ಮಂಗಳೂರು: ಸುಲ್ತಾನ್ ಬತ್ತೇರಿ ಬಳಿ ಫಲ್ಗುಣಿ (ಗುರುಪುರ ನದಿ ಎಂದೂ ಕರೆಯಲಾಗುತ್ತದೆ) ನದಿಯಿಂದ ತಣ್ಣೀರುಬಾವಿ ಸಂಪರ್ಕಸುವ ಅತ್ಯಾಧುನಿ ತಂತ್ರಜ್ಞಾನದ ಬೋ ಸ್ಟ್ರಿಂಗ್ ಸೇತುವೆ ಕಾಮಗಾರಿ ಸೆಪ್ಟಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯು ತ್ತಿದ್ದು, ಸ್ಥಳೀಯರು ನಗರ ಪ್ರವೇಶಕ್ಕೆ ಸುಲಭವಾಗಲಿದೆ. ಪ್ರಸ್ತುತ ಇಲ್ಲಿನ ಜನರು ಫೆರ್ರಿ ಮೂಲಕ ಅಥವಾ ಸುತ್ತು ಬಳಸಿ ಸುಮಾರು ಅರ್ಧ ಗಂಟೆ ವ್ಯಯಿಸಿ ನಗರ ಪ್ರದೇಶಕ್ಕೆ ಸಂಚಾರ ಮಾಡಬೇಕಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಯಡಿ 64 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಿರ್ಮಾಣವಾಗುತ್ತಿದೆ. ಇದರಿಂದ ಬೆಂಗ್ರೆ ಪ್ರದೇಶದ ಸುಮಾರು 4000 ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಇಲ್ಲಿ ದೋಣಿಗಳು ಯಾವುದೇ ಅಡಚಣೆ ಇಲ್ಲದೆ ಸಂಚರಿಸಲು ವ್ಯವಸ್ಥೆ ಆಗಲಿದೆ. ಆಕರ್ಷಣೀಯವಾಗಿ ಸೇತುವೆ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಜೂನ್ ತಿಂಗಳ ವೇಳೆಗೆ ಬೋ ಸ್ಟ್ರಿಂಗ್ ಮೇಲೆತ್ತುವ ಕಾರ್ಯ ನಡೆಯಲಿದ್ದು, ಬಳಿಕ ದೋಣಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಸೆಪ್ಟಂಬರ್ ವೇಳೆಗೆ ಸೇತುವೆ ಲೋಕಾರ್ಪಣೆಗೆ ಗುರಿ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನೀರಿನ ಆಳ ಹಾಗೂ ಸೇತುವೆಯ ಎತ್ತರ ಇಲ್ಲಿ ಯಾವುದೇ ರೀತಿಯ ಸಹಜ ಚಟುವಟಿಕೆಗಳಿಗೆ ತೊಂದರೆ ಆಗದಂತೆ ರಾಷ್ಟ್ರೀಯ ಜಲಮಾರ್ಗ ಮಾರ್ಗಸೂಚಿಯಡಿ ಮಾಡಲಾಗುತ್ತಿದೆ. ಸೇತುವೆಯಲ್ಲಿ ಎಲ್ಲಾ ತೆರನಾದ ವಾಹನಗಳು ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮಂಗಳೂರು ನಗರಕ್ಕೆ ಇದೊಂದು ಪ್ರಮುಖ ಹಾಗೂ ಮಹತ್ವದ ಯೋಜನೆ ಎಂದವರು ಹೇಳಿದರು. ಉತ್ತಮ ತಂತ್ರಜ್ಞಾನ ಬಳಸಿ ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಇದು ಭವಿಷ್ಯದಲ್ಲಿ ಈ ಭಾಗದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಚಿವರೊಂದಿಗೆ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಾಲಿಕೆ ಮಾಜಿ ಸದಸ್ಯರಾದ ವಿನಯರಾಜ್, ಅನಿಲ್ ಕುಮಾರ್, ಸಂತೋಷ್ ಶೆಟ್ಟಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಸ್ಮಾರ್ಟ್ ಸಿಟಿ ಮಂಗಳೂರು ವ್ಯವಸ್ಥಾಪಕ ನಿರ್ದೇಶಕ ಡಾ. ಸಂತೋಷ್ ಕುಮಾರ್, ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post