• About us
  • Contact us
  • Disclaimer
Sunday, February 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಗೇರುಹಣ್ಣಿನಲ್ಲಿ ವೈನ್ ತಯಾರಿಸಿ ಪೇಟೆಂಟ್‌ ಪಡೆದ ಎನ್​ಐಟಿಕೆ ಪ್ರೊಫೆಸರ್ ಪ್ರಸನ್ನ ಬಿ.ಡಿ.

Coastal Times by Coastal Times
May 10, 2022
in ಕರಾವಳಿ
ಮಂಗಳೂರು: ಗೇರುಹಣ್ಣಿನಲ್ಲಿ ವೈನ್ ತಯಾರಿಸಿ ಪೇಟೆಂಟ್‌ ಪಡೆದ ಎನ್​ಐಟಿಕೆ ಪ್ರೊಫೆಸರ್ ಪ್ರಸನ್ನ ಬಿ.ಡಿ.
50
VIEWS
WhatsappTelegramShare on FacebookShare on Twitter

ಮಂಗಳೂರು: ಮಾರುಕಟ್ಟೆಗಳಲ್ಲಿ ವಿವಿಧ ಹಣ್ಣುಗಳಿಂದ ಮಾಡಿದ ವೈನ್​ಗಳು ದೊರೆಯುತ್ತದೆ. ಆದರೆ ಗೇರು ಹಣ್ಣಿನ ವೈನ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸಾಮಾನ್ಯವಾಗಿ ಮರದಿಂದ ಗೇರುಹಣ್ಣು ಕೊಯ್ದು ಗೋಡಂಬಿಯನ್ನು ಮಾತ್ರ ಚೀಲಕ್ಕೆ ತುಂಬಿ ಹಣ್ಣನ್ನು ಬಿಸಾಡಲಾಗುತ್ತದೆ. ಹೀಗೆ ವ್ಯರ್ಥವಾಗುವ ಹಣ್ಣಿನಿಂದಲೇ ಮಂಗಳೂರಿನ ಪ್ರೊಫೆಸರ್ ಒಬ್ಬರು ವೈನ್ ತಯಾರಿಸಿ ಯಶಸ್ವಿಯಾಗಿದ್ದಾರೆ. ಎನ್​ಐಟಿಕೆ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಪ್ರಸನ್ನ ಬಿ.ಡಿ. ಅವರು ಗೇರುಹಣ್ಣಿನಿಂದ ವೈನ್ ತಯಾರಿಸಿ ಯಶಸ್ವಿಯಾಗಿದ್ದಾರೆ. 2010ರಲ್ಲಿಯೇ ಇವರು ವೈನ್ ತಯಾರಿಸಿ ಯಶ ಕಂಡಿದ್ದರು. ಆದರೆ ಇದೀಗಷ್ಟೆ ಭಾರತೀಯ ಪೇಟೆಂಟ್ ದೊರೆತಿದೆ. ಉಳಿದ ಹಣ್ಣಿನಿಂದ ಮಾಡುವ ವೈನ್​ಗಿಂತಲೂ ಗೇರು ಹಣ್ಣಿನಲ್ಲಿ ಮಾಡುವ ವೈನ್​ಗೆ ಸವಾಲುಗಳು ಜಾಸ್ತಿ. ಗೇರು ಹಣ್ಣಿನಿಂದ ಮಾಡುವ ಮದ್ಯದಲ್ಲಿರುವ ವಾಸನೆ, ಬಣ್ಣದಿಂದಾಗಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಇದಕ್ಕಾಗಿ ಈ ಪ್ರೊಫೆಸರ್ ವಿಶೇಷ ಪ್ರಯತ್ನ ಮಾಡಿ ಇದರ ವಾಸನೆ, ಬಣ್ಣವನ್ನು ಮಾರ್ಪಾಡು ಮಾಡುವಲ್ಲಿ ಸಫಲರಾಗಿದ್ದಾರೆ.

