ಮಂಗಳೂರು, ಫೆ.8: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನವೋದಯ ಶಾಲೆಯ ಬಳಿ ನಿಷೇಧಿತ ವಸ್ತುವಾದ ಅಂಬರ್ ಗ್ರೀಸ್‌ನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ 6 ಮಂದಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ನವೋದಯ ಶಾಲೆಯ ಬಳಿ ನಿಷೇಧಿತ ಅಕ್ರಮ ಅಂಬರ್ ಗ್ರೀಸ್ ಮಾರಾಟ ಮಾಡಲು ಬಂದಿದ್ದ ಬೆಂಗಳೂರು ಮತ್ತು ಉಡುಪಿ ಮೂಲದ 6 ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬಂಧಿತರನ್ನು ಪ್ರಶಾಂತ್ (24), ಸತ್ಯರಾಜ್ (32), ರೋಹಿತ್ (27), ರಾಜೇಶ್ (37), ವಿರುಪಾಕ್ಷಾ, (37), ನಾಗಾರಾಜ್ (31 ) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 3.48 ಕೋ.ರೂ. ಮೌಲ್ಯದ 4.480 ಗ್ರಾಂ ತೂಕದ ಅಂಬರ್ ಗ್ರೀಸ್ ವಶಪಡಿಸಲಾಗಿದೆ. ತಮಿಳ್ನಾಡಿನ ಮೀನುಗಾರ ಸೇದು ಮಾಣಿಕ್ಯ ಎಂಬಾತ ನೀಡದ್ದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರ್ಯಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ದಿನಕರ ಶೆಟ್ಟಿ ಮಾಗದರ್ಶದಲ್ಲಿ, ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರ ಮುಂದಾಳತ್ವದಲ್ಲಿ, ಉಪ ನಿರೀಕ್ಷಕರಾದ ಶರಣಪ್ಪ ಭಂಡಾರಿ ಮತ್ತು ಮಲ್ಲಕಾರ್ಜುನ್ ಬಿರಾದಾರ್, ಎ.ಎಸ್. ಐರವರಾದ ಮೋಹನ್ ದೇರಳಕಟ್ಟೆ, ಸಂಜೀವ ಹಾಗೂ ಸಿಬ್ಬಂದಿಗಾಳಾದ ಆಶೋಕ್, ಶಿವಕುಮಾರ್, ಪುರುಷೋತ್ತಮ, ದೀಪಕ್, ಅಂಬರೀಶ್ ಘಂಟಿ ಭರಮಾ ಬಡಿಗೇರ್ ಭಾಗಿಯಾಗಿದ್ದಾರೆ.