ಮಂಗಳೂರು: ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ರಾಜನ್ ಚಿನ್ನತಂಬಿ ಹಾಗೂ ಆತನ ಸ್ನೇಹಿತ ಬಿ.ಪಿ ಪ್ರಮೋದ್ ಬಂಧಿತ ಆರೋಪಿಗಳಾಗಿದ್ದಾರೆ.
ನ. 22 ರಂದು ಹೆಚ್ ಪಿಸಿಎಲ್ ಪ್ಲಾಂಟ್ ಬಳಿಯ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ರಾಜನ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಕುಳಾಯಿ, ಕಾನ, ಹೊಸಬೆಟ್ಟು, ಕಡಬೊಂಡಿ ಪ್ರದೇಶಗಳಲ್ಲಿ 2021 ರಲ್ಲಿ ಮನೆ ಕಳವು ಪ್ರಕರಣಗಳಲ್ಲಿ ನಾಲ್ಕು ಪ್ರಕರಣಗಳ ಚಿನ್ನದ ಒಡವೆಗಳನ್ನು ಕಳವು ಮಾಡಿದ ಬಗ್ಗೆ ಮಾಹಿತಿ ಆತ ನೀಡಿದ್ದ. ಆತನನ್ನು ದಸ್ತಗಿರಿ ಮಾಡಿ ಬೆಂಗಳೂರಿನ ಚಂದಾಪುರದ ಕೀರ್ತಿ ಲೇಔಟಿನ ಬಿ. ಪಿ ಪ್ರಮೋದ್ ಎಂಬವನಿಗೆ ಸೇರಿದ ಲಕ್ಷ್ಮೀ ಕೇರಳ ಮೆಸ್ ನ ರೂಮಿನಲ್ಲಿ ಬಚ್ಚಿಟ್ಟಿದ್ದ ಚಿನ್ನದ ಒಡವೆಗಳನ್ನು ಸ್ವಾಧೀನ ಪಡಿಸಿ ಪ್ರಮೋದ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ರಾಜನ್ ಕಳವು ಮಾಡಿ ತಂದಿರುವ ಚಿನ್ನದ ಒಡವೆಗಳ ಪೈಕಿ ಮಣಪುರಂ ಪೈನಾನ್ಸ್ ನಲ್ಲಿ ಅಡಮಾನ ಇರಿಸಿದ್ದ ಚಿನ್ನದ ಒಡವೆಗಳನ್ನು ಪೊಲೀಸರು ಸ್ವಾಧೀನ ಪಡಿಸಿದ್ದು, ಅಲ್ಲದೆ ರಾಜನ್ ನ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ತೆಲ್ಲುಗುಮ್ ಪಾಳಯಂ ಎಂಬಲ್ಲಿನ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನದ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳಿಂದ ಒಟ್ಟು 16,50,000 ರೂ. ಮೌಲ್ಯದ 366.632 ಗ್ರಾಂ ಚಿನ್ನದ ಚಿನ್ನದ ಒಡವೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post