• About us
  • Contact us
  • Disclaimer
Saturday, June 20, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹಾಗೂ ಕುತ್ತಿಗೆ ಸರ ಹೊರ ತೆಗೆದ ವೆನ್ಲಾಕ್ ಆಸ್ಪತ್ರೆಯ ವೈದ್ಯರು !

Coastal Times by Coastal Times
February 10, 2025
in ಕರಾವಳಿ
ಮಂಗಳೂರು: ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹಾಗೂ ಕುತ್ತಿಗೆ ಸರ ಹೊರ ತೆಗೆದ ವೆನ್ಲಾಕ್ ಆಸ್ಪತ್ರೆಯ ವೈದ್ಯರು !
108
VIEWS
WhatsappTelegramShare on FacebookShare on Twitter

ಮಂಗಳೂರು: ಹನ್ನೆರಡರ ಹರೆಯದ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನಗರಿಯನ್ನು ನಗರದ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವ ಮೂಲಕ ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ಸಾಂ ಮೂಲದ ಬಾಲಕ ಕಮಲ್ ಹಸನ್(12) ಇದೀಗ ಸಕಾಲದಲ್ಲಿ ದೊರೆತ ಚಿಕಿತ್ಸೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಎರಡು ಗಂಟೆಗಳ ಶಸ್ತ್ರಚಿಕಿತ್ಸೆ: ಅಸ್ಸಾಂ ಮೂಲದ ಬಾಲಕ ಕಮಲ್‌ ಹುಸೇನ್‌(12)ನ ಹೆತ್ತವರು ಮಡಿಕೇರಿಯ ಮನೆಯಲ್ಲಿ ಕಾರ್ಮಿಕ ರಾಗಿದ್ದರು. ಅವರು ಶನಿವಾರ ತೋಟ ದಲ್ಲಿ ಕೆಲಸ ಮಾಡುತ್ತಿದ್ದಾಗ ಬಾಲಕ ಪಕ್ಕದಲ್ಲಿ ಆಟವಾಡುತ್ತಿದ್ದ. ಈ ವೇಳೆ ತೆಂಗಿನ ಮರದ ಗರಿ ಬಾಲಕನ ಮೇಲೆ ಬಿದ್ದಿದೆ. ಅದರ ಒಂದು ಭಾಗ ಬಾಲಕನ ಕುತ್ತಿಗೆಯ ಮೂಲಕ ಎದೆಯ ಒಳಗಡೆ ಪ್ರವೇಶಿಸಿದೆ. ಈ ವೇಳೆ ಬಾಲಕನ ಕೊರಳಲ್ಲಿದ್ದ ಚೈನ್‌ ಕೂಡ ಕೊಂಬೆಗೆ ಸುತ್ತಿ ಒಳಗೆ ಸೇರಿದೆ. ಕೂಡಲೇ ಆತನನ್ನು ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದುದರಿಂದ ಮಂಗಳೂರಿಗೆ ಕರೆತರಲಾಯಿತು.

ಫೆ.8ರಂದು ಸಂಜೆ ಸುಮಾರು 7.30ಕ್ಕೆ ಘಟನೆ ನಡೆದಿದ್ದು, ರಾತ್ರಿ 12.15ಕ್ಕೆ ವೆನ್ಲಾಕ್‌ ತಲುಪಿದ್ದರು. ರಾತ್ರಿ 1.30ರಿಂದ 3.30ರ ವರೆಗೆ ಡಾ| ಸುರೇಶ್‌ ಪೈ ಅವರ ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ಬಾಲಕ ಮಾತನಾಡುತ್ತಿದ್ದು, ಚೇತರಿಸುತ್ತಿದ್ದಾನೆ. “ತೆಂಗಿನ ಗರಿ ಬಿದ್ದು ಬಾಲಕನ ಕುತ್ತಿಗೆಯಿಂದ ನುಗ್ಗಿ ಎದೆಯ ಒಳಗಡೆ ಹೋಗಿತ್ತು. ಅದೃಷ್ಟವಶಾತ್‌ ಎದೆಯ ಒಳಗಿನ ಯಾವುದೇ ಭಾಗಕ್ಕೆ ಗಾಯಗಳಾಗಿರ ಲಿಲ್ಲ. ಬಾಲಕನಿಗೆ ರಕ್ತಸ್ರಾವ ಆಗುತ್ತಿರ ಲಿಲ್ಲ. ರಕ್ತನಾಳ, ನರ, ಶ್ವಾಸಕೋಶ, ಹೃದಯಕ್ಕೆ ತೊಂದರೆಯಾಗದ ರೀತಿಯಲ್ಲಿ ತೆಂಗಿನ ಮರದ ಗರಿಯ ತುಂಡನ್ನು ಯಶಸ್ವಿಯಾಗಿ ತೆಗೆದಿದ್ದೇವೆ. ಬಾಲಕ ಚೇತರಿಸುತ್ತಿದ್ದು, ಕೆಲವು ವಾರಗಳ ವಿಶ್ರಾಂತಿ ಅಗತ್ಯವಿದೆ’ ಎಂದು ತಿಳಿಸಿದ್ದಾರೆ.