ಗೇರುಹಣ್ಣಿನ ಮದ್ಯವನ್ನು ಗೋವಾದಲ್ಲಿ ತಯಾರಿಸಲಾಗುತ್ತಿದ್ದರೂ ಉಳಿದೆಡೆ ಲಭ್ಯವಿಲ್ಲ. ಗೋವಾದಲ್ಲಿ ಗೇರುಹಣ್ಣನ್ನು ಕೊಳೆಸಿ ಮದ್ಯ ತಯಾರಿಕೆ ಮಾಡಲಾಗುತ್ತದೆ. ಆದರೆ ಇದರಿಂದ ವೈನ್ ತಯಾರಿಸುತ್ತಿರುವುದು ಇದೇ ಮೊದಲು. ಈ ವೈನ್​ನಲ್ಲಿ ಗೇರು ಹಣ್ಣಿನ ಮದ್ಯದಂತೆ ಕಿಕ್ ಇಲ್ಲ. ಇದರ ಆಲ್ಕೊಹಾಲ್ ಪ್ರಮಾಣವನ್ನು ಶೇಕಡಾ 8 ರಿಂದ 15 ಶೇಕಡಾದವರೆಗೆ ಇಳಿಸಲಾಗಿದೆ. ಗ್ಲಾಸ್​ಗೆ ವೈನ್ ಸುರಿದಾಗ ಹಿತವಾದ ಪರಿಮಳ ಬಂದರೆ, ಕುಡಿದಾಗ ಹುಳಿ, ಸಿಹಿ ಹಾಗೂ ಒಗರುಮಿಶ್ರಿತ ರುಚಿಯಿರುವಂತೆ ಮಾಡಲಾಗಿದೆ. ಗೇರುಹಣ್ಣಿನ ವೈನನ್ನು ಗುಣಮಟ್ಟದ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾಗಿದೆ. 500 ಲೀಟರ್‌ ಸಾಮರ್ಥ್ಯ ಇರುವ ಪ್ಲಾಂಟ್​ನಲ್ಲಿ ವೈನ್ ತಯಾರಿಸಿ ಅದಕ್ಕೆ ತಗುಲುವ ಖರ್ಚು ವೆಚ್ಚಗಳು ಮತ್ತು ಯಾವ ರೀತಿಯಲ್ಲಿ ತಯಾರು ಮಾಡಬಹುದು ಎಂದು ಪ್ರಯೋಗ ಮಾಡಲಾಗಿದೆ. 2010ರಲ್ಲಿಯೇ ಇವರು ವೈನ್ ತಯಾರಿಸುವ ಸಂಶೋಧನೆ ಆರಂಭಿಸಿ ಯಶಸ್ವಿಯಾಗಿದ್ದು 2012 ರಲ್ಲಿ ಪೇಟೆಂಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಇದಕ್ಕೆ ಪೇಟೆಂಟ್ ದೊರೆತಿದೆ. ಪೇಟೆಂಟ್​ ಅನ್ನು ಎನ್​ಐಟಿಕೆಗೆ ನೀಡಲು ನಿರ್ಧರಿಸಲಾಗಿದ್ದು, ಅವರ ಮೂಲಕ ವೈನ್ ತಯಾರಕರಿಗೆ ಸಿಗಲಿದೆ. ಮದ್ಯ ತಯಾರಿಕರ ಮೂಲಕ ಹೊಸ ರುಚಿಯ ಗೇರುಹಣ್ಣಿನ ವೈನ್ ಮಾರುಕಟ್ಟೆಗೆ ಲಭ್ಯವಾಗಲಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಪಂಜಾಬ್: ಮೊಹಾಲಿಯ ಗುಪ್ತಚರ ಇಲಾಖೆ ಕಚೇರಿ ಮೇಲೆ ರಾಕೆಟ್​ ಲಾಂಚರ್​ನಿಂದ ದಾಳಿ ಶಂಕೆ; ಗಾಜುಗಳು ಪುಡಿಪುಡಿ

Next Post

ತುಮಕೂರು: ವಿದ್ಯುತ್ ಸ್ಪರ್ಶಿಸಿ ಜೂನಿಯರ್ ರವಿಚಂದ್ರನ್ ಸಾವು..

Related Posts

ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು
ಕರಾವಳಿ

ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು

February 5, 2026
20
ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಜೀವ ರಕ್ಷಣೆಗೆ ‘ಬೋಟ್ ಆಂಬ್ಯುಲೆನ್ಸ್’ ಉಳ್ಳಾಲದ ಮೀನುಗಾರರ ಹೊಸ ಪ್ರಯತ್ನ
ಕರಾವಳಿ

ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಜೀವ ರಕ್ಷಣೆಗೆ ‘ಬೋಟ್ ಆಂಬ್ಯುಲೆನ್ಸ್’ ಉಳ್ಳಾಲದ ಮೀನುಗಾರರ ಹೊಸ ಪ್ರಯತ್ನ

February 4, 2026
39
Next Post
ತುಮಕೂರು: ವಿದ್ಯುತ್ ಸ್ಪರ್ಶಿಸಿ ಜೂನಿಯರ್ ರವಿಚಂದ್ರನ್ ಸಾವು..

ತುಮಕೂರು: ವಿದ್ಯುತ್ ಸ್ಪರ್ಶಿಸಿ ಜೂನಿಯರ್ ರವಿಚಂದ್ರನ್ ಸಾವು..

Discussion about this post

Recent News

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

February 8, 2026
37
ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

February 6, 2026
84
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

February 8, 2026
ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

February 6, 2026
ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು

ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು

February 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d