ಬೆಂಗಳೂರು: ದೇಶದ ಆಡಿಯೊ ಮಾರುಕಟ್ಟೆಗೆ ನೂತನ ಮಾದರಿಯ ‘ನಥಿಂಗ್ ಇಯರ್ 1’ ಇಯರ್‌ಬಡ್ಸ್ ಬಿಡುಗಡೆಯಾಗಿದೆ. ಬಳಕೆದಾರರಿಗೆ ಸುಲಲಿತ ಮತ್ತು ಪ್ರೀಮಿಯಂ ಅನುಭವವನ್ನು ನಥಿಂಗ್ ಇಯರ್ 1 ನೀಡಲಿದೆ.
ಪಾರದರ್ಶಕ ವಿನ್ಯಾಸ, 34 ಗಂಟೆಗಳ ಬ್ಯಾಟರಿ ಬಾಳಿಕೆಯ ಕೇಸ್, 11.6 ಎಂಎಂ ಡ್ರೈವರ್ ಮತ್ತು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವೈಶಿಷ್ಟ್ಯ ಹೊಂದಿದೆ. ದೇಶದಲ್ಲಿ ನಥಿಂಗ್ ಇಯರ್ 1 ಬೆಲೆ ₹5,999 ಇದೆ.
ಇಯರ್ 1, ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವ್ಯವಸ್ಥೆ ಹೊಂದಿದ್ದು, ಮೂರು ಹೈ ಡೆಫಿನೇಷನ್ ಮೈಕ್‌ಗಳನ್ನು ಒಳಗೊಂಡಿದೆ. ಇದು ನಿಮಗೆ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಸ್ಪಷ್ಟವಾಗಿ ತಲುಪಿಸುತ್ತದೆ.
ಇಯರ್ 1 ಇಯರ್‌ಫೋನ್ಸ್, 5.7 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಜತೆಗೆ, ಕೇಸ್ ಅನ್ನು 10 ನಿಮಿಷ ಮಾಡಿದರೆ 8 ಗಂಟೆಗಳ ಬ್ಯಾಟರಿ ನೀಡುತ್ತದೆ.
https://twitter.com/nothing/status/1420013687058796546?s=20
Discover more from Coastal Times Kannada
Subscribe to get the latest posts sent to your email.
Discussion about this post