ಬಾಲಕನ ಕುಟುಂಬ ಸದಸ್ಯ ತಸರ್‌ ಅಲಿ ಪ್ರತಿಕ್ರಿಯಿಸಿ, “ಬಾಲಕ ಆಡುತ್ತಿದ್ದಾಗ ಘಟನೆ ಸಂಭವಿಸಿದೆ. ಮೂರು ವರ್ಷಗಳಿಂದ ಮಡಿಕೇರಿ ಬಳಿ ಕೆಲಸ ನಿರ್ವಹಿಸುತ್ತಿದ್ದೇವೆ. ಈ ಘಟನೆ ಸಂಭವಿಸಿದ ಕೂಡಲೇ ಮನೆ ಮಾಲಕರ ವಾಹನದಲ್ಲೇ ಮಡಿಕೇರಿ ಆಸ್ಪತ್ರೆಗೆ ಕೊಂಡೊಯ್ದೆವು. ಹೆಚ್ಚಿನ ಚಿಕಿತ್ಸೆಗೆ ಆ್ಯಂಬುಲೆನ್ಸ್‌ ಮೂಲಕ ಮಂಗಳೂರಿಗೆ ಕರೆಬಂದೆವು. ಇಲ್ಲಿನ ವೈದ್ಯರು ಉತ್ತಮವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದ್ದಾರೆ.

ವೆನ್ಲಾಕ್‌ ಆಸ್ಪತ್ರೆಯ ಅಧೀಕ್ಷಕ ಡಾ| ಶಿವಪ್ರಕಾಶ್‌ ಡಿ.ಎಸ್‌. ಮಾತನಾಡಿ, ಇದೊಂದು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾ ಗಿತ್ತು. ರೋಗಿ ಬಂದ ಕೂಡಲೇ ತ್ವರಿತವಾಗಿ ಸ್ಪಂದಿಸಿದೆವು. ವೆನ್ಲಾಕ್‌ನ ಸೂಪರ್‌ ಸ್ಪೆಷಾಲಿಟಿ ವಿಭಾಗದಲ್ಲಿ ಕಾರ್ಡಿಯೋಥೊರಾಸಿಕ್‌ ಮತ್ತು ವ್ಯಾಸ್ಕ್ಯಾಲರ್‌ ಸರ್ಜರಿ (ಸಿಟಿವಿಎಸ್‌) ವಿಭಾಗದ ವೈದ್ಯರಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ಹೇಳಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಕ್ಯಾಸಿನೋ ಹೂಡಿಕೆಯ ನೆಪದಲ್ಲಿ 25.5 ಕೋಟಿ ರೂಪಾಯಿ ವಂಚನೆ, ಉಡುಪಿ ಮೂಲದ ಕುಟುಂಬದ ಮೇಲೆ ಕೇಸು

Next Post

ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತ ಪತ್ನಿ ;ಗಂಡನ ಜಿಮ್‌ ಸೆಂಟರ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ, ಜಿಮ್​ ಧ್ವಂಸ

Related Posts

ಮಂಗಳೂರು: ಎಂಬ್ರೇಯರ್ ಲೆಗಸಿ 650 (Embraer Legacy 650) ಖಾಸಗಿ ವಿಮಾನ ಖರೀದಿಸಿದ ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿ
ಕರಾವಳಿ

ಮಂಗಳೂರು: ಎಂಬ್ರೇಯರ್ ಲೆಗಸಿ 650 (Embraer Legacy 650) ಖಾಸಗಿ ವಿಮಾನ ಖರೀದಿಸಿದ ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿ

June 19, 2026
102
ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ.
ಕರಾವಳಿ

ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ.

