ಕೋಝಿಕೋಡ್: ಕೋಝಿಕೋಡ್‌ನ ಉಮ್ಮಲತ್ತೂರ್‌ನ ತೃತೀಯಲಿಂಗಿ ದಂಪತಿಗಳಾದ ಜಿಯಾ ಪಾವಲ್ ಮತ್ತು ಜಹದ್ ಅವರು ಬುಧವಾರ ಹೆಣ್ಣು ಮಗುವನ್ನು ಆಶೀರ್ವದಿಸಿದರು. ತಮ್ಮ ಮಗುವಿನ ಜನನದ ಸುದ್ದಿಯನ್ನು ದಂಪತಿಯ ಸ್ನೇಹಿತರು ಮೊದಲು ಫೇಸ್‌ಬುಕ್ ಮೂಲಕ ಹಂಚಿಕೊಂಡಿದ್ದಾರೆ. ಅನೇಕ ಸ್ನೇಹಿತರು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೀತಿ ಮತ್ತು ಶುಭಾಶಯಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.



ಇತ್ತೀಚೆಗಷ್ಟೇ ಜಿಯಾ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಜಹಾದ್ ಅವರೀಗ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದ್ದರು. ‘ನಾನು ತಾಯಿಯಾಗುವ ಮತ್ತು ಅವನು ತಂದೆಯಾಗುವ ಕನಸನ್ನು ನನಸಾಗಿಸಿಕೊಳ್ಳಲಿದ್ದೇವೆ. ಎಂಟು ತಿಂಗಳ ಭ್ರೂಣವು ಈಗ ಜಹಾದ್ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ನಮಗೆ ತಿಳಿದುಬಂದ ಮಾಹಿತಿ ಪ್ರಕಾರ, ಭಾರತದಲ್ಲಿ ಲಿಂಗಪರಿವರ್ತಿತ ಪುರುಷ (ಟ್ರಾನ್ಸ್‌ಮ್ಯಾನ್) ಗರ್ಭಧಾರಣೆ ಮಾಡಿರುವುದು ಇದೇ ಮೊದಲು’ ಎಂದೂ ಜಿಯಾ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದರು.
‘ನಾನು ಗರ್ಭಿಣಿಯಾಗುವ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಒಂದು ವೇಳೆ ಹಾಗೆ ಮೊದಲೇ ಯೋಚಿಸಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ನನ್ನ ಸ್ತನಗಳನ್ನು ತೆಗೆಸಿಕೊಳ್ಳುತ್ತಿರಲಿಲ್ಲ’ ಎಂದೂ ಜಹಾದ್ ತಿಳಿಸಿದ್ದರು. ಜಹಾದ್ ಅವರ ಸಮಸ್ಯೆ ಅರಿತಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಗು ಆಸ್ಪತ್ರೆಯಲ್ಲಿರುವ ತನಕ ಹಾಲಿನ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಹುಟ್ಟಿನಿಂದ ಹೆಣ್ಣಾಗಿದ್ದ ಜಹಾದ್, ಲಿಂಗಪರಿವರ್ತಿತ ಪುರುಷನಾಗಿದ್ದು, ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಗು ಹೊಂದಬೇಕೆಂಬ ಆಸೆಯಿಂದ ಹಾರ್ಮೋನ್ ಚಿಕಿತ್ಸೆಯನ್ನು ನಿಲ್ಲಿಸಿದ್ದರು. ಜಹಾದ್ ಅವರ ಸಂಗಾತಿ ಜಿಯಾ ಪಾವಲ್ ಹುಟ್ಟಿನಿಂದ ಗಂಡಾಗಿದ್ದು, ಲಿಂಗಪರಿವರ್ತನೆಯ ಮೂಲಕ ಹೆಣ್ಣಾಗಿದ್ದಾರೆ. ಸಂಪೂರ್ಣ ಬೆಂಬಲ ನೀಡಿದ ವೈದ್ಯಕೀಯ ಕಾಲೇಜಿನ ವೈದ್ಯಕೀಯ ತಂಡಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಸಿಯಾ ಹೇಳಿದ್ದಾರೆ. ಸಚಿವೆ ವೀಣಾ ಜಾರ್ಜ್ ಕುಟುಂಬಕ್ಕೆ ಶುಭ ಹಾರೈಸಿದರು.
ಜಿಯಾ ಮತ್ತು ಜಹಾದ್ ಯಾರು? ; ಜಹಾದ್ ಅಕೌಂಟೆಂಟ್ ಆಗಿ ಕೆಲಸ ಮಾಡುವ ಟ್ರಾನ್ಸ್ಜೆಂಡರ್ ವ್ಯಕ್ತಿ. ಇವರು ಹೆಣ್ಣಾಗಿ ಹುಟ್ಟಿದ್ದು, ಪುರುಷನಾಗಲು ಹಾರ್ಮೋನ್ ಥೆರಪಿ ಮಾಡಿಸಿಕೊಳ್ಳುತ್ತಿದ್ದಾರೆ. ಶಾಸ್ತ್ರೀಯ ನೃತ್ಯದ ಶಿಕ್ಷಕಿಯಾದ ಜಿಯಾ ಪುರುಷನಾಗಿ ಜನಿಸಿದರು ಮತ್ತು ಲಿಂಗ ರೂಪಾಂತರಕ್ಕೆ ಒಳಗಾದರು. ಕೇರಳದ ಮೂಲದವರಾದ ಟ್ರಾನ್ಸ್ ದಂಪತಿಗಳು ಸದ್ಯ ಮಗುವನ್ನು ಪಡೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post