• About us
  • Contact us
  • Disclaimer
Tuesday, September 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

10.5 ಕೋಟಿ ಮೌಲ್ಯದ ಚಿನ್ನ ಸಮುದ್ರಕ್ಕೆಸೆದ ಕಳ್ಳರು…! ಸಮುದ್ರ ತಳದಿಂದ 17.74 ಕೆಜಿ ಚಿನ್ನ ವಶಕ್ಕೆ

Coastal Times by Coastal Times
February 9, 2023
in ಕ್ರೈಮ್ ನ್ಯೂಸ್
10.5 ಕೋಟಿ ಮೌಲ್ಯದ ಚಿನ್ನ ಸಮುದ್ರಕ್ಕೆಸೆದ ಕಳ್ಳರು…! ಸಮುದ್ರ ತಳದಿಂದ 17.74 ಕೆಜಿ ಚಿನ್ನ ವಶಕ್ಕೆ
135
VIEWS
WhatsappTelegramShare on FacebookShare on Twitter

ಚೆನ್ನೈ : ಶ್ರೀಲಂಕಾದಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಕಳ್ಳರು ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಸಮುದ್ರಕ್ಕೆಸೆದ ಅಪರೂಪದ ಘಟನೆ ನಡೆದಿದ್ದು, ಸಮುದ್ರ ಸೇರಿದ ಈ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್‌, ಚೆನ್ನೈನ ಕಂದಾಯ ಗುಪ್ತಚರ ಇಲಾಖೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು,  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಂಡಪಮ್ ನಿವಾಸಿಗಳಾದ 30 ವರ್ಷದ ನಾಗೂರ್ ಕಣಿ, ಹಾಗೂ 22 ವರ್ಷದ ಸಾಗುಬೇರ್ ಸಾದಿಕ್  ಹಾಗೂ ಮರಕಾಯರ್‌ಪಟ್ಟಿನಂ ನಿವಾಸಿಯಾದ 29 ವರ್ಷದ ಮೊಹಮ್ಮದ್ ಸಮೀರ್ ಎಂದು ಗುರುತಿಸಲಾಗಿದೆ.  ಇವರನ್ನು ಹೆಚ್ಚಿನ ವಿಚಾರಣೆಗಾಗಿ ಮಂಡಪಂನ ಮೆರಿನ್ ಪೊಲೀಸರಿಗೆ ಒಪ್ಪಿಸಲಾಗಿದೆ. ಬಂಧಿತರಿಂದ 17,74 ಕೆಜಿ ತೂಕದ 10.5 ಕೋಟಿ ಬೆಲೆ ಬಾಳುವ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ಹಿನ್ನೆಲೆ ; ಬಂಧಿತ ಮೂವರು ಆರೋಪಿಗಳು ನಾಡ ದೋಣಿ ಮೂಲಕ ಶ್ರೀಲಂಕಾದಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರು. ರಾಮನಾಥಪುರಂ ಜಿಲ್ಲೆಯ ಮಂಡಪಂನ ಕೋಸ್ಟ್‌ ಗಾರ್ಡ್ ಸ್ಟೇಷನ್‌ನ ಕೋಸ್ಟ್ ಗಾರ್ಡ್ ಸಿಬ್ಬಂದಿ ಅನುಮಾನದ ಮೇರೆಗೆ ಇವರ ಬೋಟ್‌ ಅನ್ನು ತಡೆದಿದ್ದಾರೆ. ಈ ವೇಳೆ ಈ ಖದೀಮರು ಇಷ್ಟೊಂದು ಬೆಲೆ ಬಾಳುವ ಚಿನ್ನವನ್ನು ಸಮುದ್ರಕ್ಕೆಸೆದಿದ್ದಾರೆ. ಕೂಡಲೇ ಕೋಸ್ಟ್ ಗಾರ್ಡ್ ( ಸಿಬ್ಬಂದಿ ಸ್ಕೂಬಾ ಡೈವರ್‌ಗಳನ್ನು ಸಮುದ್ರಕ್ಕಿಳಿಸಿದ್ದು ಅವರು ಸಮುದ್ರದಾಳದಲ್ಲಿ ಚಿನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕೂ ಮೊದಲು ಮಾರುವೇಷದಲ್ಲಿದ್ದ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳಿಗೆ ಶ್ರೀಲಂಕಾದಿಂದ ಮಂಡಪಂ ಕಡಲತೀರಕ್ಕೆ ಬಂಗಾರ ಕಳ್ಳ ಸಾಗಣೆ ಆಗುತ್ತಿರುವ ಸುಳಿವು ಸಿಕ್ಕಿದೆ.  ಹೀಗಾಗಿ ಸಮುದ್ರ ತೀರದಲ್ಲಿ ಕಣ್ಗಾವಲು ಹೆಚ್ಚಿಸುವಂತೆ ಅವರು ಮಂಡಪಂನ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಮನವಿ ಮಾಡಿದ್ದರು.  ಇಲ್ಲಿನ ಹಲವಾರು ಮರಳು ದಿಬ್ಬಗಳು ಮತ್ತು ಆಳವಿಲ್ಲದ ಸಮುದ್ರವನ್ನು ಹೊಂದಿರುವ ಸರಂಧ್ರ ಸಮುದ್ರವನ್ನು ಡ್ರಗ್ಸ್ ಮತ್ತು ಚಿನ್ನವನ್ನು ಸಾಗಿಸುವ ಕಳ್ಳಸಾಗಣೆದಾರರು ಸುಲಭವಾಗಿ ಬಳಸಿಕೊಳ್ಳುತ್ತಿದ್ದಾರೆ.  ಈ ಮಧ್ಯೆ ಶ್ರೀಲಂಕಾದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇತ್ತೀಚೆಗೆ ನಿಷೇಧಿತ ವಸ್ತುಗಳಲ್ಲದೇ ಬೀಡಿ ಎಲೆಗಳು, ಬಟ್ಟೆಗಳು, ಗೊಬ್ಬರ, ಔಷಧಿಯನ್ನು ಕೂಡ ಕಳ್ಳಸಾಗಣೆ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕೋಸ್ಟ್‌ಗಾರ್ಡ್ ಸಿಬ್ಬಂದಿ ಕಂದಾಯ ಗುಪ್ತಚರ ಇಲಾಖೆಯ  ಸಹಯೋಗದೊಂದಿಗೆ ಜಂಟಿ ತಂಡವನ್ನು ರಚಿಸಿ ಕಳ್ಳಸಾಗಣೆ ನಿಯಂತ್ರಣಕ್ಕೆ ಬೋಟೊಂದನ್ನು ನಿಯೋಜಿಸಿದ್ದರು.  ಬುಧವಾರ ರಾತ್ರಿ ಈ ಪ್ರತಿಬಂಧಕ ಬೋಟ್ ಅನುಮಾನಾಸ್ಪದವಾಗಿ ಕಂಡ ಬೋಟೊಂದನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. ಆದರೆ ಬೋಟ್‌ನಲ್ಲಿ ಇವರಿಗೆ ಯಾವುದೇ ನಿಷೇಧಿತ ವಸ್ತುಗಳು ಕಾಣಸಿಕ್ಕಿಲ್ಲ. ಕೂಡಲೇ ಕಳ್ಳರ ಮನ ಅರಿತ ಪೊಲೀಸರು ಸಮುದ್ರಕ್ಕೆಸೆದಿರಬಹುದು ಎಂಬ ಶಂಕೆಯ ಮೇರೆಗೆ ಸ್ಕೂಬಾ ಡೈವರ್‌ಗಳನ್ನು  ಸಮುದ್ರಕ್ಕಿಳಿಸಿದ್ದಾರೆ.

