ಮಂಗಳೂರು, ಫೆ.8 : ನಗರದ ಫಳ್ನೀರಿನ ಬ್ಲೂ ಸ್ಟಾರ್ ಲಾಡ್ಜ್ ಒಂದರಲ್ಲಿ ಕೇರಳ ಮೂಲದ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಒಂದೇ ಫ್ಯಾನಿಗೆ ಇಬ್ಬರೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿಗಳಾದ ರವೀಂದ್ರನ್(56) ಮತ್ತು ಅವರ ಪತ್ನಿ ಸುಧಾ (50) ಮೃತಪಟ್ಟವರು.



ಫೆ.6ರಂದು ಮಧ್ಯಾಹ್ನ 11 ಗಂಟೆಗೆ ಲಾಡ್ಜ್ ಪಡೆದಿದ್ದ ದಂಪತಿ ರಾತ್ರಿಯೂ ಹೊಟೇಲ್ ಸಿಬಂದಿಯಲ್ಲಿ ಊಟ ತರಿಸಿಕೊಂಡಿದ್ದರು. ಎರಡು ದಿನ ಕಳೆದರೂ ಬಾಗಿಲು ತೆರೆದಿಲ್ಲವೆಂದು ಬುಧವಾರ ಬೆಳಗ್ಗೆ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿರುವುದು ಪತ್ತೆಯಾಗಿದೆ.

ಕೇರಳದ ಕಣ್ಣೂರಿನಲ್ಲಿ ಇವರು ಬಟ್ಟೆ ವ್ಯಾಪಾರಿಯಾಗಿದ್ದರು ಎನ್ನಲಾಗಿದೆ. ಒಂದೇ ಫ್ಯಾನಿಗೆ ಇಬ್ಬರೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಸಾವಿನಲ್ಲೂ ದಂಪತಿ ಒಂದಾಗಿ ಪ್ರಾಣ ಬಿಟ್ಟಂತಾಗಿದೆ. ಯಾಕಾಗಿ ಸಾವಿಗೆ ಶರಣಾಗಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಸ್ಥಳಕ್ಕೆ ಬಂದರು ಪೊಲೀಸರು ಮತ್ತು ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಬಳಿ ಸಿಕ್ಕಿರುವ ಆಧಾರ್ ಕಾರ್ಡ್ ಆಧಾರದಲ್ಲಿ ಇವರ ವಿಳಾಸ ಪತ್ತೆ ಹಚ್ಚಲಾಗಿದೆ. ಬಂದರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post