ಮಂಗಳೂರು : ಮಾ 8 : ಪಿಯುಸಿ ವಿದ್ಯಾರ್ಥಿನಿಯರನ್ನು, ಯುವತಿಯರನ್ನು ಹಾಗೂ ಮಹಿಳೆಯರನ್ನು ಬಳಸಿಕೊಂಡು ದುಷ್ಕರ್ಮಿಗಳ ತಂಡವೊಂದು ಮಂಗಳೂರಿನ ನಂದಿಗುಡ್ಡೆಯ ಪೆಂಟಾ ಹೌಸ್ ನಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಪ್ರಕರಣವನ್ನು ಭೇದಿಸಿದ ಮಂಗಳೂರು ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಮಾ 7 ರಂದು ಇನ್ನು ನಾಲ್ವರನ್ನು ಬಂಧಿಸಿದ್ದಾರೆ. ಈ ಮೂಲಕ ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದು ಒಟ್ಟು ಬಂಧಿತರ ಸಂಖ್ಯೆ 14ಕ್ಕೆರಿದೆ.
ಇದೀಗ ಮಹಿಳಾ ಠಾಣೆಯಲ್ಲಿ ಲೈಂಗಿಕ ಶೋಷಣೆಗೊಳಗಾದ ಇನ್ನೊಬ್ಬ ಪಿಯುಸಿ ಹುಡುಗಿಯ ಹೇಳಿಕೆ ಆಧರಿಸಿ, ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಪೋಕ್ಸೋ ಕಾಯ್ದೆಯಡಿ ಮತ್ತೆ ನಾಲ್ವರು ಮುದುಕರನ್ನು ಪೊಲೀಸರು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ಅಡ್ಡೆಯಲ್ಲಿ ಹರೆಯದ ಅಪ್ರಾಪ್ತ ಹುಡುಗಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ಮತ್ತೆ ನಾಲ್ವರು ಅರೆಸ್ಟ್ ಆಗಿದ್ದಾರೆ. ಮಂಗಳೂರಿನ ವ್ಯಾಸನಗರದ ರಶೀದ್ ಸಾಹೇಬ್ (73), ಮಲ್ಲಿಕಟ್ಟೆ ಕದ್ರಿ ಗೇಟ್ ನಿವಾಸಿ ಮೊಹಮ್ಮದ್ ಆಲಿ(74), ಕುಲಶೇಖರದ ಗ್ರೆಗರಿ ಲಿಯನಾರ್ಡೋ ಸಿಕ್ವೇರಾ (63), ಉಪ್ಪಳ ಗೇಟ್ ನಿವಾಸಿ ಇಸ್ಮಾಯಿಲ್ (41) ಬಂಧಿತರು.
ಈ ಜಾಲದಲ್ಲಿ ಮಂಗಳೂರಿನ ಕಾಲೇಜು ಓದುವ ಹಲವರಿದ್ದಾರೆ. ಪ್ರಕರಣದಲ್ಲಿ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ. ಈಗ ಸಿಕ್ಕಿಬಿದ್ದಿರುವ ನಾಲ್ವರ ಪೈಕಿ ಮೂವರು ಮುದುಕರಾಗಿದ್ದು ಕಾಸು ಕೊಟ್ಟು ಸುಖ ಪಡೆಯಲು ಹೋಗಿ ಈಗ ಜೈಲು ಸೇರಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post