ಮುಂಬೈ: ಬಾಲಿವುಡ್ ನಟ ರಣ್ವೀರ್ ಸಿಂಗ್ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಮೇಲಿಂದ ಮೇಲೆ ತಮ್ಮ ಫೋಟೋಗಳನ್ನು ಅವರು ಶೇರ್ ಮಾಡುತ್ತಿರುತ್ತಾರೆ. ಇದೀಗ ತಾವು ಬಾಸ್ಕೆಟ್ ಬಾಲ್ ಆಡುತ್ತಿರುವ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ಇದು ಹಲವು ಯುವತಿಯರ ತಲೆ ಕೆಡಸಿದೆ.
ಈ ಫೋಟೋಗೆ ಹುಡುಗಿಯರೇ ಸಿಕ್ಕಾಪಟ್ಟೆ ಕಮೆಂಟ್ ಮಾಡಿದ್ದು, ಈ ಫೋಟೋ ನೋಡಿ ನಮ್ಮ ನಿದ್ದೆ ಹೋಗಿದೆ, ನೀವು ನಮ್ಮ ನಿದ್ದೆ ಕಸಿದುಕೊಂಡಿರುವಿರಿ ಇತ್ಯಾದಿಯಾಗಿ ಹೇಳಿದ್ದಾರೆ.
ಅಷ್ಟಕ್ಕೂ ಅಂಥದ್ದೇನಿದೆ ಈ ಫೋಟೋದಲ್ಲಿ ಎಂದರೆ, ಇದರಲ್ಲಿ ರಣವೀರ್ ಅವರು ಷರ್ಟ್ ಧರಿಸಲಿಲ್ಲ. ಆದ್ದರಿಂದ ಅವರ ಸಿಕ್ಸ್‌ಪ್ಯಾಕ್ ದೇಹ ಎದ್ದು ಕಾಣುತ್ತಿದೆ. ಬಾಸ್ಕೆಟ್ ಬಾಲ್ ಅನ್ನು ನೆಟ್‌ನಲ್ಲಿ ಹಾಕುವ ಫೋಟೋ ಇದಾಗಿದ್ದು, ಅವರು ನೆಟ್‌ನಲ್ಲಿ ಹಾಕಲು ಕೈಯನ್ನು ಮೇಲಕ್ಕೆ ಎತ್ತಿರುವ ಕಾರಣ, ಸಿಕ್ಸ್‌ಪ್ಯಾಕ್ ಇನ್ನೂ ಎದ್ದು ಹುಡುಗಿಯರ ಕಣ್ಣಿಗೆ ರಾಚಿದೆ. ಹೀಗೆ ಕಾಣಲಿ ಎಂದೇ ಈ ಫೋಟೋ ಅನ್ನು ಅವರು ಶೇರ್ ಮಾಡಿಕೊಂಡಿದ್ದಾರೆ ಎನ್ನಲೂಬಹುದು.
ಫೋಟೋದಲ್ಲಿ ಬಿಸಿಲಿಗೆ ಅವರ ಮೈ ಬೆವತಿರುವುದನ್ನೂ ಕಾಣಬಹುದು. ಬ್ಲೂ ಕಲರ್ ಶಾರ್ಟ್ಸ್ ಹಾಗೂ ವೈಟ್ ಕಲರ್ ಶೂ ಧರಿಸಿ ಈ ಪೋಸ್ ನೀಡಿದ್ದಾರೆ. ನಿಮ್ಮ ಬೆವರು ಕೂಡ ನಮಗೆ ಇಷ್ಟವಾಗಿದೆ ಎಂದು ಕೆಲವು ಯುವತಿಯರು ಕಮೆಂಟ್ ಮಾಡಿದ್ದಾರೆ!
ಸದ್ಯ ಈ ಫೋಟೋ ಸಕತ್ ವೈರಲ್ ಆಗಿದೆ. 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥಾ ಹಂದರ ಹೊಂದಿರುವ ‘83’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸುತ್ತಿದ್ದಾರೆ.ಈ ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಕಪಿಲ್‍ದೇವ್ ಪತ್ನಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.
https://www.instagram.com/p/CUzrJLQI1HP/?utm_source=ig_web_copy_link
Discover more from Coastal Times Kannada
Subscribe to get the latest posts sent to your email.
Discussion about this post