ಆಂಧ್ರ ಪ್ರದೇಶ : ಯೂಟ್ಯೂಬ್ ವ್ಲಾಗರ್ ಅರ್ಮಾನ್ ಮಲಿಕ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹೊಸ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು ಈ ಫೋಟೋಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಕಂಟೆಂಟ್ ಕ್ರಿಯೇಟರ್ ಇತ್ತೀಚೆಗೆ ತನ್ನ ಇಬ್ಬರು ಪತ್ನಿಯರೊಂದಿಗೆ ಫೋಟೋ ಆಲ್ಬಮ್ ಅನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಇಬ್ಬರೂ ಗರ್ಭಿಣಿಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಫೋಟೋದಲ್ಲಿ ಅರ್ಮಾನ್ ತನ್ನ ಪತ್ನಿಯರಾದ ಕೃತಿಕಾ ಮತ್ತು ಪಾಯಲ್ ಅವರೊಂದಿಗೆ ಕಿತ್ತಳೆ ಬಣ್ಣದ ಶರ್ಟ್ ಧರಿಸಿದ್ದಾರೆ. ಇನ್ನು ಇಬ್ಬರು ಪತ್ನಿಯರು ಬೇಬಿ ಬಂಪ್ ಪೋಸ್ ನೀಡಿದ್ದಾರೆ. ಆದರೆ ಇದು ಯಾಕೆ ನೆಟ್ಟಿಗರಿಗೆ ರುಚಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಅರ್ಮಾನ್ ಮಲಿಕ್ ನನ್ನು ಟ್ರೋಲ್ ಮಾಡುತ್ತಿದ್ದಾರೆ.


ಇದಕ್ಕೆ ನೆಟ್ಟಿಗನೊಬ್ಬ ನನಗೆ ಈ ಫೋಟೋ ನೋಡಿ ಫುಲ್ ಶಾಕ್ ಆಗಿದೆ. ಇಬ್ಬರು ಹೇಗೆ ಒಂದೇ ಬಾರಿ ಹೇಗೆ ಪ್ರಗ್ನೆಂಟ್ ಆಗಲು ಸಾಧ್ಯ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೀನು ಕ್ರಿಕೆಟ್ ತಂಡವನ್ನು ರೆಡಿ ಮಾಡುತ್ತಿದ್ದೀಯ ಎಂದು ಕೇಳಿದ್ದಾರೆ. ಆಂಧ್ರ ಪ್ರದೇಶ ಮೂಲದ ಅರ್ಮಾನ್ ಮಲಿಕ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಇನ್ಸ್ಟಾಗ್ರಾಮ್ನಲ್ಲಿ 1.5 ಮಿಲಿಯನ್ ಹಾಗು ಯೂಟ್ಯೂಬ್ನಲ್ಲಿ 2 ಮಿಲಿಯನ್ ಫಾಲೋರ್ಸ್ ಹೊಂದಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post