ಮಾಣಿ: ಗ್ಯಾಸ್ ಟ್ಯಾಂಕರ್ ಮತ್ತು ತೂಫಾನ್ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ತೂಫಾನ್ ವಾಹನದ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಹಳೀರ ಎಂಬಲ್ಲಿ ಸಂಭವಿಸಿದೆ. ತೂಫಾನ್ ವಾಹನದ ಚಾಲಕ ಸುರೇಂದ್ರ ಗಂಭೀರ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಸೂರಿಕುಮೇರು ಕಡೆಯಿಂದ ತೂಫಾನ್ ವಾಹನ ಕಾರ್ಮಿಕರನ್ನು ಬಿಟ್ಟು ಹಿಂತಿರಗುತ್ತಿದ್ದ ವೇಳೆ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ತೂಫಾನ್ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡ ಚಾಲಕನನ್ನು ತಕ್ಷಣವೇ ಮಾಣಿಯ ಸೋಷಿಯಲ್ ಇಕ್ವಾ ಆಂಬ್ಯುಲೆನ್ಸ್ ಆಸಸ್ಪತ್ರೆಗೆ ದಾಖಲು ಮಾಡಲಾಗಿದೆ. ಬುಡೋಳಿಯ ಐಡಿಯಲ್ ಕ್ಯಾಸ್ಯೂ ಸಂಸ್ಥೆಗೆ ಸೇರಿದ ತೂಫಾನ್ ವಾಹನ ಎಂದು ತಿಳಿದು ಬಂದಿದೆ.
Discover more from Coastal Times Kannada
Subscribe to get the latest posts sent to your email.







Discussion about this post