ಅತರ್ವ್ ಪ್ರಕಾಶ್ ಮತ್ತು ಇತರ ಗಣ್ಯರು ಸಮಾರಂಭವನ್ನು ಉದ್ಘಾಟಿಸಿದರು. ಅತರ್ವ್ ಪ್ರಕಾಶ್ ಮಾತನಾಡಿ ಯುವ ನಿರ್ದೇಶಕ ಅಭಿಷೇಕ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದಿಲ್ ರಂಗ್ 2′ ಚಿತ್ರ ಉತ್ತಮ ಯಶಸ್ಸು ಕಾಣಲಿ ಎಂದರು.
ಹಿರಿಯ ಕಲಾವಿದರಾದ ಶ್ರೀ ಲಕ್ಷ್ಮಣ್ ಮಲ್ಲೂರು ’ದಿಲ್ ರಂಗ್ 2 ’ ಮ್ಯೂಸಿಕಲ್ ಸಿನಿಮಾದ ಸಿಡಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಅತರ್ವ್ ಪ್ರಕಾಶ್ ( ಚಲನಚಿತ್ರ ನಟ), ಶೆರಿಲ್ ಅಯೋನಾ (ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರು), ಮಯೂರ್ ಉಳ್ಳಾಲ್ (ಅಧ್ಯಕ್ಷರು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ರಿ.), ಶ್ರೀ ಲಕ್ಷ್ಮಣ್ ಮಲ್ಲೂರು ( ಹಿರಿಯ ಕಲಾವಿದರು), ಫ್ರೊ. ರಾಜಶೇಖರ್ ಹೆಬ್ಬಾರ್.ಸಿ.( ಪ್ರಾಂಶುಪಾಲರು ಡಾ.ಪಿ.ದಯಾನಂದ ಪೈ. ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು), ಶ್ರೀನಿವಾಸ್ ನಾಯಕ್ ಇಂದಾಜೆ (ಅಧ್ಯಕ್ಷರು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ), ಮತ್ತಿತರರು ಉಪಸ್ಥಿತರಿದ್ದರು.
Discussion about this post