ಸುಬ್ರಹ್ಮಣ್ಯ: ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಶಿಕ್ಷಕ ಗುರುರಾಜ್ ವಿರುದ್ಧ ಬುಧವಾರ ಸುಬ್ರಹ್ಮಣ್ಯದ ಎಸ್.ಎಸ್ ಪಿ ಯು ಕಾಲೇಜು ಆವರಣದಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದವರು ನೇತೃತ್ವ ವಹಿಸಿದ್ದರು.
‘ಈ ಶಿಕ್ಷಕ ಈ ಸಂಸ್ಥೆಗೆ ಬರಬಾರದು. ನಮ್ಮ ಮೈದಾನಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ. ಆಡಳಿತ ಮಂಡಳಿ ಈಗಾಗಲೇ ಅಮಾನತು ಮಾಡಿದ್ದಾಗಿ ಗೊತ್ತಾಗಿದೆ. ಆದರೆ ಅವನು ಮತ್ತೆ ಆ ವೃತ್ತಿಯಲ್ಲಿ ಇಲ್ಲಿ ಇರಬಾರದು’ ಎಂದು ರಾಜೇಶ್ ಎನ್.ಎಸ್ ಹೇಳಿದರು.
‘ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಂಶಯ ವ್ಯಕ್ತಪಡಿಸುವ ಕಾಲ ಬಂದಿದೆ. ಮೂರೇ ದಿವಸದಲ್ಲಿ ಆರೋಪಿ ಹೊರ ಬಂದಿರುವ ವಿಚಾರ ದಿಗ್ಭ್ರಮೆ ಮೂಡಿಸಿದೆ’ ಎಂದು ಸುಧೀರ್ ಶೆಟ್ಟಿ ಮಾತನಾಡಿದರು.