ಪುತ್ತೂರು: ನಗರದ ಕೋರ್ಟ್ ರಸ್ತೆಯಲ್ಲಿರುವ ಬಾವಾ ಜುವೆಲ್ಲರ್ಸ್ ಆಭರಣ ಮಳಿಗೆಗೆ ಎಳೆಯ ಮಗುವಿನೊಂದಿಗೆ ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿ ಮಹಿಳೆಯೊಬ್ಬರು ಚಿನ್ನದ ಸರವೊಂದನ್ನು ಕಳವು ಮಾಡಿರುವ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ ನಡೆದ ಘಟನೆಯ ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಿರಾಕಿಯ ಸೋಗಿನಲ್ಲಿ ಬಂದ ಮಹಿಳೆ 8 ಗ್ರಾಂ ಮತ್ತು 4 ಗ್ರಾಂನ ಚಿನ್ನದ ಸರ ಬೇಕೆಂದು, ಬೇರೆ ಬೇರೆ ವಿನ್ಯಾಸಗಳ ಸರವನ್ನು ನೋಡಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಮಹಿಳೆ ಮಗುವಿಗೆ ಎದೆ ಹಾಲು ಉಣಿಸಲು ಆರಂಭಿಸಿದ್ದಾಳೆ. ಆ ವೇಳೆ ಕೌಂಟರಿನಲ್ಲಿದ್ದ ಇಬ್ಬರು ಸೇಲ್ಸ್‌ಮನ್‌ಗಳ ಪೈಕಿ ಒಬ್ಬರು ಬೇರೆ ಕಡೆಗೆ ಹೋಗಿದ್ದಾರೆ. ಮಗುವಿಗೆ ಹಾಲುಣಿಸುತ್ತಿದ್ದ ಮಹಿಳೆ ಕೌಂಟರ್‌ನಲ್ಲಿದ್ದ ಸೇಲ್ಸ್‌ಮನ್‌ಗೆ ಚಿನ್ನದ ಬ್ರಾಸ್ಲೆಟ್ ತೋರಿಸುವಂತೆ ಹೇಳಿದ್ದಾಳೆ. ಬ್ರಾಸ್ಲೆಟ್ ತೆಗೆಯಲು ತಿರುಗಿದ ವೇಳೆ ಮಹಿಳೆ ಕೌಂಟರ್‌ನ ಶೋಕೋಸ್ ಮೇಲಿದ್ದ ಚಿನ್ನದ ಸರಗಳ ಟ್ರೇಯಿಂದ ಒಂದು ಚಿನ್ನದ ಸರವನ್ನು ತೆಗೆದು ಬ್ಲೌಸ್‌ನೊಳಗೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾಳೆ.
ಘಟನೆಯ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಚಿನ್ನದ ಸರ ಕಳವು ಮಾಡಿದ ಮಹಿಳೆ ಯಾರು ಎಂದು ಈಗಾಗಲೇ ಗೊತ್ತಾಗಿದೆ ಎಂದು ತಿಳಿದು ಬಂದಿದೆ.
Discussion about this post