ಮಂಗಳೂರು: ಮಂಗಳೂರು ನಗರ ಹೊರವಲಯದ ಉಳ್ಳಾಲ ಸೋಮೇಶ್ವರ ಮೂಡ ಲೇಔಟ್ ನಲ್ಲಿ ಜಿಲ್ಲಾಡಳಿತ ನಿರ್ದೇಶನ ಮೇರೆಗೆ ಅಕ್ರಮ ಮರಳುಗಾರಿಕೆ ತಡೆಗೆ ಹಾಕಲಾಗಿದ್ದ ಸಿಸಿ ಕ್ಯಾಮರಾಕ್ಕೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತುಂಬಿನಾಡ್ ಮೂಲದ ದಿಶಾಂತ್ (21) ಮತ್ತು ರಕ್ಷಿತ್ (32) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಸೋಮೇಶ್ವರದಲ್ಲಿ ಮರಳು ಸಾಗಾಟ ಮಾಡುವ ಉದ್ದೇಶದಿಂದ ಸಿಸಿ ಕ್ಯಾಮರಾ ಕ್ಕೆ ಹಾನಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಸುಕಿನ ಜಾವ 2.25 ರ ಸುಮಾರಿಗೆ KA19z 7354 ವ್ಯಾಗನಾರ್ ಕಾರಿನಲ್ಲಿ ಬಂದಿದ್ದ ಈ ಇಬ್ಬರು ಕಿಡಿಗೇಡಿಗಳು ಸಿಸಿ ಕ್ಯಾಮೆರಾಕ್ಕೆ ಹಾನಿ ಮಾಡುವ ದೃಶ್ಯಾವಳಿಗಳು ಸೆರೆಯಾಗಿದ್ದವು. ಅಕ್ರಮ ಮರಳು ಸಾಗಾಟ ತಡೆಯುವುದಕ್ಕಾಗಿ ದ.ಕ. ಜಿಲ್ಲಾಡಳಿತ ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸದಂತೆ ಕಣ್ಗಾವಲಿಗೆ ಸಿಸಿ ಕ್ಯಾಮರಾ ಅಳವಡಿಸಿತ್ತು.
Discover more from Coastal Times Kannada
Subscribe to get the latest posts sent to your email.








Discussion about this post