ಮಂಗಳೂರು, ಜು.9: ಟ್ರೇಡಿಂಗ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದ ಯುವತಿಯು ಬಳಿಕ 6.42 ಲಕ್ಷ ರೂ. ಕಳೆದು ಕೊಂಡಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಯುವತಿ:- ತಾನು ಮಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಡೆವಲಪರ್ ಆಗಿ ಕೆಲಸ ಮಾಡಿಕೊಂಡಿರುವೆ. ಇತ್ತೀಚೆಗೆ ಪರಿಚಯದ ವ್ಯಕ್ತಿಯೊಬ್ಬರು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ಬಿಜಿ ಟ್ರೇಡಿಂಗ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ 100 ದಿನದಲ್ಲಿ ಡಬಲ್ ಆಗುವುದಾಗಿ ತಿಳಿಸಿದ್ದರು. ಅದರಂತೆ ತಾನು ಆ್ಯಪ್ ಡೌನ್‌ಲೋಡ್ ಮಾಡಿ ಅಕೌಂಟ್ ಕ್ರಿಯೇಟ್ ಮಾಡಿದ್ದೆ. ಹಾಗೇ ಫೆ.28ರಿಂದ ಎ.11ರವರೆಗೆ ಹಂತ ಹಂತವಾಗಿ 6,42,000 ರೂ.ವನ್ನು ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವೆ. ನಂತರ ಆ ಆ್ಯಪ್ ಬಂದ್ ಆಗಿರುವುದು ಕಂಡು ಬಂತು.
ಈ ಬಗ್ಗೆ ಪರಿಚಯದ ವ್ಯಕ್ತಿಯ ಬಳಿ ಕೇಳಿದಾಗ ಅವರೂ ಕೂಡ ಹಣ ಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ತಿಳಿಯಿತು. ಯಾರೋ ಅಪರಿಚಿತ ವ್ಯಕ್ತಿ ಆನ್‌ಲೈನ್ ಮೂಲಕ ನಕಲಿ ಟ್ರೆಡಿಂಗ್ ಆ್ಯಪ್ ಸೃಷ್ಟಿಸಿ ಮೋಸದಿಂದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.


Discover more from Coastal Times Kannada
Subscribe to get the latest posts sent to your email.







Discussion about this post