ಮಂಗಳೂರು: ರಾಜ್ಯ ವಿಧಾನ ಪರಿಷತ್ತಿಗೆ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ ನಾಳೆ ನಡೆಯಲಿದೆ.
ದ.ಕ. ಜಿಲ್ಲೆಯಲ್ಲಿ 231 ಮತಗಟ್ಟೆಗಳಿದ್ದು, 254 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 254 ಮತಗಟ್ಟೆ ಅಧಿಕಾರಿಗಳು, 254 ಮೈಕ್ರೊ ಅಬ್ಸರ್ವರ್, 254 ಗ್ರೂಪ್ ಡಿ ನೌಕರರನ್ನು ನಿಯೋಜಿಸಲಾಗುತ್ತಿದೆ.
ಪ್ರತೀ ವಿಭಾಗದಲ್ಲಿ ಶೇ. 10 ಮಂದಿ ಯನ್ನು ಮೀಸಲು ಸಿಬಂದಿಯಾಗಿ ಕಾದಿರಿಸಲಾಗಿದ್ದು, 231 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಮಸ್ಟರಿಂಗ್, ಡಿ ಮಸ್ಟರಿಂಗ್ ಕೇಂದ್ರಗಳು
ದ.ಕ. ಜಿಲ್ಲೆಯ ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯಗಳಲ್ಲಿ ತಾಲೂಕು ಕಚೇರಿಗಳು, ಮಂಗಳೂರಿನಲ್ಲಿ ತಾಲೂಕು ಪಂಚಾಯತ್, ಬಂಟ್ವಾಳದಲ್ಲಿ ಇನ್‌ಫೆಂಟ್ ಜೀಸಸ್ ಹಿ.ಪ್ರಾ. ಕನ್ನಡ ಮಾಧ್ಯಮ ಶಾಲೆ ಮೊಡಂಕಾಪು, ಕಡಬದಲ್ಲಿ ಪಟ್ಟಣ ಪಂಚಾಯತ್ ಕಚೇರಿ ಮಸ್ಟರಿಂಗ್, ಡಿ ಮಸ್ಟರಿಂಗ್ ಕೇಂದ್ರಗಳಾಗಿರುತ್ತವೆ.
ಡಿ. 14ರಂದು ಮತ ಎಣಿಕೆ
ಮಂಗಳೂರಿನ ಪಾಂಡೇಶ್ವರದ ರೊಸಾರಿಯೋ ಪದವಿ ಪೂರ್ವ ಕಾಲೇಜಿ ನಲ್ಲಿ ಡಿ. 14ರಂದು ಮತ ಎಣಿಕೆಯ ನಡೆಯಲಿದೆ.
ದ.ಕ.ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ,(ಚುನಾವಣಾಧಿಕಾರಿ) ಮತನಾಡಿ ವಿಧಾನ ಪರಿಷತ್ತಿಗೆ ದ.ಕ ,ಉಡುಪಿ ಸ್ಥಳೀಯಾಡಳಿತ ಕ್ಷೇತ್ರದ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲಾ ಮಾಸ್ಟರಿಂಗ್ ಡಿಮಾಸ್ಟರಿಂಗ್ ಅಯಾಯ ತಾಲೂಕುಗಳಲ್ಲಿ ನಡೆಸಲಾಗಿ ನಾಳೆ ನಡೆಯುವ ಚುನಾವಣೆ ಶಾಂತಿಯುತವಾಗಿ ನಡೆಯಲು ಎಲ್ಕಾ ಸಿದ್ಧತೆಗಳನ್ನು ಕೈಗೊಂಡಿದ್ದೇವೆ.
ಮಂಗಳೂರು ತಹಶೀಲ್ದಾರರಾದ ಗುರು ಪ್ರಸಾದ್ ಮಾತನಾಡಿ …. ಈಗಾಗಲೇ ಮಂಗಳೂರು ತಾಲೂಕಿನಲ್ಲಿ ವಿಧಾನ ಪರಿಷತ್ ಚುನಾವಣೆಯನ್ನು ಯಶಸ್ವಿ ಯಾಗಿ ನಡೆಸಲು ಅದಕ್ಕೆ ಪೂರಕವಾಗಿ ಮಾಸ್ಟರಿಂಗ್,ಡಿ ಮಾಸ್ಟರಿಂಗ್ ನಡೆಸಲಾಗುತ್ತಿದೆ. ಶಾಂತಿಯುತವಾಗಿ ಮತದಾನ ನಡೆಸಲು ಎಲ್ಲಾ ಸಿದ್ದತೆ ಯನ್ನು ಮಂಗಳೂರಿನಲ್ಲಿಕೈಗೊಳ್ಳಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post