ಉಳ್ಳಾಲ: ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ನಡೆದಿದ್ದು, ಈ ಬಗ್ಗೆ ಉದಯಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಹರ್ಷಿತ್ ಎಂಬಾತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರ್ಷಿತ್ ಎಂಬಾತ ಫೆ.2ರಂದು ಬೆಳಿಗ್ಗೆ 11.40ರ ಸಮಯದಲ್ಲಿ ಮಾಡೂರು ನಿವಾಸಿ ಬಸ್ ನಿರ್ವಾಹಕ ವೃತ್ತಿ ಮಾಡುತ್ತಿದ್ದ ಉದಯ್ ಕುಮಾರ್ ಎಂಬವರಿಗೆ ಮಾಡಿಮೊಬೈಲ್‌ನಿಂದ ಕರೆ ಮಾಡಿದ್ದ. ‘ಸುರತ್ಕಲ್‌ನಲ್ಲಿ ಫಾಝಿಲ್ ಎಂಬಾತನನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಜಾಮೀನಿನಲ್ಲಿ ಹೊರಗೆ ಬಂದಿದ್ದೇನೆ. ನನಗೆ ಮತ್ತು ಜೈಲಿನೊಳಗೆ ಇರುವವರಿಗೆ ನೀವು ಹಣದ ಸಹಾಯ ಮಾಡಬೇಕು’ ಕೇಳಿದ್ದ. ‘ಮುಂದೆ ಸಮಸ್ಯೆಯಾದರೆ ನಮ್ಮನ್ನು ದೂರ ಬೇಡಿ’ ಎಂದು ಹೆದರಿಸಿದ್ದ’ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಉದಯ್ ರವರು ಒಪ್ಪದ ಕಾರಣ ಹರ್ಷಿತ್ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉದಯ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post