ಮಂಗಳೂರು, ಆ. 11 : ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಿಲ್ಲಾಡಳಿತ ಮುಂದಾಗಿರುವ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ನಡೆಯುವ ಹಬ್ಬಗಳಿಗೆ ಕೆಲವು ನಿಯಮಗಳನ್ನು ದ.ಕ. ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದಾರೆ. ಅದರಂತೆ ಗಣೇಶೋತ್ಸವ ಹಾಗೂ ನಾಗರ ಪಂಚಮಿ ಆಚರಣೆಗೆ ಕೆಲವು ನಿಬಂಧನೆಗಳನ್ನು ವಿಧಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.
ಗಣೇಶೋತ್ಸವಕ್ಕೆ ಜಾರಿಗೊಳಿಸಿರುವ ನಿಯಮಗಳು ಇಲ್ಲಿವೆ.
ಸಾರ್ವಜನಿಕ ಜಾಗದಲ್ಲಿ ಗಣಪತಿ ಇಡಬಾರದು
ರಾಜ್ಯ ಸರ್ಕಾರದಿಂದ ಕಾಲ ಕಾಲಕ್ಕೆ ಗೈಡ್‌ಲೈನ್ಸ್ ಬರುತ್ತದೆ
ಚಪ್ಪರ, ಶಾಮಿಯಾನ ಹಾಕಿ ಗಣಪತಿ ಇಡಲು ಅವಕಾಶ ಕೊಡದೇ ಇರಲು ನಿರ್ಧಾರ
ಈ ಕುರಿತು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ
ಈ ಕುರಿತು ಜನಪ್ರತಿನಿಧಿಗಳ ಸಭೆ ಕರೆದು ಬಳಿಕ ತೀರ್ಮಾನ
ಗುಂಪು ಸೇರಿ ಆಚರಣೆಗೆ ಅವಕಾಶ ಇಲ್ಲ
ಸರಳವಾಗಿ ಚೌತಿ ಹಬ್ಬ ನಡೆಸಲು ಅವಕಾಶ
ನಾಗರಪಂಚಮಿ ಆಚರಣೆಯ ನಿಯಮಾವಳಿಗಳು;
ಕುಟುಂಬದ ನಾಗಬನಗಳಲ್ಲಿ ಆಚರಣೆಗೆ ಅವಕಾಶ ಇದೆ
ಆದರೆ ಸಾಮೂಹಿಕವಾಗಿ ಗುಂಪು ಸೇರುವುದು ನಿಶೇಧ
ಸ್ಥಳೀಯ ಪಿಡಿಒ, ಅಧಿಕಾರಿಗಳು ನಿಗಾ ಇಡಲು ಸೂಚನೆ
ದೇಗುಲಗಳಲ್ಲಿ ಸಾಮೂಹಿಕ ಆಚರಣೆ ನಿರ್ಬಂಧ
ದೇಗುಲದಲ್ಲಿ ಅರ್ಚಕರು, ಸೀಮಿತ ಸಿಬ್ಬಂದಿ ಸಾಂಪ್ರದಾಯಿಕವಾಗಿ ಆಚರಣೆ
ಆಚರಣೆ ನೆಪದಲ್ಲಿ ನೆರರಾಜ್ಯ ಪ್ರವೇಶ ಅವಕಾಶ ಇಲ್ಲ
ಪತ್ರಕರ್ತರ ಸಂವಾದದಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸ್ಪಷ್ಟನೆ