ಈ ಸ್ಕೂಬಾ ಡೈವರ್‌ಗಳು ಸಮುದ್ರ ತಳದಲ್ಲಿದ್ದ, ಕಳ್ಳರು ಬಿಸಾಕಿದ್ದ ಚಿನ್ನವನ್ನು ಮರಳಿ ತರಲು ಯಶಸ್ವಿಯಾಗಿದ್ದಾರೆ.  ಈ ಕಳ್ಳ ಮಾಲಿನಲ್ಲಿ ಚಿನ್ನದ ಬಾರ್‌ಗಳು, ಬಿಸ್ಕೆಟ್‌ಗಳು, ಸಣ್ಣ ಪೀಸುಗಳು ಸರಗಳು ಎಲ್ಲಾ ಸೇರಿ 17.74 ಕೆಜಿ ತೂಕದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಹೆಣ್ಣು ಮಗುವಿಗೆ ಜನ್ಮ ನೀಡಿದ ದೇಶದ ಮೊದಲ ತೃತೀಯಲಿಂಗಿ

Next Post

ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪಕ್ಕೆ ಸೂಕ್ತ ದಾಖಲೆಗಳಿದ್ದರಷ್ಟೇ ಕ್ರಮ: ಎಡಿಜಿಪಿ. ಅಲೋಕ್ ಕುಮಾರ್

Related Posts

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ
ಕ್ರೈಮ್ ನ್ಯೂಸ್

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

September 8, 2026
33
ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ
ಕ್ರೈಮ್ ನ್ಯೂಸ್

ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ

September 5, 2026
29
Next Post
ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪಕ್ಕೆ ಸೂಕ್ತ ದಾಖಲೆಗಳಿದ್ದರಷ್ಟೇ ಕ್ರಮ: ಎಡಿಜಿಪಿ. ಅಲೋಕ್ ಕುಮಾರ್

ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪಕ್ಕೆ ಸೂಕ್ತ ದಾಖಲೆಗಳಿದ್ದರಷ್ಟೇ ಕ್ರಮ: ಎಡಿಜಿಪಿ. ಅಲೋಕ್ ಕುಮಾರ್

Discussion about this post

Recent News

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

September 8, 2026
33
ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ

ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ

September 8, 2026
14
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

ವಿಟ್ಲ; ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ; ಮೂವರು ಆರೋಪಿಗಳ ಬಂಧನ

September 8, 2026
ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ

ತಾ.14ರಿಂದ 16ರವರೆಗೆ ಮಂಗಳೂರಿನ “ಓಂಕಾರ ನಗರ” ಬಂಟ್ಸ್ ಹಾಸ್ಟೇಲ್‌ನಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ

September 8, 2026
ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

September 7, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d