June 18, 2026
20
Next Post
ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತ ಪತ್ನಿ ;ಗಂಡನ ಜಿಮ್‌ ಸೆಂಟರ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ, ಜಿಮ್​ ಧ್ವಂಸ

ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತ ಪತ್ನಿ ;ಗಂಡನ ಜಿಮ್‌ ಸೆಂಟರ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ, ಜಿಮ್​ ಧ್ವಂಸ

Discussion about this post

Recent News

ಬೆಂಗಳೂರು: ಪೊಲೀಸ್ ID Card ತೋರಿಸಿ ಕೇರಳದ ಉದ್ಯಮಿಗಳಿಂದ 20 ಲಕ್ಷ ರೂ ದರೋಡೆ! CID ಇನ್ಸ್ ಪೆಕ್ಟರ್ ಪರಾರಿ, ತೀವ್ರ ಹುಡುಕಾಟ

ಬೆಂಗಳೂರು: ಪೊಲೀಸ್ ID Card ತೋರಿಸಿ ಕೇರಳದ ಉದ್ಯಮಿಗಳಿಂದ 20 ಲಕ್ಷ ರೂ ದರೋಡೆ! CID ಇನ್ಸ್ ಪೆಕ್ಟರ್ ಪರಾರಿ, ತೀವ್ರ ಹುಡುಕಾಟ

June 20, 2026
28
ಮಂಗಳೂರು: ಎಂಬ್ರೇಯರ್ ಲೆಗಸಿ 650 (Embraer Legacy 650) ಖಾಸಗಿ ವಿಮಾನ ಖರೀದಿಸಿದ ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿ

ಮಂಗಳೂರು: ಎಂಬ್ರೇಯರ್ ಲೆಗಸಿ 650 (Embraer Legacy 650) ಖಾಸಗಿ ವಿಮಾನ ಖರೀದಿಸಿದ ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿ

June 19, 2026
102
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಂಗಳೂರು: ಪೊಲೀಸ್ ID Card ತೋರಿಸಿ ಕೇರಳದ ಉದ್ಯಮಿಗಳಿಂದ 20 ಲಕ್ಷ ರೂ ದರೋಡೆ! CID ಇನ್ಸ್ ಪೆಕ್ಟರ್ ಪರಾರಿ, ತೀವ್ರ ಹುಡುಕಾಟ

ಬೆಂಗಳೂರು: ಪೊಲೀಸ್ ID Card ತೋರಿಸಿ ಕೇರಳದ ಉದ್ಯಮಿಗಳಿಂದ 20 ಲಕ್ಷ ರೂ ದರೋಡೆ! CID ಇನ್ಸ್ ಪೆಕ್ಟರ್ ಪರಾರಿ, ತೀವ್ರ ಹುಡುಕಾಟ

June 20, 2026
ಮಂಗಳೂರು: ಎಂಬ್ರೇಯರ್ ಲೆಗಸಿ 650 (Embraer Legacy 650) ಖಾಸಗಿ ವಿಮಾನ ಖರೀದಿಸಿದ ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿ

ಮಂಗಳೂರು: ಎಂಬ್ರೇಯರ್ ಲೆಗಸಿ 650 (Embraer Legacy 650) ಖಾಸಗಿ ವಿಮಾನ ಖರೀದಿಸಿದ ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿ

June 19, 2026
ಕೇಂದ್ರ ಸರ್ಕಾರ ಟೆಲಿಗ್ರಾಮ್ ಮೇಲೆ ವಿಧಿಸಿರುವ ತಾತ್ಕಾಲಿಕ ನಿಷೇಧ; ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಕೇಂದ್ರ ಸರ್ಕಾರ ಟೆಲಿಗ್ರಾಮ್ ಮೇಲೆ ವಿಧಿಸಿರುವ ತಾತ್ಕಾಲಿಕ ನಿಷೇಧ; ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

June 19, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d