ಕಡಬ, ನ.7: ಯಾರನ್ನೋ ಬಲೆಗೆ ಕೆಡವಿಕೊಳ್ಳಲು ಹೋಗಿ ತಾವೇ ಸಿಲುಕಿಕೊಳ್ಳುವಂಥ ಪ್ರಕರಣವನ್ನು ನೆನಪಿಸುವಂಥ ಘಟನೆ ಇದು. ಇಲ್ಲೊಂದು ಕಡೆ ಕೋಳಿಯನ್ನು ಹಿಡಿಯಲು ಹೋದ ಚಿರತೆ ತಾನೇ ಬಾವಿಗೆ ಬಿದ್ದುಬಿಟ್ಟಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಡಬದ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎನ್ನುವವರ ಮನೆಯ ಬಾವಿಗೆ ಈ ಚಿರತೆ ಬಿದ್ದುಬಿಟ್ಟಿದೆ. ಕೋಳಿಯನ್ನು ಹಿಡಿಯಲೆಂದು ಅಟ್ಟಿಸಿಕೊಂಡು ಬಂದಿದ್ದ ಚಿರತೆ ಆಯತಪ್ಪಿ ಬಾವಿಯೊಳಕ್ಕೆ ಬಿದ್ದಿದೆ.
ಬಾವಿಯ ನೀರಿನಲ್ಲಿ ಬಿದ್ದು ಮೈ ಒದ್ದೆಯಾಗಿ ಚಳಿಯಿಂದ ನಡುಗುತ್ತಿರುವ ಚಿರತೆಯ ರಕ್ಷಣಗಾಗಿ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆ ರಕ್ಷಣೆಯ ಕಾರ್ಯಾಚರಣೆ ಆರಂಭವಾಗಿದ್ದು, ಸ್ಥಳೀಯರ ಕುತೂಹಲ ಕೆರಳಿಸಿದೆ.