ಕೋಲ್ಕತ್ತಾ: ನನ್ನ ಮಗುವಿನ ತಂದೆ ಯಾರು ಎಂದು ಆ ತಂದೆಗಷ್ಟೇ ಗೊತ್ತು, ಮಗನನ್ನು ನೋಡಲು ಅವರು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಖ್ಯಾತ ಬಂಗಾಳಿ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.
ತಮ್ಮ ವಿವಾಹದ ಕುರಿತು ಭುಗಿಲೆದ್ದಿದ್ದ ವಿವಾದದ ನಡುವೆಯೇ ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ್ದ ನುಸ್ರತ್ ಜಹಾನ್ ಅವರು, ತಮ್ಮ ಮಗುವಿನ ತಂದೆ ಯಾರು ಎಂಬ ವಿಷಯದಲ್ಲಿ ಮೊದಲ ಬಾರಿಗೆ ಮೌನ ಮುರದಿದ್ದಾರೆ.
ನುಸ್ರತ್ ಜಹಾನ್
ಕಳೆದ ತಿಂಗಳು ಆ 26 ರಂದು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಜಹಾನ್ ಇಂದು ಕೋಲ್ಕತ್ತಾದಲ್ಲಿ ಸಲೂನ್ ಒಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿದ್ದ ಪತ್ರಕರ್ತರು ಮಗುವಿನ ತಂದೆಯ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಖಾರವಾಗಿಯೇ ಉತ್ತರಿಸಿದ ನುಸ್ರತ್ ಜಹಾನ್, ‘ನನ್ನ ಮಗುವಿನ ತಂದೆ ಯಾರು ಎಂಬುದು ಆ ತಂದೆಗೆ ಅಷ್ಟೇ ಗೊತ್ತು.. ಮಗನನ್ನು ನೋಡಲು ಅವರು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
New mom and TMC MP #NusratJahan has resumed work post delivery. When asked about her child's first glimpse, she said that her child's father is not letting anyone see him. pic.twitter.com/9vPUNO4FNB
— Shivangi Thakur (@thakur_shivangi) September 8, 2021