ಬೆಂಗಳೂರು: ರಾಶ್ ಡ್ರೈವಿಂಗ್ ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್ ಜೊತೆಗೆ ಮಾಜಿ ಸಚಿವ ಹಾಗೂ ಮಹದೇವಪುರದ ಬಿಜಿಪಿ ಶಾಸಕ ಅರವಿಂದ ಲಿಂಬಾವಳಿಯವರ ಪುತ್ರಿ ಮಾತಿನ ಚಕಮಕಿ ನಡೆಸಿರುವ ಘಟನೆ ಗುರುವಾರ ನಡೆದಿದೆ. ಗುರುವಾರ ಸಂಜೆ 4 ಗಂಟೆ ಸುಮಾರಿಗೆ ವಿಧಾನಸೌಧದ ಕಡೆಯಿಂದ ಬಿಎಂಡಬ್ಲ್ಯೂ ಕಾರಿನಲ್ಲಿ ವೇಗವಾಗಿ ಶಾಸಕನ ಪುತ್ರಿ ಬಂದಿದ್ದಾಳೆ. ಈ ವೇಳೆ ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ಕಾರನ್ನು ತಡೆದಿದ್ದಾರೆ.
ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ಶಾಸಕನ ಪುತ್ರಿ, ಪೊಲೀಸರ ಮೇಲೆ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಬಳಿಕ ಪೊಲೀಸರು ಅಸಭ್ಯವಾಗಿ ಮಾತನಾಡದಂತೆ ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವಾಹನವನ್ನು ಓವರ್ ಟೇಕ್ ಮಾಡಿದ್ದಕ್ಕೇಕೆ ದಂಡ ವಿಧಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಶಾಸಕರ ಕಾರಿನಲ್ಲಿ ಪ್ರಯಾಣಿಸುತ್ತಿದ್ದೀರಿ. ಶಾಸಕರು ಯಾರೆಂಬುದನ್ನು ತಿಳಿಸುವಂತೆ ಕೇಳಿದ್ದಾರೆ. ಅರವಿಂದ ಲಿಂಬಾವಳಿ ಹೆಸರನ್ನು ಕೇಳಿದ್ದೀರಾ? ನಾನು ಅವರ ಮಗಳು ಎಂದು ಹೇಳಿದ್ದಾರೆ.
ಇದೇ ವೇಳೆ ಸಮಾಧಾನ ಮಾಡಲು ಬಂದ ಸ್ನೇಹಿತರ ಮೇಲೂ ಕೂಗಾಡಿದ್ದಾರೆ. ಘಟನೆಯ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ಪತ್ರಕರ್ತನ ಮೇಲೂ ಕೆಂಡಾಮಂಡಲಗೊಂಡಿದ್ದಾರೆ. ಘಟನೆಯ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ಪತ್ರಕರ್ತನನ್ನೂ ನಿಂದಿಸಿ, ಹೊಡೆಯಲು ಹೋಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಳಿಕ ಪೊಲೀಸರು ಶಾಸನಕ ಪುತ್ರಿಗೆ ದಂಡ ವಿಧಿಸಿದ್ದು, ಬಳಿಕ ಶಾಸಕನ ಪುತ್ರಿ ಸ್ನೇಹಿತರು ದಂಡದ ಹಣ ಕಟ್ಟಿದ ಬಳಿಕ ಕಾರು ಬಿಟ್ಟು ಕಳುಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post